ಕ್ರಿಕೆಟ್

ಅಂತಿಮ ಹಂತದಲ್ಲಿ ಮಿರಾಜ್ ಅದ್ಭುತ ಬ್ಯಾಟಿಂಗ್, ಭಾರತಕ್ಕೆ ಬಾಂಗ್ಲಾದಿಂದ 272 ರನ್ ಗಳ ಟಾರ್ಗೆಟ್ 

Srinivas Rao BV

ಢಾಕಾ: ಢಾಕಾದ ಶೇರಿ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ಬಾಂಗ್ಲಾ 2 ನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತಕ್ಕೆ 272 ರನ್ ಗಳ ಟಾರ್ಗೆಟ್ ನೀಡಿದೆ.
 
ನಿಗದಿತ 50 ಓವರ್ ಗಳಲ್ಲಿ ಬಾಂಗ್ಲಾದೇಶ 7 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿದ್ದು ಅಂತಿಮ ಹಂತದಲ್ಲಿ ಬಾಂಗ್ಲಾ ಪರ ಆಲ್ ರೌಂಡರ್ ಮೆಹಿದಿ ಹಸನ್ ಮಿರಾಜ್ 83 ಎಸೆತಗಳಲ್ಲಿ 100 ರನ್ ಗಳಿಸಿದ್ದು ಬಾಂಗ್ಲಾದೇಶಕ್ಕೆ ಉತ್ತಮ ಟಾರ್ಗೆಟ್ ನೀಡುವುದಕ್ಕೆ ಸಹಕಾರಿಯಾಯಿತು.
 
ಆರಂಭಿಕ ಆಟಗಾರರಾದ ಅನ್ಮುಲ್ ಹಕ್, ಲಿಟ್ಟನ್ ದಾಸ್ ಅತ್ಯಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು, ಬಾಂಗ್ಲಾ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳೂ ಭಾರತದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ವಿಫಲರಾದರು.

ಇದನ್ನೂ ಓದಿ: 2ನೇ ಏಕದಿನ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾಗೆ ಗಾಯ, ಆಸ್ಪತ್ರೆಗೆ ದೌಡು!!
 
ಆದರೆ ಮೊಹಮ್ಮದುಲ್ಲಾ, 96 ಎಸೆತಗಳಲ್ಲಿ 77 ರನ್ ಹಾಗೂ ಮೆಹಿದಿ ಹಸನ್ ಮಿರಾಜ್ 83 ಎಸೆತಗಳಲ್ಲಿ 100 ರನ್ ಗಳಿಸಿದ್ದು ಬಾಂಗ್ಲಾ ತಂಡ ಉತ್ತಮ ಮೊತ್ತ ದಾಖಲಿಸಲು ಸಾಧ್ಯವಾಯಿತು. 

ಭಾರತದ ಬೌಲಿಂಗ್ ವಿಭಾಗದಲ್ಲಿ ವಾಷಿಂಗ್ ಟನ್ ಸುಂದರ್ 3 ವಿಕೆಟ್, ಉಮ್ರನ್ ಮಲೀಕ್ 2 ವಿಕೆಟ್, ಮೊಹಮ್ಮದ್ ಸಿರಾಜ್ 2ವಿಕೆಟ್ ಪಡೆದರು.

SCROLL FOR NEXT