ದೀಪಕ್‌ ಹೂಡಾ 
ಕ್ರಿಕೆಟ್

2ನೇ ಟಿ20: ದೀಪಕ್ ಹೂಡಾ ಭರ್ಜರಿ ಶತಕ; ಐರ್ಲೆಂಡ್ ವಿರುದ್ಧ ಭಾರತಕ್ಕೆ ಸರಣಿ ಜಯ

ದೀಪಕ್‌ ಹೂಡಾ ಅವರ ಭರ್ಜರಿ ಶತಕ (104) ಮತ್ತು ಸಂಜು ಸ್ಯಾಮ್ಸನ್ (77) ಅಬ್ಬರದ ಅರ್ಧಶತಕ ನೆರವಿನಿಂದ ಭಾರತ ತಂಡ ಐರ್ಲೆಂಡ್ ವಿರುದ್ಧದ 2ನೇ ಟಿ20 ಕ್ರಿಕೆಟ್‌ ಪಂದ್ಯದಲ್ಲಿ 4 ರನ್‌ಗಳ ರೋಚಕ ಜಯ ಸಾಧಿಸಿದೆ.

ಡಬ್ಲಿನ್: ದೀಪಕ್‌ ಹೂಡಾ ಅವರ ಭರ್ಜರಿ ಶತಕ (104) ಮತ್ತು ಸಂಜು ಸ್ಯಾಮ್ಸನ್ (77) ಅಬ್ಬರದ ಅರ್ಧಶತಕ ನೆರವಿನಿಂದ ಭಾರತ ತಂಡ ಐರ್ಲೆಂಡ್ ವಿರುದ್ಧದ 2ನೇ ಟಿ20 ಕ್ರಿಕೆಟ್‌ ಪಂದ್ಯದಲ್ಲಿ 4 ರನ್‌ಗಳ ರೋಚಕ ಜಯ ಸಾಧಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ, 20 ಓವರ್‌ಗಳಲ್ಲಿ 7 ವಿಕೆಟ್‌ಗೆ 225 ರನ್‌ ಕಲೆಹಾಕಿತು. ಪ್ರಬಲ ಪೈಪೋಟಿ ನೀಡಿದ ಐರ್ಲೆಂಡ್ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 221 ರನ್‌ ಗಳಿಸಿತು. ಎರಡು ಪಂದ್ಯಗಳ ಸರಣಿಯನ್ನು ಭಾರತ 2–0 ರಲ್ಲಿ ಜಯಿಸಿತು. ಕಠಿಣ ಗುರಿ ಬೆನ್ನಟ್ಟಿದ ಐರ್ಲೆಂಡ್‌, ಕೊನೆಯವರೆಗೂ ಗೆಲುವಿಗಾಗಿ ಹೋರಾಟ ನಡೆಸಿತು. ಅಂತಿಮ ಓವರ್‌ನಲ್ಲಿ 17 ರನ್‌ಗಳು ಬೇಕಿದ್ದವು. ಈ ಹಂತದಲ್ಲಿ ಉಮ್ರಾನ್‌ ಮಲಿಕ್‌ 12 ರನ್‌ ಮಾತ್ರ ಕೊಟ್ಟು ಭಾರತಕ್ಕೆ 4 ರನ್ ಗಳ ವಿರೋಚಿತ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್: 
ಭಾರತ 7ಕ್ಕೆ 225 (20 ಓವರ್) ಸಂಜು ಸ್ಯಾಮ್ಸನ್‌ 77, ದೀಪಕ್‌ ಹೂಡಾ 104, ಸೂರ್ಯಕುಮಾರ್‌ ಯಾದವ್ 15, ಮಾರ್ಕ್‌ ಅಡೇರ್‌ 42ಕ್ಕೆ 3, ಜೋಸ್‌ ಲಿಟ್ಲ್‌ 38ಕ್ಕೆ 2) ಐರ್ಲೆಂಡ್‌: 5ಕ್ಕೆ 221 (20 ಓವರ್) ಪೌಲ್‌ ಸ್ಟರ್ಲಿಂಗ್‌ 40, ಆ್ಯಂಡಿ ಬಾಲ್ಬರ್ನಿ 60, ಹ್ಯಾರಿ ಟೆಕ್ಟರ್‌ 39, ಜಾರ್ಜ್‌ ಡಾಕ್ರೆಲ್ ಔಟಾಗದೆ 34, ರವಿ ಬಿಷ್ಣೋಯ್‌ 41ಕ್ಕೆ 1, ಉಮ್ರನ್‌ ಮಲಿಕ್ 42ಕ್ಕೆ 1.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT