ಭಾರತ ಬ್ಯಾಟಿಂಗ್ 
ಕ್ರಿಕೆಟ್

IND vs NZ 1st ODI: ನಾಯಕ ಧವನ್, ಗಿಲ್, ಅಯ್ಯರ್ ಅರ್ಧಶತಕ; ಕಿವೀಸ್‌ಗೆ ಬೃಹತ್ ಗುರಿ ನೀಡಿದ ಭಾರತ

ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆಗೆ ಭಾರತ ತಂಡ ಗೆಲ್ಲಲು 307 ರನ್ ಗಳ  ಬೃಹತ್ ಗುರಿ ನೀಡಿದೆ.

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆಗೆ ಭಾರತ ತಂಡ ಗೆಲ್ಲಲು 307 ರನ್ ಗಳ  ಬೃಹತ್ ಗುರಿ ನೀಡಿದೆ.

ಆಕ್ಲೆಂಡ್ ನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿಗ ಭಾರತ ತಂಡ ನಾಯಕ ಶಿಖರ್ ಧವನ್, ಶುಭಮನ್ ಗಿಲ್ ಮತ್ತು ಶ್ರೇಯಸ್ ಅವರ ಅರ್ಧಶತಕಗಳ ನೆರವಿನಿಂದ ನಿಗಧಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306ರನ್ ಗಳಿಸಿ ಕಿವೀಸ್ ಗೆ ಗೆಲ್ಲಲು 307 ರನ್ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ನಾಯಕ ಧವನ್ (72 ರನ್) ಮತ್ತು ಶುಭಮನ್ ಗಿಲ್ (50) ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಗೆ 124 ರನ್ ಗಳ ಶತಕದ ಜೊತೆಯಾಟ ನೀಡಿತು. ಈ ಹಂತದಲ್ಲಿ ಧವನ್ ಮತ್ತು ಗಿಲ್ ಆರ್ಧಶತಕ ಸಿಡಿಸಿ ಬೃಹತ್ ಮೊತ್ತದ ಆಸೆ ಚಿಗುರೊಂಡಿಸಿದರು. ಆದರೆ ಅರ್ಧಶತಕ ಸಿಡಿಸಿದ್ದ ಗಿಲ್ ರನ್ನು ಫರ್ಗುಸನ್ ಔಟ್ ಮಾಡಿದರು. ಬಳಿಕ ಶ್ರೇಯಸ್ ಅಯ್ಯರ್ ಜೊತೆಗೂಡಿದ ನಾಯಕ ಧವನ್ ರನ್ನು ಮುಂದಿನ ಓವರ್ ನಲ್ಲೇ ಸೌಥಿ ಪೆವಿಲಯನ್ ಗೆ ಅಟ್ಟಿದರು. ಧವನ್ ಬೆನ್ನಲ್ಲೇ ಪಂತ್ (16) ಮತ್ತು ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ ಕೇವಲ 4 ರನ್ ಗಳಿಸಿ ಔಟಾಗಿ ತೀವ್ರ ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಭಾರತದ ಬೃಹತ್ ಮೊತ್ತದ ಕನಸು ಕಮರುವತ್ತ ಸಾಗಿತು. ಆದರೆ ಮತ್ತೊಂದು ತುದಿಯಲ್ಲಿದ್ದ ಶ್ರೇಯಸ್ ಅಯ್ಯರ್ ನಿಧಾನವಾಗಿ ಲಯ ಕಂಡುಕೊಂಡರು. ಅವರಿಗೆ ಸಂಜು ಸ್ಯಾಮ್ಸನ್ (36 ರನ್) ಮತ್ತು ವಾಷಿಂಗ್ಟನ್ ಸುಂದರ್ (ಅಜೇಯ 37) ಉತ್ತಮ ಸಾಥ್ ನೀಡಿದರು. ಅಯ್ಯರ್ ಕೇವಲ 76 ಎಸೆತಗಲ್ಲಿ 80 ರನ್ ಸಿಡಿಸಿ ಇನ್ನಿಂಗ್ಸ್ ಅಂತಿಮ  ಹಂತದಲ್ಲಿ ಸೌಥಿ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಅದೇ ಕೊನೆಯ ಓವರ್ ನಲ್ಲಿ ಕೊನೆಯ ಎಸೆತದಲ್ಲಿ ಠಾಕೂರ್ ಔಟಾಗುವುದರೊಂದಿಗೆ ಭಾರತದ ಇನ್ನಿಂಗ್ಸ್ ಗೆ ತೆರೆ ಬಿತ್ತು. ಆ ಮೂಲಕ ಭಾರತ ನಿಗಧಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306ರನ್ ಗಳಿಸಿ ಕಿವೀಸ್ ಗೆ ಗೆಲ್ಲಲು 307 ರನ್ ಗುರಿ ನೀಡಿದೆ.

ಕಿವೀಸ್ ಪರ ಸೌಥಿ ಮತ್ತು ಫರ್ಗುಸನ್ ತಲಾ 3 ವಿಕೆಟ್ ಪಡೆದರೆ, ಮಿಲ್ನೆ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT