ಕ್ರಿಕೆಟ್

ಟಿ20 ವಿಶ್ವಕಪ್: ಆಫ್ಘಾನಿಸ್ತಾನ ವಿರುದ್ಧ ಆರ್ಭಟ, ಹಾಲಿ ಟೂರ್ನಿಯಲ್ಲಿ ಗರಿಷ್ಛ ರನ್ ದಾಖಲೆ ಬರೆದ ಭಾರತ

Srinivasamurthy VN

ಅಬುದಾಬಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಆಫ್ಧಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಹಾಲಿ ಟೂರ್ನಿಯಲ್ಲಿ ಗರಿಷ್ಠ ರನ್ ಗಳ ದಾಖಲೆ ನಿರ್ಮಾಣ ಮಾಡಿದೆ.

ಹೌದು.. ಇಂದು ಅಬುದಾಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಫ್ಗನ್ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬ್ಯಾಟ್ಸಮನ್ ಗಳು ನಿಗದಿತ 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ ಬರೊಬ್ಬರಿ 210 ರನ್ ಗಳನ್ನು ಕಲೆ ಹಾಕಿದರು. 

ಟೀಂ ಇಂಡಿಯಾ ದಾಖಲಿಸಿದ ಈ 210 ರನ್ ಗಳ ಸ್ಕೋರ್ ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ತಂಡವೊಂದರ ಗರಿಷ್ಠ ರನ್ ಗಳಿಕೆಯಾಗಿದೆ.  ಈ ಹಿಂದೆ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಇದೇ ಆಫ್ಗಾನಿಸ್ತಾನ ತಂಡ ಸಿಡಿಸಿದ್ದ 190 ರನ್ ಗಳು ಈವರೆಗೂ ಗರಿಷ್ಠ ಸ್ಕೋರ್ ಆಗಿ ದಾಖಲಾಗಿತ್ತು. 

ಆದರೆ ಇಂದು ಅದೇ ಅಫ್ಘಾನಿಸ್ತಾನದ ವಿರುದ್ಧ ಭಾರತ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿ ಅದನ್ನು 2ನೇ ಸ್ಥಾನಕ್ಕೆ ತಳ್ಳಿದೆ. ಅಬುದಾಬಿಯಲ್ಲಿ ನಡೆದ ಪಾಕಿಸ್ತಾನ ವರ್ಸಸ್ ನಮೀಬಿಯಾ ಪಂದ್ಯ ಮೂರನೇ ಸ್ಥಾನದಲ್ಲಿದ್ದು, ಆ ಪಂದ್ಯದಲ್ಲಿ ಪಾಕಿಸ್ತಾನ 189 ರನ್ ಗಳಿಸಿತ್ತು. ಅಲ್ ಅಮೆರಾಟ್ ನಲ್ಲಿ ನಡೆದ ಬಾಂಗ್ಲಾದೇಶ ಮತ್ತು ಪಪುವಾ ನ್ಯೂಗಿನಿಯಾ ನಡುವಿನ ಪಂದ್ಯ ನಾಲ್ಕನೇ ಸ್ಥಾನದಲ್ಲಿದ್ದು ಆ ಪಂದ್ಯದಲ್ಲಿ ಬಾಂಗ್ಲಾದೇಶ 181ರನ್ ಪೇರಿಸಿತ್ತು. 

SCROLL FOR NEXT