ಟೀಂ ಇಂಡಿಯಾ 
ಕ್ರಿಕೆಟ್

T20 World Cup: ಸೆಮಿಫೈನಲ್ ಗೆ ಹೋಗಲು ಕೊಹ್ಲಿ ಮುಂದೆ 2 ಸವಾಲು; ಪವಾಡ ನಡೆಯಬೇಕು!

ಟಿ20 ವಿಶ್ವಕಪ್‌ನಲ್ಲಿ ಭಾರತ ಇಂದು ಸಂಜೆ 7:30ಕ್ಕೆ ಅಫ್ಘಾನಿಸ್ತಾನ ವಿರುದ್ಧ 3ನೇ ಪಂದ್ಯ ಆಡಲಿದೆ. ಟೂರ್ನಿಯಿಂದ ಹೊರ ಬೀಳುವ ಭೀತಿ ಕೊಹ್ಲಿ ಪಡೆಯನ್ನು ತೀವ್ರವಾಗಿ ಕಾಡುತ್ತಿದೆ. ಸೆಮಿಫೈನಲ್‌ಗೆ ತಲುಪುವ ಸಣ್ಣ ಆಸೆ ಜೀವಂತವಾಗಿರಿಸಿಕೊಳ್ಳಲು ಭಾರತ ಈ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕಾಗಿದೆ.

ಅಬುಧಾಬಿ: ಟಿ20 ವಿಶ್ವಕಪ್‌ನಲ್ಲಿ ಭಾರತ ಇಂದು ಸಂಜೆ 7:30ಕ್ಕೆ ಅಫ್ಘಾನಿಸ್ತಾನ ವಿರುದ್ಧ 3ನೇ ಪಂದ್ಯ ಆಡಲಿದೆ. ಟೂರ್ನಿಯಿಂದ ಹೊರ ಬೀಳುವ ಭೀತಿ ಕೊಹ್ಲಿ ಪಡೆಯನ್ನು ತೀವ್ರವಾಗಿ ಕಾಡುತ್ತಿದೆ. ಸೆಮಿಫೈನಲ್‌ಗೆ ತಲುಪುವ ಸಣ್ಣ ಆಸೆ ಜೀವಂತವಾಗಿರಿಸಿಕೊಳ್ಳಲು ಭಾರತ ಈ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕಾಗಿದೆ.

ಟಾಸ್ ದೊಡ್ಡ ಪರಿಣಾಮ ಬೀರಿದೆ:
ಈ ಬಾರಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟಾಸ್ ತುಂಬಾನೇ ಮಹತ್ವ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ಮಾತ್ರ ಎರಡೂ ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ. ಟಾಸ್ ಕೈಕೊಟ್ಟಿದ್ದರಿಂದ ಕೊಹ್ಲಿ ಪಡೆಗೆ ಹಿನ್ನಡೆಯಾಗಲು ಕಾರಣವಾಗಿದೆ. ಇಬ್ಬನಿಯಿಂದಾಗಿ ಭಾರತ ಎರಡೂ ಬಾರಿ ಕಡಿಮೆ ರನ್ ಗಳಿಸಿ ಪಂದ್ಯ ಕಳೆದುಕೊಂಡಿದೆ.

ಪವಾಡ ನಡೆದರೆ ಭಾರತ ಸೆಮಿಫೈನಲ್ ಗೆ!
ಟೀಮ್ ಇಂಡಿಯಾ ಮುಂದೆ 2 ಕಠಿಣ ಷರತ್ತುಗಳು ಇವೆ. ಈ ಎರಡೂ ಷರತ್ತು ಪೂರ್ಣಗೊಂಡ್ರೆ ಮಾತ್ರ ಭಾರತ ಸೆಮಿಫೈನಲ್ ಬಗ್ಗೆ ಕನಸು ಕಾಣಬಹುದು. ಮೊದಲ ಷರತ್ತು ಏನೆಂದರೆ ಇವತ್ತು ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದುಕೊಳ್ಳಬೇಕು. ಎರಡನೇ ಕಂಡಿಷನ್ ಏನೆಂದ್ರೆ, ಅಫ್ಘಾನಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಬೇಕು. ಇದಲ್ಲದೆ, ಭಾರತ ತನ್ನ ಕೊನೆಯ ಎರಡು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು. ಆ ಗೆಲುವುಗಳು ಹೇಗಿರಬೇಕೆಂದ್ರೆ ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನೆಟ್ ರನ್ ರೇಟ್ ಗಿಂತ ಅಧಿಕವಾಗಿರಬೇಕು. ಈ ರೀತಿ ಗೆದ್ದಾಗ ಮಾತ್ರ ಭಾರತ ಸೆಮಿಫೈನಲ್ ಗೆ ಹಾರಬಹುದಾಗಿದೆ. ಇದರಲ್ಲಿ ಯಾವುದು ಒಂದು ಷರತ್ತು ಯಡವಟ್ಟಾದ್ರೂ ಭಾರತ, ತವರಿಗೆ ಬರಿಗೈಯಲ್ಲಿ ವಾಪಸ್ಸಾಗಬೇಕಿದೆ.

ರೋಹಿತ್ ಮತ್ತೆ ಮಾಡ್ತಾರಾ ಓಪನಿಂಗ್?
ರೋಹಿತ್ ಶರ್ಮಾ ಓಪನರ್ ಆಗಿ ಮತ್ತೆ ಕ್ರೀಜ್ ಗೆ ಇಳಿಯಬಹುದು. ಇದೇ ವೇಳೆ ಕೆ ಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಇನ್ನೂ ಸೂರ್ಯಕುಮಾರ್ ಯಾದವ್ ಫಿಟ್ನೆಸ್ ಬಗ್ಗೆ ಇನ್ನೂ ಯಾವುದೇ ಅಪ್ಡೇಟ್ ಇಲ್ಲ.

ಪಿಚ್ ಮತ್ತು ಪರಿಸ್ಥಿತಿಗಳು:
ಅಬುಧಾಬಿ ಪಿಚ್ ನಲ್ಲಿ ವಿಶೇಷವಾಗಿ 8 ಪಂದ್ಯಗಳ ಪೈಕಿ 6ರಲ್ಲಿ ಗುರಿಬೆನ್ನಟ್ಟಿದ ತಂಡಗಳು ಗೆಲುವು ಸಾಧಿಸಿವೆ. ಹೀಗಾಗಿ ಟಾಸ್ ಗೆದ್ದರೆ ಫೀಲ್ಡಿಂಗ್ ಮಾಡುವುದು ಲಾಭದಾಯಕ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT