ಕ್ರಿಕೆಟ್

ಭಾರತ vs ಇಂಗ್ಲೆಂಡ್ ಟಿ20 ಸರಣಿ: T20 ವಿಶ್ವಕಪ್‌ಗಾಗಿ ಅತ್ಯುತ್ತಮ 11 ಆಟಗಾರರ ಆಯ್ಕೆ ಪ್ರಾರಂಭಿಸಿದ ಬಿಸಿಸಿಐ!

Vishwanath S

ಸೌತಂಪ್ಟನ್: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಮೂಲಕ ಟೀಂ ಇಂಡಿಯಾ ಮುಂದಿನ ಟಿ20 ವಿಶ್ವಕಪ್‌ಗಾಗಿ ತಮ್ಮ ಅತ್ಯುತ್ತಮ ಹನ್ನೊಂದನ್ನು ಅಂತಿಮಗೊಳಿಸಲು ಪ್ರಯತ್ನಗಳನ್ನು ಬಿಸಿಸಿಐ ನಡೆಸುತ್ತಿದೆ.

ಕೋವಿಡ್-19 ಸೋಂಕಿಗೆ ಒಳಗಾದ ನಂತರ ಬರ್ಮಿಂಗ್‌ಹ್ಯಾಮ್‌ ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ ಸೋಂಕಿನಿಂದ ಗುಣಮುಖರಾಗಿದ್ದು ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಸೇರಿದಂತೆ ಟೆಸ್ಟ್ ಆಟಗಾರರು ಎರಡನೇ ಪಂದ್ಯದಿಂದ ಟಿ20 ತಂಡವನ್ನು ಸೇರಿಕೊಳ್ಳಲಿದ್ದಾರೆ.

ಅವರ ಅನುಪಸ್ಥಿತಿಯಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಟಗಾರರಿಗೆ ಮತ್ತೊಂದು ಅವಕಾಶ ನೀಡಲು ಮುಂದಾಗಿದೆ. ಅದರಂತೆ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಭಾರತದ ಸಂಭಾವ್ಯರ ಪಟ್ಟಿಯಲ್ಲಿ ಅವಕಾಶ ಸಿಕ್ಕಂತೆ ಕಾಣುತ್ತಿದೆ.

ಐರ್ಲೆಂಡ್‌ನಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಗಾಯಕ್‌ವಾಡ್‌ಗೆ ಇಶಾನ್ ಕಿಶನ್ ಜೊತೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇನ್ನು ರೋಹಿತ್ ಹಿಂತಿರುಗಿದರೆ, ಅವರು ಮತ್ತೊಮ್ಮೆ ಬೆಂಚ್ ಕಾಯಬೇಕಾಗುತ್ತದೆ. ಕಿಶನ್ ಅವರು ಸಿಕ್ಕಿರುವ ಅವಕಾಶಗಳಲ್ಲಿ ಸಮಂಜಸವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಗಣನೀಯವಾಗಿ ತಂಡದಲ್ಲಿ ಆರಂಭಿಕರಾಗಿ ತಮ್ಮ ಸ್ಥಾನವನ್ನು ಬಲಪಡಿಸಲು ನೋಡುತ್ತಿದ್ದಾರೆ.

ಇನ್ನು ಕೊಹ್ಲಿ ಎರಡನೇ ಪಂದ್ಯದಿಂದ ಮೂರನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದೆ. ಇನ್ನೊಂದೆಡೆ ದೀಪಕ್ ಹೂಡಾ ಸಹ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಉಳಿಸಿಕೊಳ್ಳಲು ಮತ್ತೊಂದು ಪಂದ್ಯದಲ್ಲಿ ಆಡುವ ಪ್ರಯತ್ನವನ್ನು ಮಾಡಲಿದ್ದಾರೆ. ಇನ್ನು ಐರ್ಲೆಂಡ್ ವಿರುದ್ಧ ಒಂದು ಶತಕ ಮತ್ತು ಅಜೇಯ 47 ರನ್ ಬಾರಿಸಿರುವ ಹೂಡಾರನ್ನು ಹನ್ನೊಂದರಿಂದ ಹೊರಗಿಡಲು ತಂಡದ ನಿರ್ವಹಣೆಗೆ ಖಂಡಿತವಾಗಿಯೂ ಕಠಿಣವಾಗಲಿದೆ.

ಬೌಲಿಂಗ್ ವಿಭಾಗ!
ಬೌಲಿಂಗ್ ವಿಭಾಗದಲ್ಲಿ ವೇಗಿ ಉಮ್ರಾನ್ ಮಲಿಕ್ ಐರ್ಲೆಂಡ್ ವಿರುದ್ಧದ ಎರಡನೇ ಟಿ20ಯ ಕೊನೆಯ ಓವರ್‌ನಲ್ಲಿ ಅದ್ಭುತ ಗೆಲುವು ತಂದುಕೊಟ್ಟಿದ್ದು ಆತ್ಮವಿಶ್ವಾಸದಲ್ಲಿದ್ದಾರೆ. ಅನುಭವಿ ಭುವನೇಶ್ವರ್ ಕುಮಾರ್ ಮತ್ತು ಚಾಣಾಕ್ಷ ಹರ್ಷಲ್ ಪಟೇಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರವಿ ಬಿಷ್ಣೋಯ್ ಬದಲಿಗೆ ಯುಜ್ವೇಂದ್ರ ಚಹಾಲ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ಗೆ ಮೊದಲು ಭಾರತವು ಸುಮಾರು 15 ಟಿ20 ಪಂದ್ಯಗಳನ್ನು ಆಡಬೇಕಿದೆ. ಪ್ರಸ್ತುತ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೂರು, ವೆಸ್ಟ್ ಇಂಡೀಸ್ ವಿರುದ್ಧ ಐದು (ಜುಲೈ 29-ಆಗಸ್ಟ್ 7), ಏಷ್ಯಾ ಕಪ್‌ನಲ್ಲಿ ಸುಮಾರು 5 (ಆಗಸ್ಟ್-ಸೆಪ್ಟೆಂಬರ್) ಮತ್ತು ಆಸ್ಟ್ರೇಲಿಯಾ ವಿರುದ್ಧ ಮೂರು (ಸೆಪ್ಟೆಂಬರ್).

ಟಿ20 ಸರಣಿ ಇಂಗ್ಲೆಂಡ್ ತಂಡ:
ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ರಿಚರ್ಡ್ ಗ್ಲೀಸನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲಾನ್, ಟೈಮಲ್ ಮಿಲ್ಸ್, ಮ್ಯಾಥ್ಯೂ ಪಾರ್ಕಿನ್ಸನ್, ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ ಮತ್ತು ಡೇವಿಡ್ ವಿಲ್ಲಿ.

ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

SCROLL FOR NEXT