ಕ್ರಿಕೆಟ್

ಟಿ20 ವಿಶ್ವಕಪ್ ಗೂ ಮುನ್ನ ಪಾಕ್ ನ ಮುಖ್ಯ ಕೋಚ್ ಮಿಸ್ಬಾ, ಬೌಲಿಂಗ್ ಕೋಚ್ ವಾಕರ್ ಯೂನಿಸ್ ರಾಜೀನಾಮೆ 

Srinivas Rao BV

ಕರಾಚಿ: ಅಚ್ಚರಿಯ ಬೆಳವಣಿಗೆಯಲ್ಲಿ ಪಾಕಿಸ್ತಾನದ ಮುಖ್ಯ ಕೋಚ್ ಮಿಸ್ಬಾ ಉಲ್-ಹಕ್ ಹಾಗೂ ಬೌಲಿಂಗ್ ಕೋಚ್ ವಾಕರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಟಿ20 ವಿಶ್ವಕಪ್ ಗೂ ಮುನ್ನ ಈ ರಾಜೀನಾಮೆ ಬೆಳವಣಿಗೆ ನಡೆದಿದೆ. ರಾಜೀನಾಮೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಖಚಿತಪಡಿಸಿದ್ದು, ಪಾಕ್ ನ ಮಾಜಿ ಕ್ರಿಕೆಟಿಗರಾದ ಸಾಕ್ಲಿನ್ ಮುಸ್ತಾಕ್ ಹಾಗೂ ಅಬ್ದುಲ್ ರಜಾಕ್ ಮಧ್ಯಂತರ ಕೋಚ್ ಗಳಾಗಿರಲಿದ್ದಾರೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ. 

ಸೆ.13 ರಂದು ಮಂಡಳಿಗೆ ರಮೀಜ್ ರಾಜ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಈ ದಿಢೀರ್ ಬೆಳವಣಿಗೆ ನಡೆದಿದೆ. 

ರಮೀಜ್ ರಾಜಾ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಕಾಮೆಂಟೇಟರ್ ಹಾಗೂ ವಿಶ್ಲೇಷಕರಾಗಿ ಪಾಕ್ ತಂಡಕ್ಕೆ ಮಿಸ್ಬಾ ಹಾಗೂ ವಾಕರ್ ಅತ್ಯುತ್ತಮ ಕೋಚ್ ಗಳೆಂದು ತಮಗೆ ಅನ್ನಿಸುವುದಿಲ್ಲ ಎಂದು ಹೇಳಿದ್ದರು. ಸೋಮವಾರ ಪ್ರಕಟಗೊಂಡ ವಿಶ್ವಕಪ್ ತಂಡದ ಆಯ್ಕೆಯಲ್ಲಿಯೂ ರಮೀಜ್ ರಾಜ ಅವರ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ. 

SCROLL FOR NEXT