ಟೀಂ ಇಂಡಿಯಾ 
ಕ್ರಿಕೆಟ್

ಭಾರತ-ನ್ಯೂಜಿಲೆಂಡ್ 2ನೇ ಟಿ20 ಪಂದ್ಯ ನಡೆಯೋದು ಡೌಟ್: ಹೈಕೋರ್ಟ್ ನಲ್ಲಿ ಅರ್ಜಿ

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದ ಮೇಲೆ ಕಾರ್ಮೋಡ ಕವಿದಿದೆ. 

ರಾಂಚಿ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದ ಮೇಲೆ ಕಾರ್ಮೋಡ ಕವಿದಿದೆ. 

ನವೆಂಬರ್ 19ರಂದು ಅಂದರೆ ನಾಳೆ ಶುಕ್ರವಾರ ರಾಂಚಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಮುಂದೂಡಬೇಕೆಂಬ ಆಗ್ರಹ ಕೇಳಿಬಂದಿದೆ. ಪಂದ್ಯವನ್ನು ಮುಂದೂಡುವಂತೆ ಅಥವಾ ಕ್ರೀಡಾಂಗಣದಲ್ಲಿ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕೆಂದು ಕೋರಿ ಜಾರ್ಖಂಡ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ನಾಳಿನ ಪಂದ್ಯದಲ್ಲಿ ಪ್ರೇಕ್ಷಕರಿಗೆ ಶೇಕಡಾ 100ರಷ್ಟು ಸೀಟುಗಳ ಭರ್ತಿಗೆ ವಿರೋಧಿಸಿ ವಕೀಲ ಧೀರಜ್ ಕುಮಾರ್ ಜಾರ್ಖಂಡ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 

ರಾಜ್ಯದ ದೇವಾಲಯಗಳು, ನ್ಯಾಯಾಲಯಗಳು ಮತ್ತು ಇತರ ಕಚೇರಿಗಳಲ್ಲಿ ಕರೊನಾದಿಂದಾಗಿ ಶೇಕಡಾ 50ರಷ್ಟು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯಾವ ನಿಯಮದ ಅಡಿಯಲ್ಲಿ ರಾಜ್ಯ ಸರ್ಕಾರವು ಶೇ.100 ರಷ್ಟು ಬಳಸಲು ಅನುಮತಿ ನೀಡಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ವಕೀಲರು, ನಾಳಿನ ಪಂದ್ಯವನ್ನು ಅಮಾನತುಗೊಳಿಸಬೇಕು. ಅಥವಾ ಕ್ರೀಡಾಂಗಣವನ್ನು ಶೇಕಡಾ 100 ರಷ್ಟು ಸಾಮರ್ಥ್ಯದಲ್ಲಿ ಬಳಸುವುದನ್ನು ನಿಷೇಧಿಸಬೇಕು ಎಂದು ಕೋರಿದ್ದಾರೆ. 

2 ದಿನಗಳ ಹಿಂದೆ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಕ್ರಿಕೆಟ್ ಪಂದ್ಯಕ್ಕಾಗಿ ಸ್ಟೇಡಿಯಂನ ಶೇಕಡಾ 50 ರಷ್ಟು ಸೀಟುಗಳನ್ನು ಮಾತ್ರ ಕಾಯ್ದಿರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು, ಆದರೆ ನಂತರ ಈ ನಿರ್ಧಾರವನ್ನು ಹಿಂಪಡೆದು ಸದ್ಯ ಆಯೋಜಕರಿಗೆ ಎಲ್ಲಾ ಆಸನಗಳನ್ನು ಒದಗಿಸಿರುವುದನ್ನು ವಿರೋಧಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

B-52 Bomber Bursts: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ವಿಮಾನ ಅಪಘಾತ, ಬಿ-52 ಬಾಂಬರ್ ಪತನ, 8 ಮಂದಿ ಸಾವು! Video

ಪರಿಷತ್‌ ಚುನಾವಣೆ: ಕಾಂಗ್ರೆಸ್ ಗೆ ಕ್ರಾಸ್ ವೋಟಿಂಗ್ ಆತಂಕ; ರೆಸಾರ್ಟ್‌ಗೆ ಶಾಸಕರ ಶಿಫ್ಟ್, ಅಲ್ಲೇ ಸಿಎಲ್‌ಪಿ ಸಭೆ

ರಾಜ್ಯದಲ್ಲಿ ಒಂದೆಡೆ ಮುಂಗಾರು ಕ್ಷೀಣದ ಭೀತಿ; ಇನ್ನೊಂದೆಡೆ ಕೃಷಿ ಸಚಿವರೇ ಇಲ್ಲದ ಅನಾಥ ಪರಿಸ್ಥಿತಿ! CM ಡಿಕೆಶಿ ವಿರುದ್ಧ ಅಶೋಕ್ ಕಿಡಿ!

NEET UG 2026: 'ಲೀಕ್' ತಡೆಯಲು ಮರು ಪರೀಕ್ಷೆ ಮುಗಿಯುವವರೆಗೆ ಟೆಲಿಗ್ರಾಮ್ ಆ್ಯಪ್ ನಿಷೇಧ; ಇಲ್ಲಿದೆ ಕಾರಣ

'ಆಸ್ತಿ ಘೋಷಿಸಲು ಕುಮಾರಸ್ವಾಮಿ ಸಿದ್ಧವೇ?: ಡಿಕೆ ಶಿವಕುಮಾರ್ ನಿಮ್ಮ ಇಡೀ ಕುಟುಂಬದ ಜಾತಕ ಬಿಚ್ಚಿಡಲಿದ್ದಾರೆ'

SCROLL FOR NEXT