ಕ್ರಿಕೆಟ್

65 ವರ್ಷಗಳಲ್ಲಿ ಇದೇ ಮೊದಲು: ಬೌಲರ್ ಗೆ ಆಸಿಸ್ ಕ್ರಿಕೆಟ್ ತಂಡದ ಸಾರಥ್ಯ, ಪ್ಯಾಟ್ ಕಮಿನ್ಸ್ ನಾಯಕತ್ವ, ಸ್ಮಿತ್ ಉಪನಾಯಕ

Srinivasamurthy VN

ಸಿಡ್ನಿ: ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿ ವೇಗಿ ಪ್ಯಾಟ್ ಕಮಿನ್ಸ್ ಆಯ್ಕೆಯಾಗಿದ್ದು, ಆ ಮೂಲಕ ಬರೊಬ್ಬರಿ 65 ವರ್ಷಗಳ ಬಳಿಕ ವೇಗಿಯೊಬ್ಬರು ಆಸ್ಟ್ರೇಲಿಯಾ ತಂಡದ ಸಾರಥ್ಯ ವಹಿಸಿದಂತಾಗಿದೆ.

ಹೌದು.. ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಗೂ ಮುನ್ನ ಸೆಕ್ಸ್ಟಿಂಗ್ ವಿವಾದದ ಮೂಲಕ ನಾಯಕತ್ವದಿಂದ ಕೆಳಗಿಳಿದಿದ್ದ ನಾಯಕ ಟಿಮ್ ಪೈನ್ ಬದಲಿಗೆ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್‌ ಆಸ್ಟ್ರೇಲಿಯಾದ ಟೆಸ್ಟ್‌ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅಂತೆಯೇ ಈ ಹಿಂದೆ ಬಾಲ್ ಟ್ಯಾಂಪರಿಂಗ್ ವಿವಾದದಿಂದಾಗಿ ನಾಯಕತ್ವ ಕಳೆದುಕೊಂಡಿದ್ದ ಸ್ವೀವನ್ ಸ್ಮಿತ್‌ರನ್ನು ಇದೀಗ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.

ಆಸ್ಟ್ರೇಲಿಯಾದ 47ನೇ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿರುವ ಪ್ಯಾಟ್ ಕಮಿನ್ಸ್‌ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ 65 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡವನ್ನು ವೇಗದ ಬೌಲರ್ ಒಬ್ಬರು ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. 

SCROLL FOR NEXT