ಕ್ರಿಕೆಟ್

ಟಿ20 ವಿಶ್ವಕಪ್: ಸೂಪರ್ 12ರ ಘಟ್ಟಕ್ಕೆ ಅರ್ಹತೆ ಪಡೆದ ತಂಡಗಳು; ಟೂರ್ನಿಯ ವೇಳಾಪಟ್ಟಿ; ನಾಳೆ ಇಂಡೋ-ಪಾಕ್ ಪಂದ್ಯ!

Vishwanath S

ಯುಎಇ: ಕ್ವಾಲಿಫೈಯರ್ ಪಂದ್ಯಗಳು ಅಂತಿಮಗೊಂಡಿದ್ದು, ಇಂದಿನಿಂದ ಸೂಪರ್ 12ರ ಘಟ್ಟದ ಟಾಪ್ 12 ತಂಡಗಳು ಸೆಣಸಾಟ ನಡೆಸಲಿವೆ. 

ಬರೋಬ್ಬರಿ 5 ವರ್ಷಗಳ ಬಳಿಕ 6ನೇ ವಿಶ್ವಕಪ್ ಗೆ ಇಂದು ಚಾಲನೆ ಸಿಗುತ್ತಿದ್ದು ಸೂಪರ್ 12ರ ಘಟ್ಟದ ಮೊದಲ ಪಂದ್ಯವನ್ನು ಇಂದು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದ ಮಧ್ಯೆ ನಡೆಯಲಿದೆ.

ಹಾಗಾದ್ರೆ ಅರ್ಹತಾ ಸುತ್ತಿನಿಂದ ಬಂದ ತಂಡಗಳು ಯಾವುವು?
ಹ್ಯಾಟ್ರಿಕ್ ಗೆಲುವಿನೊಂದಿಗೆ ಶ್ರೀಲಂಕಾ ತಂಡ ಅರ್ಹತಾ ಸುತ್ತಿನಲ್ಲಿ ಟಾಪರ್ ಆಗಿ ಹೊರಹೊಮ್ಮಿದೆ. ಅಲ್ಲದೆ, ಸೂಪರ್ 12ರ ಗ್ರುಪ್ 1ರಲ್ಲಿ ತನ್ನ ಸ್ಥಾನವನ್ನು ಪಕ್ಕಾ ಮಾಡಿಕೊಂಡಿದೆ. ಇನ್ನೊಂದೆಡೆ ನಮೀಬಿಯಾ ತಂಡ ಐತಿಹಾಸವನ್ನು ರಚಿಸುವ ಮೂಲಕ 4 ಅಂಕಗಳೊಂದಿಗೆ ಗ್ರೂಪ್ 2ರಲ್ಲಿ ಅರ್ಹತೆ ಪಡೆದುಕೊಂಡಿದೆ. ಇನ್ನು ಸ್ಕಾಟ್ ಲೆಂಡ್ ಗ್ರೂಪ್ ಬಿ ನಲ್ಲಿ ಟಾಪರ್ ತಂಡವಾಗಿ ಸೂಪರ್ 12ರ ಘಟ್ಟಕ್ಕೆ ಆಯ್ಕಾಗಿದೆ. 6 ಅಂಕಗಳೊಂದಿಗೆ ಸ್ಕಾಟ್ ಲೆಂಡ್ 2ನೇ ಗುಂಪಿನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಮತ್ತೊಂದೆಡೆ 2ನೇ ತಂಡವಾಗಿ ಬಾಂಗ್ಲಾದೇಶ ಅರ್ಹತೆ ಪಡೆದುಕೊಂಡಿದೆ. ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ಗ್ರೂಪ್ 1 ರಲ್ಲಿ ಸ್ಥಾನ ಪಡೆದುಕೊಂಡಿದೆ.

ಟೂರ್ನಿಯ ವೇಳಾಪಟ್ಟಿ ಇಂತಿದೆ:                                                                                                                                

SCROLL FOR NEXT