ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ 
ಕ್ರಿಕೆಟ್

ಮ್ಯಾಂಚೆಸ್ಟರ್ ಟೆಸ್ಟ್ ರದ್ದತಿಗೆ ಅಸಲಿ ಕಾರಣ ಹಣ ಮತ್ತು ಐಪಿಎಲ್: ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದತಿಗೆ ಅಸಲಿ ಕಾರಣವನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ತೆರೆದಿಟ್ಟಿದ್ದಾರೆ.

ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದತಿಗೆ ಅಸಲಿ ಕಾರಣವನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ತೆರೆದಿಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಕಳೆದುಕೊಳ್ಳುವಿಕೆ ಹಾಗೂ ಕೋವಿಡ್-19 ಎಲ್ಲಿ ಬರುತ್ತದೆಯೋ ಎಂಬ ಆಟಗಾರರ ಭಯದಿಂದಾಗಿ ಈ ಪಂದ್ಯ ರದ್ದಾಗಿರುವುದಾಗಿ ಅವರು ಹೇಳಿದ್ದಾರೆ.

ಟೀಂ ಇಂಡಿಯಾದ ಸಹಾಯಕ ಫಿಸಿಯೋ ಅವರಿಗೆ ಗುರುವಾರ ಕೋವಿಡ್-19 ಸೋಂಕು ದೃಢಪಟ್ಟ ನಂತರ ಭಾರತ- ಇಂಗ್ಲೆಂಡ್ ನಡುವಿನ ಅಂತಿಮ ಹಾಗೂ ಐದನೇಯ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

ಪ್ರಾಮಾಣಿಕವಾಗಿ ಹೇಳುವುದಾದರೆ ಎಲ್ಲಾ ಹಣ ಮತ್ತು ಐಪಿಎಲ್ ಗಾಗಿ ಪಂದ್ಯ ರದ್ದುಗೊಂಡಿದೆ. ಐಪಿಎಲ್ ಕಳೆದುಕೊಳ್ಳುವುದು ಮತ್ತು ಕೋವಿಡ್ -19 ಸಾಂಕ್ರಾಮಿಕ ಎಲ್ಲಿ ಬಂದುಬಿಡುತ್ತದೆಯೋ ಎಂಬ ಆಟಗಾರರ ಭಯದಿಂದ ಟೆಸ್ಟ್ ಪಂದ್ಯ ರದ್ದುಗೊಂಡಿರುವುದಾಗಿ ವಾನ್ ಟೆಲಿಗ್ರಾಫ್ ನಲ್ಲಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.

 ಇನ್ನೊಂದು ವಾರದಲ್ಲಿ ಐಪಿಎಲ್  ಪ್ರಾರಂಭವಾಗಲಿದೆ. ಆಟಗಾರರು ಉತ್ಸಾಹದಿಂದ ಆಡಬೇಕಿದೆ. ಆದರೆ,  ಅವರು ಪಿಸಿಆರ್ ಪರೀಕ್ಷೆಗಳನ್ನು ನಂಬಬೇಕು, ಇದೀಗ ಈ ವೈರಸ್ ಬಗ್ಗೆ ಸಾಕಷ್ಟು ನಮಗೆ ತಿಳಿದಿದೆ. ಹೇಗೆ ಅದನ್ನು ಅತ್ಯುತ್ತಮ ರೀತಿಯಲ್ಲಿ ತಡೆಗಟ್ಟಬಹುದು ಎಂಬುದು ನಮಗೆ ಗೊತ್ತಿದೆ. ಆಟಗಾರರಿಗೆ ಡಬಲ್ ಲಸಿಕೆ ಹಾಕಲಾಗಿದೆ ಮತ್ತು ಜೈವಿಕ ಭದ್ರತೆಯನ್ನು ಬಹಳ ಬೇಗನೆ ಹೆಚ್ಚಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. 

ಕ್ರಿಕೆಟ್ ಆಟಕ್ಕೆ ಈ ಟೆಸ್ಟ್ ಪಂದ್ಯದ ಅಗತ್ಯವಿದೆ. ಸರಣಿಯು ಅದ್ಭುತವಾಗಿ ಸಜ್ಜುಗೊಂಡಿದೆ. ಟಾಸ್ ಗೆ 90 ನಿಮಿಷಗಳ ಮೊದಲ ಪಂದ್ಯ ರದ್ದುಗೊಳ್ಳುವುದು ಸರಿಯಲ್ಲ, ಇದು ಹಣ ಪಾವತಿಸುವ ಸಾರ್ವಜನಿಕರಿಗೆ ಸಂಪೂರ್ಣವಾಗಿ ಅಗೌರವ ನೀಡಿದಂತಾಗುತ್ತದೆ ಎಂದು ವಾನ್ ಹೇಳಿದ್ದಾರೆ.

ವೈರಸ್‌ ಬಗ್ಗೆ ಚೆನ್ನಾಗಿ ತಿಳಿದಿರುವ ವೈದ್ಯಕೀಯ ಸಿಬ್ಬಂದಿ ಕೂಡ ಆಟಗಾರರನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ, ಇಂಡಿಯಾ ಆಟಗಾರರು ಆಡುವುದಿಲ್ಲವೆಂದು ಹೇಳಿದ್ದರು. ಏಕೆಂದರೆ ಪಂದ್ಯದ ವೇಳೆ ಪಾಸಿಟಿವ್‌ ಪ್ರಕರಣಗಳು ದಾಖಲಾಗಿ, ನಂತರ ಇಂಗ್ಲೆಂಡ್‌ನಲ್ಲಿ ದೀರ್ಘ ಅವಧಿ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಇದರಿಂದ ಸೆ.19 ರಿಂದ ಆರಂಭವಾಗಲಿರುವ 14ನೇ ಐಪಿಎಲ್‌ ಕೆಲ ಪಂದ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಆಟಗಾರರ ಮುಂದಾಲೋಚನೆ ಎಂದು ಅವರು ಹೇಳಿದ್ದಾರೆ ಸಿಇಒ ಟಾಮ್‌ ಹ್ಯಾರಿಸನ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT