ಕ್ರಿಕೆಟ್

India vs England 5th test: 100 ರನ್ ನೊಳಗೆ 5 ವಿಕೆಟ್ ಪತನ; ಆದರೂ 400+ ಸ್ಕೋರ್; ದಾಖಲೆ ಬರೆದ ಟೀಮ್ ಇಂಡಿಯಾ

Srinivasamurthy VN

ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತ 100 ರನ್ ನೊಳಗೆ 5 ವಿಕೆಟ್ ಕಳೆದುಕೊಂಡರೂ ಬಳಿಕ ಚೇತರಿಸಿಕೊಂಡು 400ಕ್ಕೂ ಅಧಿಕ ರನ್ ಗಳಿಸಿ ದಾಖಲೆ ಬರೆದಿದೆ.

ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 98 ರನ್ ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ ಆಸರೆಯಾಗಿತ್ತು. ಈ ಜೋಡಿ 222 ರನ್ ಗಳ ಭರ್ಜರಿ ಜೊತೆಯಾಟ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಪರಿಣಾಮ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 416ರನ್ ಗಳಿಸಿ ಆಲೌಟ್ ಆಗಿದೆ. 

ದಾಖಲೆ ನಿರ್ಮಾಣ
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮೂರನೇ ಬಾರಿಗೆ ಇನ್ನಿಂಗ್ಸ್ ವೊಂದರಲ್ಲಿ 100ಕ್ಕೂ ಅಧಿಕ ರನ್ ಗಳಿಸುವ ಮೊದಲೇ 5 ವಿಕೆಟ್ ಕಳೆದುಕೊಂಡು ಬಳಿಕ 400ಕ್ಕೂ ಅಧಿಕ ರನ್ ಗಳಿಸಿ ದಾಖಲೆ ನಿರ್ಮಿಸಿದೆ. ಇಂದಿನ ಪಂದ್ಯಕ್ಕೂ ಮೊದಲು ಭಾರತ ಮೊದಲ ಬಾರಿಗೆ 1983ರಲ್ಲಿ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 92 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಬಳಿಕ ಚೇತರಿಸಿಕೊಂಡು 451 ರನ್ ಗಳಿಸಿತ್ತು. ಬಳಿಕ 2013ರಲ್ಲಿ ಇದೇ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ತಂಡ 83 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡ ಹೊರತಾಗಿಯೂ 453 ರನ್ ಗಳಿಸಿತ್ತು.

Stats: 400+ totals for India after losing first 5 wkts < 100 runs
453 (83/5) vs WI Kolkata 2013
451 (92/5) vs WI Chennai 1983
416 (98/5) vs Eng Birmingham 2022 * 

 

SCROLL FOR NEXT