ಕ್ರಿಕೆಟ್

ಮೂರನೇ ಏಕದಿನ ಪಂದ್ಯ: ಗಿಲ್ ಚೊಚ್ಚಲ ಶತಕ, ಜಿಂಬಾಬ್ವೆ ಗೆಲ್ಲಲು 290 ರನ್ ಗಳ ಗುರಿ ನೀಡಿದ ಟೀಂ ಇಂಡಿಯಾ

Nagaraja AB

ಹರಾರೆ: ಹರಾರೆ ಸ್ಫೋರ್ಟ್ಸ್ ಕ್ಲಬ್ ನಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದದಲ್ಲಿ ಭಾರತ ತಂಡದ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಗಿಲ್ ಅವರ ಆಕರ್ಷಕ 130 ರನ್ ಗಳ ನೆರವಿನಿಂದ ಭಾರತ 289 ರನ್ ಗಳಿಸಿದ್ದು, ಪಂದ್ಯ ಗೆಲ್ಲಲು ಜಿಂಬಾಬ್ವೆಗೆ 290 ರನ್ ಗಳ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ  289 ರನ್ ಗಳಿಸಿತು. ಆರಂಭಿಕ ಆಟಗಾರರಾದ  ಶಿಖರ್ ಧವನ್, 40 ಹಾಗೂ ನಾಯಕ ಕೆಎಲ್ ರಾಹುಲ್ 30 ರನ್ ಗಳಿಸುವುದರೊಂದಿಗೆ ಉತ್ತಮ ಅಡಿಪಾಯ ಹಾಕಿದರು.

ನಂತರ ಜೊತೆಯಾದ ಶುಭ್ ಮನ್ ಗಿಲ್ ಅಬ್ಬರದ ಬ್ಯಾಟಿಂಗ್ ನಿಂದ 130 ರನ್ ಸಿಡಿಸಿದರು. ಇವರಿಗೆ ಜೊತೆಯಾದ ಇಶಾನ್ ಕಿಶಾನ್ 50 ರನ್ ಗಳಿಸಿದರೆ, ದೀಪಕ್ ಹೂಡಾ ಕೇವಲ 1 ರನ್ ಗಳಿಗೆ ಔಟಾದರು. ಸಂಜು ಸ್ಯಾಮ್ಸನ್ 15, ಅಕ್ಸರ್ ಪಟೇಲ್ 1, ಶಾರ್ದೂಲ್ ಠಾಕೂರ್ 9, ದೀಪಕ್ ಚಹರ್ 1, ಕುಲದೀಪ್ ಯಾದವ್ 2 ರನ್ ಗಳಿಸಿದರು. ಜಿಂಬಾಬ್ವೆ ಪರ ಬ್ರಾಡ್ ಇವಾನ್ 5 ವಿಕೆಟ್ ಕಬಳಿಸಿದರು. 

SCROLL FOR NEXT