ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್, 2ನೇ ದಿನ: ಭೋಜನ ವಿರಾಮದ ವೇಳೆಗೆ ಭಾರತ 339/8

ನ್ಯೂಜಿಲೆಂಡ್ ಬೌಲರ್ ಗಳ ಕಮ್ ಬ್ಯಾಕ್ ನಿಂದಾಗಿ ಭಾರತದ ಬೃಹತ್ ಮೊತ್ತ ಪೇರಿಸುವ ಕನಸು ಕಠಿಣವಾಗಿದ್ದು, 2ನೇ ದಿನ ಭೋಜನ ವಿರಾಮದ ವೇಳೆ ಭಾರತ 8 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ.

ಕಿವೀಸ್ ಬೌಲರ್ ಗಳ ಪಾರಮ್ಯ
Srinivasa Murthy VN
Updated On : 26 Nov 2021, 1:09 pm

ಕಾನ್ಪುರ: ನ್ಯೂಜಿಲೆಂಡ್ ಬೌಲರ್ ಗಳ ಕಮ್ ಬ್ಯಾಕ್ ನಿಂದಾಗಿ ಭಾರತದ ಬೃಹತ್ ಮೊತ್ತ ಪೇರಿಸುವ ಕನಸು ಕಠಿಣವಾಗಿದ್ದು, 2ನೇ ದಿನ ಭೋಜನ ವಿರಾಮದ ವೇಳೆ ಭಾರತ 8 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ.

ಇದನ್ನೂ ಓದಿ: ಭಾರತ- ನ್ಯೂಜಿಲ್ಯಾಂಡ್ ಟೆಸ್ಟ್ ಮೊದಲ ದಿನ: ಭಾರತದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 258; ಚೊಚ್ಚಲ ಪಂದ್ಯದಲ್ಲಿ ಐಯ್ಯರ್ ಅರ್ಧಶತಕ

ಮೊದಲ ದಿನದಾಟದ ಅಂತ್ಯಕ್ಕೆ ಕೇವಲ 4 ವಿಕೆಟ್ ನಷ್ಟಕ್ಕೆ 258ರನ್ ಗಳಿಸಿ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಆದರೆ 2ನೇ ದಿನದ ಆರಂಭಿಕ ಸೆಷನ್ ನಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳ ವಿರುದ್ಧ ಕಿವೀಸ್ ಬೌಲರ್ ಗಳು ಪಾರಮ್ಯ ಮೆರೆದರು. ಇಂದು ತಂಡ ಕೇವಲ 8 ರನ್ ಗಳಿಸುವಷ್ಟರಲ್ಲಿ ಜಡೇಜಾ ಅರ್ಧಶತಕ ಗಳಿಸಿ ಸೌಥಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು.

Advertisement

Advertisement

ಬಳಿಕ ವೃದ್ದಿಮಾನ್ ಸಹಾ ಅವರ  ಬೆನ್ನಲ್ಲೇ ಶತಕ ವೀರ ಶ್ರೇಯಸ್ ಅಯ್ಯರ್ ಕೂಡ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ತಂಡದ ಮೊತ್ತ 313ರನ್ ಗಳಾಗಿದ್ದಾಗ ಅಕ್ಸರ್ ಪಟೇಲ್ ಕೂಡ ಸೌಥಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: ಕಾನ್ಪುರ ಟೆಸ್ಟ್: ಮೈದಾನಕ್ಕೆ ಇಳಿದಿದ್ದ ಕನ್ನಡಿಗ, ಆದರೆ ಟೀಂ ಇಂಡಿಯಾ ಪರ ಆಡುವುದಕಲ್ಲ. ರಚಿನ್‌ ರವೀಂದ್ರ ಯಾರೀತಾ?

ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 339ರನ್ ಗಳಿಸಿದ್ದು, 38ರನ್ ಗಳಿಸಿರುವ ಆರ್ ಅಶ್ವಿನ್ ಹಾಗೂ 4ರನ್ ಗಳಿಸಿರುವ ಉಮೇಶ್ ಯಾದವ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಕಿವೀಸ್ ಪರ ಟಿಮ್ ಸೌಥಿ 5 ವಿಕೆಟ್ ಪಡೆದರೆ, ಜೇಮಿಸನ್ 3 ವಿಕೆಟ್ ಪಡೆದು ಮಿಂಚಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments