ಕ್ರಿಕೆಟ್

ಮೊದಲ ಟೆಸ್ಟ್ ಪಂದ್ಯ: ಭೋಜನ ವಿರಾಮದ ವೇಳೆಗೆ ನ್ಯೂಜಿಲೆಂಡ್ 197/2, ಕೊನೆಗೂ ವಿಕೆಟ್ ಪಡೆದ ಭಾರತ ಬೌಲರ್ ಗಳು

Srinivasamurthy VN

ಕಾನ್ಪುರ: ಭಾರತದ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭೋಜನ ವಿರಾಮದ ವೇಳೆಗೆ ನ್ಯೂಜಿಲೆಂಡ್ ತಂಡ 2 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿದೆ.

ನಿನ್ನೆ 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 129 ರನ್ ಗಳಿಸಿತ್ತು. ಆರಂಭಿಕ ಆಟಗಾರರಾದ ಟಾಮ್ ಲಥಾಮ್ (50 ರನ್) ಹಾಗೂ ವಿಲ್ ಯಂಗ್ (75 ರನ್) ಕಿವೀಸ್ ಗೆ ಅತ್ಯುತ್ತಮ ಆರಂಭ ಒದಗಿಸಿದರು. ಈ ಜೋಡಿ ಟೀಂ ಇಂಡಿಯಾ ಬೌಲರ್ ಗಳನ್ನು ದಂಡಿಸಿ ದಾಖಲೆಯ ಶತಕದ ಜೊತೆಯಾಟವಾಡಿದರು. ಆದರೆ ಇಂದು ಅದೇ ರೀತಿಯ ಆಟ ಮುಂದುವರೆಸವು ಕಿವೀಸ್ ಗೆ ಸಾಧ್ಯವಾಗಲಿಲ್ಲ. 89 ರನ್ ಗಳಿಸಿ ಶತಕದತ್ತ ದಾಪುಗಾಲಿರಿಸಿದ್ದ ವಿಲ್ ಯಂಗ್ ರನ್ನು ಆರ್ ಅಶ್ವಿನ್ ಔಟ್ ಮಾಡಿದರು. 

ಬಳಿಕ ಟಾಮ್ ಲಾಥಮ್ ರನ್ನು ಜೊತೆಗೂಡಿದ ನಾಯಕ ಕೇನ್ ವಿಲಿಯಮ್ಸನ್ 18 ರನ್ ಗಳಿಸಿ ಉಮೇಶ್ ಜಾದವ್ ಅವರ ಎಲ್ ಬಿ ಬಲೆಗೆ ಬಿದ್ದರು. ಈ ವೇಳೆ ಉಭಯ ಆಟಗಾರರು ಭೋಜನ ವಿರಾಮ ತೆಗೆದುಕೊಂಡರು.

SCROLL FOR NEXT