ಕ್ರಿಕೆಟ್

ಮಳೆ ಎಫೆಕ್ಟ್: ವಿಂಡೀಸ್ ಗೆ ಗೆಲ್ಲಲು 35 ಓವರ್ ನಲ್ಲಿ 257 ರನ್ ಗಳ ಗುರಿ ನೀಡಿದ ಭಾರತ!

Srinivasamurthy VN

ಕ್ವೀನ್ಸ್ ಪಾರ್ಕ್ ಓವಲ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯ ಮಳೆಯಿಂದಾಗಿ ಮೊಟಕುಗೊಂಡಿದ್ದು, ವಿಂಡೀಸ್ ಗೆ ಗೆಲ್ಲಲು 35 ಓವರ್ ನಲ್ಲಿ 257 ರನ್ ಗಳ ಗುರಿ ನೀಡಲಾಗಿದೆ.

ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು, ನಾಯಕ ಧವನ್ ತೀರ್ಮಾನದಂತೆ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನಾಯಕ ಶಿಖರ್ ಧವನ್ ಮತ್ತು ಶುಭ್‌ಮನ್ ಗಿಲ್ ವೈಯಕ್ತಿಕವಾಗಿ ಅರ್ಧಶತಕಗಳನ್ನು ಬಾರಿಸಿ ಭಾರತವನ್ನು 200 ರನ್ ಗಡಿ ದಾಟಿಸಿದರು. ಅಲ್ಲದೇ ಮೊದಲ ವಿಕೆಟ್‌ಗೆ 113 ರನ್‌ಗಳ ಜೊತೆಯಾಟ ನೀಡಿದರು. 

ಬಳಿಕ 68 ರನ್ ಗಳಿಸಿದ್ದ ಧವನ್ ವಾಲ್ಶ್ ಬೌಲಿಂಗ್ ನಲ್ಲಿ ಔಟಾದರೆ, ಬಳಿಕ ಬಂದ ಶ್ರೇಯಸ್ ಅಯ್ಯರ್ 44 ರನ್ ಗಳಿಸಿ ಹೊಸೈನ್ ಬೌಲಿಂಗ್ ನಲ್ಲಿ ಔಟಾದರು. ಈ ವೇಳೆಗೆ ಮಳೆ ಬಂದಾಗ 98 ರನ್ ಗಳಿಸಿದ್ದ ಶುಭ್ ಮನ್ ಗಿಲ್ ಮತ್ತು 6 ರನ್ ಗಳಿಸಿರುವ ಸಂಜು ಸ್ಯಾಮ್ಸನ್ ಕ್ರೀಸ್ ನಲ್ಲಿದ್ದಾರೆ. ಆದರೆ ಬಳಿಕ ಮಳೆಯಿಂದಾಗಿ ಪಂದ್ಯವನ್ನು ಮೊಟಕುಗೊಳಿಸಿ ವಿಂಡೀಸ್ ಗೆ ಗೆಲ್ಲಲು ಅಂಪೈರ್ ಗಳ ತೀರ್ಮಾನದಂತೆ 35 ಓವರ್ ನಲ್ಲಿ 257 ರನ್ ಗಳ ಗುರಿ ನೀಡಲಾಯಿತು.

ವಿಂಡೀಸ್ ಗೆ ಆರಂಭಿಕ ಆಘಾತ: ಶೂನ್ಯಕ್ಕೆ 2 ವಿಕೆಟ್ 
ಇನ್ನು ಭಾರತ ನೀಡಿದ 257 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ ಆರಂಭಿಕ ಆಘಾತ ಅನುಭವಿಸಿದ್ದು, ಒಂದೂ ರನ್ ಗಳಿಸದೇ ಎರಡು ವಿಕೆಟ್ ಕಳೆದುಕೊಂಡಿದೆ. ಕಮ್ಮ ಮೊದಲ ಓವರ್ ನಲ್ಲಿಯೇ ಭಾರತದ ಮಹಮದ್ ಸಿರಾಜ್ ವಿಂಡೀಸ್ ನ ಮೇಯರ್ಸ್ ಮತ್ತು ಬ್ರೂಕ್ಸ್ ವಿಕೆಟ್ ಪಡೆದಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ 2.1 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡಿರುವ ವಿಂಡೀಸ್ ತಂಡ 2 ರನ್ ಗಳಿಸಿದೆ.
 

SCROLL FOR NEXT