ಪಂಜಾಬ್ ತಂಡದ ಸಂಭ್ರಮಾಚರಣೆ 
ಕ್ರಿಕೆಟ್

ಐಪಿಎಲ್-2021: ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥ, ಪಂಜಾಬ್ ವಿರುದ್ಧ ಸನ್ ರೈಸರ್ಸ್ ಗೆ ಸೋಲು

ಶಾರ್ಜಾದಲ್ಲಿ ನಡೆದ ಐಪಿಎಲ್-2021 ರ ಪಂಜಾಬ ಕಿಂಗ್ಸ್- ಹೈದರಾಬಾದ್ ಸನ್ ರೈಸರ್ಸ್ ಪಂದ್ಯದಲ್ಲಿ ಪಂಜಾಬ್ ತಂಡ ಎದುರಾಳಿಯ ವಿರುದ್ಧ 5 ರನ್ ಗಳ ಗೆಲುವು ದಾಖಲಿಸಿದೆ.

ಶಾರ್ಜಾ: ಶಾರ್ಜಾದಲ್ಲಿ ನಡೆದ ಐಪಿಎಲ್-2021 ರ ಪಂಜಾಬ ಕಿಂಗ್ಸ್- ಹೈದರಾಬಾದ್ ಸನ್ ರೈಸರ್ಸ್ ಪಂದ್ಯದಲ್ಲಿ ಪಂಜಾಬ್ ತಂಡ ಎದುರಾಳಿಯ ವಿರುದ್ಧ 5 ರನ್ ಗಳ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ತಂಡ ಪಂಜಾಬ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಸ್125 ರನ್ ಗಳಿಗೆ ಕಟ್ಟಿಹಾಕಿತ್ತು. ಆದರೆ ಕಡಿಮೆ ಮೊತ್ತದ ಸ್ಕೋರ್ ನ ಹೊರತಾಗಿಯೂ ಸನ್ ರೈಸರ್ಸ್ ಗೆ ಪಂಜಾಬ್ ತಂಡದ ಬೌಲಿಂಗ್ ನ್ನು ಎದುರಿಸಿ ಗುರಿ ತಲುಪಲು ಸಾಧ್ಯವಾಗಲಿಲ್ಲ.

ಸನ್ ಸೈರಸ್ ತಂಡ ಪಂಜಾಬ್ ನ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 120 ರನ್ ಗಳಿಗೆ ಸರ್ವಪತನ ಕಂಡು ಶರಣಾಯಿತು. ಮೂರು ಎಸೆತಗಳನ್ನು ಎದುರಿಸಿದ್ದ ಸನ್ ರೈಸರ್ಸ್ ನ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 2 ರನ್ ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರೆ ವೃದ್ಧಿಮಾನ್ ಸಹಾ 37 ಎಸೆತಗಳಲ್ಲಿ 31 ರನ್ ಗಳಿಸಿದರು. ಜೇಸನ್ ಹೋಲ್ಡರ್ 29 ಎಸೆತಗಳಲ್ಲಿ 47 ರನ್ ಗಳಿಸಿ ಭರವಸೆ ಮೂಡಿಸಿದರಾದರೂ ಏಕಾಂಗಿ ಹೋರಾಟವಾಗಿದ್ದರ ಪರಿಣಾಮ ಸನ್ ರೈಸರ್ಸ್ ನ ಗೆಲುವಿನ ಆಸೆ ಫಲಿಸಲಿಲ್ಲ. ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ರನ್ ಗಳನ್ನಷ್ಟೇ ದಾಖಲಿಸಲು ಸಾಧ್ಯವಾಯಿತು.

ಪಂಜಾಬ್ ಪರ ರವಿ ಬಿಷ್ಣೋಯ್ 4 ಓವರ್ ಗಳಲ್ಲಿ ಮೂರು ವಿಕೆಟ್ ಪಡೆದು 24 ರನ್ ನೀಡಿ ಅತ್ಯುತ್ತಮ ಬೌಲರ್ ಎನಿಸಿದರು. ಆರ್ಶ್ದೀಪ್ ಸಿಂಗ್ 22 ರನ್ ನೀಡಿ 1 ವಿಕೆಟ್ ಪಡೆದರು. ಮೊಹಮ್ಮದ್ ಶಮಿ 14 ರನ್ ನೀಡಿ 2 ವಿಕೆಟ್ ಗಳಿಸಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT