ಪಾಕ್- ಭಾರತ ತಂಡದ ನಾಯಕರುಗಳ ಮಾತುಕತೆಯ ಚಿತ್ರ 
ಕ್ರಿಕೆಟ್

ಏಷ್ಯಾಕಪ್: ಒಂದು ವರ್ಷದ ನಂತರ ನಾಳೆ ಭಾರತ- ಪಾಕ್ ಮುಖಾಮುಖಿ, ಉಭಯ ನಾಯಕರ ಮಾತುಕತೆ

ಸುಮಾರು ಒಂದು ವರ್ಷದ ನಂತರ ನಾಳೆ ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ- ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. 

ದುಬೈ: ಸುಮಾರು ಒಂದು ವರ್ಷದ ನಂತರ ನಾಳೆ ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ- ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.  ಐಸಿಸಿ ಟಿ-20 ವಿಶ್ವಕಪ್ 2021ರ ಐತಿಹಾಸಿಕ ಪಂದ್ಯದ ನಂತರ ನಾಳೆ ಭಾರತ- ಪಾಕಿಸ್ತಾನ ಎದುರಾಗುತ್ತಿದ್ದು,  ಹೈವೊಲ್ಟೇಜ್ ಪಂದ್ಯ ವೀಕ್ಷಿಸಲು ಪ್ರಪಂಚದಾದ್ಯಂತ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಏಷ್ಯಾಕಪ್ ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಭ್ಯಾಸದ ನಂತರ ಪಾಕ್ ತಂಡದ ನಾಯಕ ಬಾಬರ್ ಅಜಮ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಉಭಯ ತಂಡಗಳ ನಾಯಕರ ಸಂವಾದದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಜಸ್ಪ್ರೀತ್ ಬೂಮ್ರಾ ಮತ್ತು ಶಾಹೀನ್ ಶಾ ಆಫ್ರಿದಿ ಇಲ್ಲದೆ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ನಾಳಿನ ಪಂದ್ಯವನ್ನು ಆಡಲಿವೆ. ಬೂಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದರೆ, ಆಫ್ರಿದಿ ಬಲ ಮೊಣಕಾಲಿನ ಅಸ್ಥಿ ರಜ್ಜು ಗಾಯದ ಸಮಸ್ಯೆಯಿಂದ ಚಿಕಿತ್ಸೆಗೊಳಗಾಗಿದ್ದಾರೆ. ಬೂಮ್ರಾ ಅನುಪಸ್ಥಿತಿಯ ಟೀಂ ಇಂಡಿಯಾದಲ್ಲಿ ಅರ್ಶದೀಪ್ ಸಿಂಗ್ ಹಾಗೂ ಅವೇಶ್ ಖಾನ್ ಅವರಿಗೆ ಅವಕಾಶ ನೀಡಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶಾದ್ಯಂತ 'ಗ್ಯಾಸ್ ಟ್ರಬಲ್': ಪ್ರಮುಖ ನಗರಗಳಲ್ಲಿ LPG ಕೊರತೆಯ ಭೀತಿ; ಸಮಸ್ಯೆ ಬಗೆಹರಿಸಲು ಅಗತ್ಯ ಸರಕುಗಳ ಕಾಯ್ದೆ ಬಳಸಿದ ಕೇಂದ್ರ!

KPCC ಅಧ್ಯಕ್ಷರಾಗಿ ಆರು ವರ್ಷ: ಡಿ ಕೆ ಶಿವಕುಮಾರ್ ಔತಣಕೂಟ ಆಯೋಜನೆ; ಸಿಎಂ ಸೇರಿ ಸಚಿವರು, ಶಾಸಕರು ಭಾಗಿ, ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ತೀವ್ರ

'ನಮ್ಮ ಮಕ್ಕಳಿಗೆ ವಿಷ ನೀಡುತ್ತಿದ್ದೀರಿ': ಬಣ್ಣ ಕಳೆದುಕೊಂಡ ನೀರಿನ ಬಾಟಲಿ ಪ್ರದರ್ಶಿಸಿದ ಜೆಡಿಎಸ್ ಶಾಸಕ; ರಣಾಂಗಣವಾದ ಸದನ!

ನಿರ್ಮಲಾ ಸೀತಾರಾಮನ್ ಬಜೆಟ್ ಖಾಲಿ ಡ್ರಮ್ಮು: ನೋಡ್ರಪಾ, ನೀವು ಅದೆಲ್ಲಾ ಕನಸು ಕಾಣಲು ಹೋಗಬೇಡಿ; ವಿಪಕ್ಷಗಳ ಕಾಲೆಳೆದ ಡಿಕೆಶಿ

No friendship only business: ತೈಲ ಬೇಕಾದರೆ..; ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಟ್ಟ ರಷ್ಯಾ!

SCROLL FOR NEXT