ಯುಜ್ವೇಂದ್ರ ಚಹಲ್ 
ಕ್ರಿಕೆಟ್

ದಾಂಪತ್ಯದಲ್ಲಿ ಬಿರುಕು?: ವದಂತಿ ನಡುವೆ ವಿಡಿಯೋ ಹರಿಬಿಟ್ಟ ಯುಜ್ವೇಂದ್ರ ಚಹಲ್ ಪತ್ನಿ

ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ಮಧ್ಯೆ ಎಲ್ಲವೂ ಸರಿಯಿಲ್ವಾ? ಹೀಗೊಂದು ಪ್ರಶ್ನೆ, ಅನುಮಾನ ಕೆಲ ದಿನಗಳಿಂದ ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಆದರೆ ಈ ವದಂತಿ ಮಧ್ಯೆ ಧನಶ್ರೀ ಇನ್ ಸ್ಟಾಗ್ರಾಂ ನಲ್ಲಿ...

ನವದೆಹಲಿ: ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ಮಧ್ಯೆ ಎಲ್ಲವೂ ಸರಿಯಿಲ್ವಾ? ಹೀಗೊಂದು ಪ್ರಶ್ನೆ, ಅನುಮಾನ ಕೆಲ ದಿನಗಳಿಂದ ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಆದರೆ ಈ ವದಂತಿ ಮಧ್ಯೆ ಧನಶ್ರೀ ಇನ್ ಸ್ಟಾಗ್ರಾಂ ನಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಂಡು ಸ್ಪಷ್ಟನೆ ಕೊಟ್ಟಿದ್ದಾರೆ.

ಕ್ಲಿಪ್‌ನಲ್ಲಿ, ಧನಶ್ರೀ ಅವರು “ಸುನೋ, ಮೈನ್ ಏಕ್ ಮಹಿನೇ ಕೆ ಲಿಯೇ ಮೈಕೆ ಜಾ ರಹೀ ಹೂಂ. (ಕೇಳಿ..ನಾನು ನನ್ನ ತಾಯಿಯ ಮನೆಗೆ ಒಂದು ತಿಂಗಳು ಹೋಗುತ್ತಿದ್ದೇನೆ)” ಎಂದು ಹೇಳಿದ್ದಾರೆ. ಇದಕ್ಕೆ ಟಿವಿ ನೋಡುತ್ತಿದ್ದ ಚಹಾಲ್ ತನ್ನ ಕೈಯಿಂದ ರಿಮೋಟ್ ಎಸೆದು ಬಾಲಿವುಡ್ ಹಾಡಿನಲ್ಲಿ ಕುಣಿಯಲು ಪ್ರಾರಂಭಿಸುತ್ತಾರೆ. ಧನಶ್ರೀ ಕೂಡ ಚಹಾಲ್‌ನ ನೃತ್ಯವನ್ನು ನೋಡಿ ನಗಲು ಪ್ರಾರಂಭಿಸುತ್ತಾರೆ. ಅಭಿಮಾನಿಗಳು ಕೂಡ ಈ ವಿಡಿಯೋವನ್ನು ಸ್ವಾಗತಿಸಿದ್ದಾರೆ.

ಈ ಹಿಂದೆ ಧನಶ್ರೀ ಚಹಾಲ್ ಜೊತೆಗಿನ ಸಂಬಂಧದ ಬಗ್ಗೆ ವದಂತಿಗಳನ್ನು ಹರಡುವವರ ವಿರುದ್ಧ ಮಾತನಾಡಿದ್ದರು. ಅವರು ಸುದೀರ್ಘ ಪೋಸ್ಟ್ ಅನ್ನು ಹಂಚಿಕೊಂಡು, ತಮ್ಮ ಜೀವನದ ಬಗ್ಗೆ ಆಧಾರವಿಲ್ಲದ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿ, ಇಂತಹ ವದಂತಿಗಳು ನೋವುಂಟುಮಾಡುತ್ತದೆ ಎಂದಿದ್ದರು.

ಮತ್ತೊಂದೆಡೆ, ಚಾಹಲ್ ಅವರು ಸಹ, ಕಳೆದ ವಾರ ತನ್ನ ವೈವಾಹಿಕ ಜೀವನದ ಬಗ್ಗೆ ವದಂತಿಗಳನ್ನು ನಂಬಬೇಡಿ ಎಂದು ತನ್ನ ಅಭಿಮಾನಿಗಳಿಗೆ ಕೇಳಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!