ಕ್ರಿಕೆಟ್

ಟಿ-20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಸೋಲು ಹಿನ್ನೆಲೆ ಕೊಹ್ಲಿ ಪಡೆಯಲ್ಲಿ ಬದಲಾವಣೆ?

Nagaraja AB

ಯುಎಇ: ವಿಶ್ವದ ಅತಿ ದೊಡ್ಡ ಟೂರ್ನಿಯಲ್ಲಿ ಭಾರತದ ಹೀನಾಯವಾಗಿ ಸೋತಿದೆ. ಕಳೆದ 30 ವರ್ಷಗಳಿಂದ ವಿಶ್ವಕಪ್ ಪಂದ್ಯಗಳಲ್ಲಿ ಪಾಕ್ ವಿರುದ್ಧ ಭಾರತ ಸೋತಿರಲಿಲ್ಲ. ಈ ಸೋಲು ಭಾರತೀಯರಿಗೆ ಮಾತ್ರ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಭಾರತ ತಂಡದ ಮುಂದಿನ ಪಂದ್ಯ ಅಕ್ಟೋಬರ್ 31ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಈ ಪಂದ್ಯ ಗೆಲ್ಲುವುದು ಟೀಮ್ ಇಂಡಿಯಾಕ್ಕೆ ಮುಖ್ಯವಾಗಿದೆ. ಏಕೆಂದರೆ ನ್ಯೂಜಿಲೆಂಡ್ ವಿರುದ್ಧ ಗೆದ್ದರೆ ಮಾತ್ರ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

ಪಾಕಿಸ್ತಾನ ವಿರುದ್ಧ ಸೋತ ಬಳಿಕ, ಭಾರತ ತಂಡದ 11 ಆಟಗಾರರ ಸ್ಥಾನಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ ಅಂತಾ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಆರಂಭಿಕ ಜೋಡಿಯಲ್ಲಿ ಬದಲಾವಣೆ? :ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಹಾಗೂ ಕೆ. ಎಲ್ . ರಾಹುಲ್ ಪಾಕಿಸ್ತಾನದ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ರೋಹಿತ್ ಖಾತೆ ತೆರೆಯಲಿಲ್ಲ. ರಾಹುಲ್ 8 ಎಸೆತಗಳಲ್ಲಿ ಕೇವಲ 3 ರನ್ ಗಳಿಸುವಲ್ಲಿ ಮಾತ್ರ ಶಕ್ತರಾದರು. ಇದರಿಂದಾಗಿ ಭಾರತ ತಂಡಕ್ಕೆ ದೊಡ್ಡ ಮಟ್ಟದ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಆದರೆ, ಈ ಇಬ್ಬರು ಆಟಗಾರರು ಅತ್ಯುದ್ಬುತ ಆಟಗಾರರು. ಯಾವುದೇ ಕ್ಷಣದಲ್ಲಿ ಎದುರಾಳಿ ಪಡೆ ವಿರುದ್ಧ ತಿರುಗಿ ಬೀಳುವರು. ಈ ಹಿನ್ನೆಲೆಯಲ್ಲಿ ಆರಂಭಿಕ ಜೋಡಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಸೂರ್ಯಕಾಂತ್ ಗೆ ಸಿಗಲ್ಲ ಕಿವೀಸ್ ವಿರುದ್ಧ ಚಾನ್ಸ್? ಪಾಕ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕಾಂತ್ ಯಾದವ್ ನಿರಾಶದಾಯಕ ಪ್ರದರ್ಶನ ನೀಡಿದರು. ಈ ಹಿನ್ನೆಲೆಯಲ್ಲಿ ಸೂರ್ಯಕಾಂತ್ ಬದಲಾಗಿ ಇಶಾನ್ ಕಿಶನ್ ಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಈಗಾಗಲೇ ಉತ್ತಮ ಫಾರ್ಮ್ ನಲ್ಲಿರುವ ಇಶಾನ್ ಕಿಶನ್ 4ನೇ ಸ್ಥಾನದಲ್ಲಿ ಆಡುವ ಸಾಧ್ಯತೆ ಇದೆ. ಇನ್ನು ಪಾಕ್ ವಿರುದ್ಧ ಉತ್ತಮ ರನ್ ಕಲೆ ಹಾಕಿದ ರಿಶಬ್ ಪಂತ್, ಐದನೇ ಸ್ಥಾನದಲ್ಲಿ ಆಡುವುದು ಖಚಿತವಾಗಿದೆ.

ಶಾರ್ದೂಲ್ ಠಾಕೂರ್ ಗೆ ಸಿಗುತ್ತಾ ಅವಕಾಶ? ಇನ್ನು ಭುಜದ ನೋವಿನಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಪಂದ್ಯದ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಅಲಭ್ಯರಾದರೆ ಶಾರ್ದೂಲ್ ಠಾಕೂರ್ 6ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ. ಈ ವೇಳೆ ಆಲ್ ರೌಂಡರ್ ಆಟಗಾರನಾಗಿರುವ ರವೀಂದ್ರ ಜಡೇಜಾ 7ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಪಾಕಿಸ್ತಾನ ಬ್ಯಾಟ್ಸಮನ್ ಗಳ ರನ್ ಲೂಟಿ; ಬದಲಾಗ್ತಾರಾ ಬೌಲರ್ಸ್?  ಹೌದು, ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಹೀನಾಯ ಸೋಲಿಗೆ ಮುಖ್ಯ ಕಾರಣ ಬೌಲರ್ಸ್. ಭಾರತದ ಬೌಲರ್ ಗಳಿಂದ ಪಾಕ್ ಬ್ಯಾಟ್ಸಮನ್ ಗಳು ರನ್ ಗಳನ್ನು ಲೂಟಿ ಮಾಡಿಬಿಟ್ಟರು. ಮೊಹಮ್ಮದ್ ಶಮಿ 3.5 ಓವರ್ ಗಳಲ್ಲಿ 43 ರನ್, ಭುವನೇಶ್ವರ್ ಕುಮಾರ್ 3 ಓವರ್ ಗಳಲ್ಲಿ 25 ರನ್ ಮತ್ತು ವರುಣ್ ಚಕ್ರವರ್ತಿ 4 ಓವರ್ ಗಳಲ್ಲಿ 33 ರನ್ ನೀಡಿದರು. ಭಾರತೀಯ ಬೌಲರ್ ಗಳು ಒಂದೇ ಒಂದು ವಿಕೆಟ್ ನ್ನು ತೆಗೆಯಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಬದಲಾಗಿ ಅನುಭವಿ ಸ್ಪಿನ್ ಆಟಗಾರ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಹಾಗಾದ್ರೆ ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಪಡೆ ಹೇಗಿರುತ್ತೆ? ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ರಿಷಬ್ ಪಂತ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ ಮತ್ತು ಜಸ್ಪ್ರೀತ್ ಬುಮ್ರಾ.

SCROLL FOR NEXT