ರಿಷಬ್ ಪಂತ್-ರವೀಂದ್ರ ಜಡೇಜಾ 
ಕ್ರಿಕೆಟ್

India vs England 5th test: ದಾಖಲೆ ಬರೆದ ಪಂತ್-ಜಡೇಜಾ ಶತಕ, 7ನೇ ಕ್ರಮಾಂಕದಲ್ಲಿ ಜಡೇಜಾ ವೈಯುಕ್ತಿಕ ದಾಖಲೆ

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತಕ್ಕೆ ನೆರವಾಗಿದ್ದ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ ಜೊತೆಯಾಟ ಮಾತ್ರವಲ್ಲ ವೈಯುಕ್ತಿಕ ಶತಕಗಳ ಮೂಲಕವೂ ದಾಖಲೆ ನಿರ್ಮಾಣ ಮಾಡಿದ್ದಾರೆ.

ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತಕ್ಕೆ ನೆರವಾಗಿದ್ದ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ ಜೊತೆಯಾಟ ಮಾತ್ರವಲ್ಲ ವೈಯುಕ್ತಿಕ ಶತಕಗಳ ಮೂಲಕವೂ ದಾಖಲೆ ನಿರ್ಮಾಣ ಮಾಡಿದ್ದಾರೆ.

ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 98 ರನ್ ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ ಆಸರೆಯಾಗಿತ್ತು. ಈ ಜೋಡಿ 222 ರನ್ ಗಳ ಭರ್ಜರಿ ಜೊತೆಯಾಟ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಅಷ್ಟೇ ಅಲ್ಲದೇ ರಿಷಬ್ ಪಂತ್ 146 ರನ್ ಗಳಿಸಿದರೆ, ಜಡೇಜಾ 104 ರನ್ ಗಳಿಸಿದರು. ಆ ಮೂಲಕ ಈ ಜೋಡಿ ವಿಶ್ವ ದಾಖಲೆ ನಿರ್ಮಿಸಿದೆ.

ಭಾರತದ ಪರ ಒಂದೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಇಬ್ಬರು ಎಡಗೈ ಆಟಗಾರರು
ಭಾರತದ ಪರ ಒಂದೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ ಸೇರ್ಪಡೆಯಾಗಿದ್ದು, ಇದಕ್ಕೂ ಮೊದಲು 1999ರಲ್ಲಿ ಅಹ್ಮದಾಬಾದ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಎಸ್ ರಮೇಶ್ (110 ರನ್) ಮತ್ತು ಸೌರವ್ ಗಂಗೂಲಿ (125ರನ್) ಜೋಡಿ ಶತಕ ಸಿಡಿಸಿದ್ದರು. ಬಳಿಕ 2007ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೌರವ್ ಗಂಗೂಲಿ (239) ಮತ್ತು ಯುವರಾಜ್ ಸಿಂಗ್ (169 ರನ್) ಶತಕ ಸಿಡಿಸಿದ್ದರು. ಇದಾದ ಬಳಿಕ ಇಂದು ಪಂತ್ ಮತ್ತು ಜಡೇಜಾ ಜೋಡಿ ಈ ಸಾಧನೆ ಮಾಡಿದೆ.

7ನೇ ಕ್ರಮಾಂಕದಲ್ಲಿ 2 ಶತಕ; ಜಡೇಜಾ ದಾಖಲೆ
ಇನ್ನು ಈ ಶತಕದ ಮೂಲಕ ರವೀಂದ್ರ ಜಡೇಜಾ ವೈಯುಕ್ತಕ ದಾಖಲೆಯೊಂದನ್ನು ನಿರ್ಮಿಸಿದ್ದು, 7ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದು ಒಂದೇ ವರ್ಷದಲ್ಲಿ 2 ಶತಕ ಸಿಡಿಸಿದ ಭಾರತದ 4ನೇ ಆಟಗಾರ ಎಂಬ ಕೀರ್ತಿಗೆ ಜಡೇಜಾ ಭಾಜನರಾಗಿದ್ದಾರೆ. ಇದಕ್ಕೂ ಮೊದಲು 1986ರಲ್ಲಿ ಕಪಿಲ್ ದೇವ್, 2009ರಲ್ಲಿ ಮಹೇಂದ್ರ ಸಿಂಗ್, 2010ರಲ್ಲಿ ಹರ್ಭಜನ್ ಸಿಂಗ್ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 2 ಶತಕ ಸಿಡಿಸಿದ ದಾಖಲೆ ಮಾಡಿದ್ದರು.

ವಿದೇಶಿ ಅಂಗಳದಲ್ಲಿ ಮೊದಲ ಶತಕ
ಇನ್ನು ರವೀಂದ್ರ ಜಡೇಜಾಗೆ ವಿದೇಶಿ ಪಿಚ್ ನಲ್ಲಿ ಇದು ಮೊದಲ ಶತಕವಾಗಿದ್ದು, ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು ಜಡೇಜಾ ಅವರ ಮೂರನೇ ಶತಕ. 2018ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ರಾಜ್‌ಕೋಟ್‌ನಲ್ಲಿ ತಮ್ಮ ಮೊದಲ ಶತಕ ಗಳಿಸಿದ್ದರು. ಕಳೆದ ಮಾರ್ಚ್‌ನಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಅವರು ಎರಡನೇ ಶತಕ ದಾಖಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT