ಬಾಬರ್ ಅಜಮ್ 
ಕ್ರಿಕೆಟ್

ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ ಬಾಬರ್!

ಟಿ-20 ವಿಶ್ವಕಪ್ 2021ರಲ್ಲಿ ಪಾಕಿಸ್ತಾನ ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿತು.

ದುಬೈ: ಟಿ-20 ವಿಶ್ವಕಪ್ 2021ರಲ್ಲಿ ಪಾಕಿಸ್ತಾನ ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿತು. ಇದರೊಂದಿಗೆ ಸೂಪರ್ 12ರ ಹಂತದಲ್ಲಿ ಬಾಬರ್ ನೇತೃತ್ವದ ಪಾಕಿಸ್ತಾನ ತಂಡ ಗೆಲುವಿನ ವಿಜಯ ಮುಂದುವರಿಸಿದೆ.

ಈ ಪಂದ್ಯದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಅವರು 51 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ವಿಶೇಷ ದಾಖಲೆ ಮಾಡಿದರು.

ಪಾಕಿಸ್ತಾನದ ಕ್ಯಾಪ್ಟನ್ ಈ ವಿಶೇಷ ದಾಖಲೆಗೆ ಅರ್ಹನಾಗಿದ್ದು ಹೇಗೆಂದರೆ, ವಿರಾಟ್ ಕೊಹ್ಲಿ ನಾಯಕನಾಗಿ ಸಾವಿರ ರನ್ ಪೂರೈಸಲು 30 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ, ಬಾಬರ್ ಕೇವಲ 26 ಇನ್ನಿಂಗ್ಸ್ ನಲ್ಲಿ ಸಾವಿರ ರನ್ ಗಳನ್ನು ಪೂರೈಸಿ ಈ ವಿಶೇಷ ದಾಖಲೆಗೆ ಅರ್ಹರಾಗಿದ್ದಾರೆ. ಅದೇ ರೀತಿ ಸೌತ್ ಆಫ್ರಿಕಾದ ಫಾಫ್ ಡು ಪ್ಲೆಸಿ(31), ಆಸ್ಟ್ರೇಲಿಯಾದ ಆರೋನ್ ಫಿಂಚ್(32) ಮತ್ತು ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್(36) ಈ ವಿಶೇಷ ದಾಖಲೆಯ ಪಟ್ಟಿಯಲ್ಲಿ ಟಾಪ್ 5ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನೊಂದೆಡೆ ಬಾಬರ್, ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 13ನೇ ಬಾರಿಗೆ 50+ ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿಯನ್ನು ಸರಿ ಗಟ್ಟಿದರು. ನಾಯಕನಾಗಿ ವಿರಾಟ್ ಕೊಹ್ಲಿ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ವರೆಗೆ 13 ಬಾರಿ ಅರ್ಧ ಶತಕ ಸಿಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್