ಪೋರ್ಟ್ ಆಫ್ ಸ್ಪೇನ್: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಪೇರಿಸಿದೆ.
ಪೋರ್ಟ್ ಆಫ್ ಸ್ಪೇನ್ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾದ ಶಿಖರ್ ಧವನ್ 97 ಮತ್ತು ಶುಭ್ಮನ್ ಗಿಲ್ 64 ಜೋಡಿ ಅದ್ಭುತ ಬ್ಯಾಟಿಂಗ್ ಮಾಡಿ ಮೊದಲ ವಿಕೆಟ್ ಪತನಕ್ಕೆ 119 ರನ್ ಪೇರಿಸಿತ್ತು.
ನಂತರ ಬಂದ ಶ್ರೇಯಸ್ ಅಯ್ಯರ್ 54 ರನ್ ಪೇರಿಸಿದ್ದು, ಸೂರ್ಯಕುಮಾರ್ 13, ಸಂಜು ಸ್ಯಾಮ್ಸನ್ 12, ದೀಪಕ್ ಹೂಡಾ 27, ಅಕ್ಷರ್ ಪಟೇಲ್ 21 ರನ್ ಪೇರಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ ಬೌಲಿಂಗ್ ನಲ್ಲಿ ಜೋಸೆಫ್ ಮತ್ತು ಮೋತಿ ತಲಾ 2 ವಿಕೆಟ್ ಪಡೆದರೆ, ಹುಸೇನ್, ಶೇರ್ಪಡ್ ತಲಾ 1 ವಿಕೆಟ್ ಪಡೆದಿದ್ದಾರೆ.