ಮೊಹಮ್ಮದ್ ಸಿರಾಜ್ 
ಕ್ರಿಕೆಟ್

ಕೈಗೆ ಗಾಯವಾದರೂ ಬಿಡದೇ ಬೌಲಿಂಗ್; ಮೊಹಮದ್ ಸಿರಾಜ್‌ಗೆ ಚಪ್ಪಾಳೆಯ ಗೌರವ! ವಿಡಿಯೋ ವೈರಲ್

ನ್ಯೂಜಿಲೆಂಡ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಜೈಪುರದಲ್ಲಿ ನಡೆದ ಈ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಜೈಪುರ:  ನ್ಯೂಜಿಲೆಂಡ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಜೈಪುರದಲ್ಲಿ ನಡೆದ ಈ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ನ್ಯೂಜಿಲೆಂಡ್ ಆರಂಭಿಕ ಇನ್ನಿಂಗ್ಸ್ ನಲ್ಲಿ ಮೊಹಮ್ಮದ್ ಸಿರಾಜ್ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಸಿರಾಜ್ ಗೆ ಚೆಂಡು ಬಡಿದು ಎಡಗೈನಿಂದ ರಕ್ತ ಸೋರಲು ಪ್ರಾರಂಭಿಸಿತು.

ಅಲ್ಲದೆ, ಮೈದಾನದಲ್ಲಿ ಮೊಹಮ್ಮದ್ ನೋವಿನಿಂದ ನರಳುತ್ತಿರುವುದು ಕಂಡುಬಂತು. ಕೂಡಲೇ ಫಿಸಿಯೋ ಮೈದಾನಕ್ಕೆ ಆಗಮಿಸಿ ಚಿಕಿತ್ಸೆ ನೀಡಿದರು. ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಈ ಘಟನೆಯ ನಡೆಯಿತು.

ನಂತರ ಸಿರಾಜ್ ಮತ್ತೆ ಬೌಲಿಂಗ್ ಮಾಡಲು ಬಂದರು. ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು ಸಿರಾಜ್ ಬೌಲಿಂಗ್ ಮಾಡುತ್ತಿರುವುದನ್ನು ಕಂಡ ಗ್ರೌಂಡ್ ನಲ್ಲಿದ್ದ ಅಭಿಮಾನಿಗಳು, ಚಪ್ಪಾಳೆಯೊಂದಿಗೆ ಪ್ರೋತ್ಸಾಹ ನೀಡಿದರು.

ಇದರಿಂದ ಉತ್ತೇಜನಗೊಂಡ ಮೊಹಮ್ಮದ್ ಸಿರಾಜ್, ಐದನೇ ಎಸೆತದಲ್ಲಿ ನ್ಯೂಜಿಲೆಂಡ್ ಬ್ಯಾಟ್ಸಮನ್ ರಚಿನ್ ರವೀಂದ್ರ ಅವರ ವಿಕೆಟ್ ಕೂಡ ಪಡೆದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

B-52 Bomber Bursts: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ವಿಮಾನ ಅಪಘಾತ, ಬಿ-52 ಬಾಂಬರ್ ಪತನ, 8 ಮಂದಿ ಸಾವು! Video

ಪರಿಷತ್‌ ಚುನಾವಣೆ: ಕಾಂಗ್ರೆಸ್ ಗೆ ಕ್ರಾಸ್ ವೋಟಿಂಗ್ ಆತಂಕ; ರೆಸಾರ್ಟ್‌ಗೆ ಶಾಸಕರ ಶಿಫ್ಟ್, ಅಲ್ಲೇ ಸಿಎಲ್‌ಪಿ ಸಭೆ

NEET UG 2026: 'ಲೀಕ್' ತಡೆಯಲು ಮರು ಪರೀಕ್ಷೆ ಮುಗಿಯುವವರೆಗೆ ಟೆಲಿಗ್ರಾಮ್ ಆ್ಯಪ್ ನಿಷೇಧ; ಇಲ್ಲಿದೆ ಕಾರಣ

'ಆಸ್ತಿ ಘೋಷಿಸಲು ಕುಮಾರಸ್ವಾಮಿ ಸಿದ್ಧವೇ?: ಡಿಕೆ ಶಿವಕುಮಾರ್ ನಿಮ್ಮ ಇಡೀ ಕುಟುಂಬದ ಜಾತಕ ಬಿಚ್ಚಿಡಲಿದ್ದಾರೆ'

15 ಕೋಟಿ ರೂ. ಕೊಟ್ರೆ ದುಬೈ ಶೇಖ್ ಜೊತೆ ಮಲಗಬಹುದು! Influencer ಅಪೂರ್ವ ಮುಖಿಜಾ Video ಮತ್ತೆ ವೈರಲ್! ಏನಿದು ಹೊಸ ವಿವಾದ?

SCROLL FOR NEXT