ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಐಪಿಎಲ್ ಹರಾಜು: ಇತಿಹಾಸ ಬರೆದ ಸ್ಯಾಮ್ ಕರ್ರನ್, ದಾಖಲೆಯ 18.50 ಕೋಟಿ ರೂಗೆ ಪಂಜಾಬ್ ಕಿಂಗ್ಸ್ ಪಾಲು

ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್‍ನ ಸ್ಟಾರ್ ಆಲ್‍ರೌಂಡರ್ ಇತಿಹಾಸ ಬರೆದಿದ್ದು, ಸ್ಯಾಮ್ ಕರ್ರನ್ ದಾಖಲೆಯ 18.50 ಕೋಟಿ ರೂಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.

ಸ್ಯಾಮ್ ಕರ್ರನ್
Srinivasa Murthy VN
Updated On : 23 Dec 2022, 4:19 pm

ಕೊಚ್ಚಿ: ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್‍ನ ಸ್ಟಾರ್ ಆಲ್‍ರೌಂಡರ್ ಇತಿಹಾಸ ಬರೆದಿದ್ದು, ಸ್ಯಾಮ್ ಕರ್ರನ್ ದಾಖಲೆಯ 18.50 ಕೋಟಿ ರೂಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.

ಹೌದು.. ಇಂದು ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‍ನ ಸ್ಟಾರ್ ಆಲ್‍ರೌಂಡರ್ ಸ್ಯಾಮ್ ಕರ್ರನ್ 18.50 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ ಬಿಡ್‍ನಲ್ಲಿ ಸ್ಯಾಮ್ ಕರ್ರನ್ ಖರೀದಿಸಲು ಪಂಜಾಬ್ ಹಾಗೂ ಮುಂಬೈ ನಡುವೆ ಬಾರಿ ಜಿದ್ದಾಜಿದ್ದು ಕಂಡುಬಂತು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 18.50 ಕೋಟಿ ರೂ. ನೀಡಿ ಕರ್ರನ್‍ರನ್ನು ಖರೀದಿಸಿತು. 

ಇದನ್ನೂ ಓದಿ: IPL Auction 2023: ಇಂಗ್ಲೆಂಡ್ ಕ್ರಿಕೆಟಿಗ ಹ್ಯಾರಿ ಬ್ರೂಕ್ ಗೆ 13.25 ರೂ. ಕೋಟಿ, 8.25 ಕೋಟಿಗೆ ಮಾಯಾಂಕ್ ಸೇಲ್!

Advertisement

Advertisement

ಈ ಮೂಲಕ ಕ್ರಿಸ್ ಮೋರಿಸ್ ಅವರ ಈ ಹಿಂದಿನ ದಾಖಲೆಯ ಬಿಡ್ ಪತನಗೊಂಡಿತು. ಈ ಹಿಂದೆ ಕ್ರಿಸ್ ಮೋರಿಸ್ ಅವರನ್ನು 16.25 ಕೋಟಿ ನೀಡಿ ರಾಜಸ್ಥಾನ ತಂಡ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಹೆಚ್ಚಿನ ಬಿಡ್ ಮೊತ್ತವಾಗಿತ್ತು. ಇದೀಗ ಈ ದಾಖಲೆಯನ್ನು ಕರ್ರನ್ ಮುರಿದು ನೂತನ ದಾಖಲೆಯೊಂದಿಗೆ ಬಿಕರಿ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಸ್ಯಾಮ್ ಕರ್ರನ್ ಟಿ20 ವಿಶ್ವಕಪ್‍ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಇಂಗ್ಲೆಂಡ್ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು. ಹಾಗಾಗಿ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಈ ನಿರೀಕ್ಷೆ ಹುಸಿಯಾಗಿದೆ. ದಾಖಲೆಯ ಮೊತ್ತಕ್ಕೆ ಬಿಡ್ ಆಗಿದ್ದಾರೆ.

ಕಳೆದ ಬಾರಿ ಮೆಗಾ ಹರಾಜಿನ ಮೊದಲು ಡ್ರಾಫ್ಟ್ ಪಿಕ್‍ನ ಭಾಗವಾಗಿ ರಾಹುಲ್ ಅವರಿಗೆ ಬರೋಬ್ಬರಿ 17 ಕೋಟಿ ರೂ. ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಯಾದ ಆಟಗಾರನಾಗಿ ರಾಹುಲ್ ಹೊರಹೊಮ್ಮಿದ್ದರು.

ಇದನ್ನೂ ಓದಿ: ಐಪಿಎಲ್ ಹರಾಜು: ಯಾವ ತಂಡದ ಬಳಿ ಎಷ್ಟು ಹಣವಿದೆ? ಬಿಡುಗಡೆಯಾದ ಆಟಗಾರಾರು?

ಇನ್ನು ಕಳೆದ ಬಾರಿ ಮೆಗಾ ಹರಾಜಿನ ಮೊದಲು ಡ್ರಾಫ್ಟ್ ಪಿಕ್‍ನ ಭಾಗವಾಗಿ ರಾಹುಲ್ ಅವರಿಗೆ ಬರೋಬ್ಬರಿ 17 ಕೋಟಿ ರೂ. ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಯಾದ ಆಟಗಾರನಾಗಿ ರಾಹುಲ್ ಹೊರಹೊಮ್ಮಿದ್ದರು. ಇತ್ತ ಮತ್ತೊಂದು ಪ್ರಮುಖ ಬಿಡ್ ನಲ್ಲಿ ಇಂಗ್ಲೆಂಡ್ ತಂಡದ ಸ್ಫೋಟಕ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ 16.25 ಕೋಟಿಗೆ ಸೇಲಾಗಿದ್ದು, 17.5 ಕೋಟಿ ರೂಗೆ ಗ್ರೀನ್ ಸೇಲ್ ಆಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement