ಕ್ರಿಕೆಟ್

ಟಿ20 ವಿಶ್ವಕಪ್: ಪಾಕ್ ವಿರುದ್ಧ ಕೊಹ್ಲಿಯ 'ವಿರಾಟ' ಪ್ರದರ್ಶನ, ಇಲ್ಲಿದೆ ದಾಖಲೆಗಳು!

Vishwanath S

ದುಬೈ: ಭಾರತ ಹಾಗೂ ಪಾಕ್ ಹೈ ವೋಲ್ಟೇಜ್ ಪಂದ್ಯದ ಮೇಲೆ ವಿಶ್ವವೇ ಕಣ್ಣಿಟ್ಟಿದೆ. ಸಂಜೆ ಆರಂಭವಾಗಲಿರುವ ಪಂದ್ಯದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಏಕೆಂದರೆ ಬಾಬರ್ ಕಂಪನಿ ವಿರುದ್ಧ ವಿರಾಟ್ ಕೊಹ್ಲಿಯ ಪ್ರಬಲ ದಾಖಲೆಗಳು.

ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಟಿ-20 ವಿಶ್ವಕಪ್ ನಲ್ಲಿ 3 ಪಂದ್ಯಗಳನ್ನು ಆಡಿದ್ದಾರೆ. ಆದರೆ ಎಂದಿಗೂ ಕೊಹ್ಲಿ ಔಟ್ ಆಗಿ ಗ್ರೌಂಡ್ ನಿಂದ ಹೊರಗೆ ಹೋಗಿಲ್ಲ. ಅಂದರೆ ಪಾಕಿಸ್ತಾನದ ಬೌಲರ್ ಗಳು ವಿರಾಟ್ ನನ್ನು ಔಟ್ ಮಾಡಲು ಮುೂರು ಪಂದ್ಯಗಳಲ್ಲಿ ಸಾಧ್ಯವಾಗಿಲ್ಲ. 

ಈ ಮಧ್ಯೆ ಟೀಮ್ ಇಂಡಿಯಾ ಕ್ಯಾಪ್ಟನ್ ಕಳೆದ 3 ಪಂದ್ಯಗಳಿಂದ 130 ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 3 ಇನ್ನಿಂಗ್ಸ್ ಆಡುವ ಮೂಲಕ ಒಟ್ಟು 169 ರನ್ ಗಳನ್ನು ಗಳಿಸಿದ್ದಾರೆ. ಅಲ್ಲದೆ 2 ಅರ್ಧ ಶತಕಗಳನ್ನು ಭಾರತೀಯ ನಾಯಕ ಪಾಕಿಸ್ತಾನದ ವಿರುದ್ಧ ಭಾರಿಸಿದ್ದಾರೆ.

ಕೇವಲ ಟಿ-20 ವಿಶ್ವಕಪ್ ಮಾತ್ರವಲ್ಲ, ಒಟ್ಟಾರೆಯಾಗಿ ಪಾಕಿಸ್ತಾನದ ವಿರುದ್ಧ 6 ಟಿ-20 ಪಂದ್ಯ ಆಡಿದ್ದಾರೆ. ಮತ್ತು 84.66 ಸರಾಸರಿಯಲ್ಲಿ 254 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ 6 ಇನ್ನಿಂಗ್ಸ್ ನಲ್ಲಿ ಮೂರು ಬಾರಿ 50+ ಸ್ಕೋರ್ ಮಾಡಿದ್ದಾರೆ. ಈ ಎಲ್ಲ ಅಂಕಿ ಅಂಶಗಳನ್ನು ನೋಡಿದ್ರೆ ವಿರಾಟ್ ಎಷ್ಟು ಆಕ್ರಮಣಕಾರಿ ಆಟಗಾರ ಅನ್ನೋದನ್ನು ಸ್ಪಷ್ಟಪಡಿಸುತ್ತದೆ.

SCROLL FOR NEXT