ರೋಜರ್ ಬಿನ್ನಿ 
ಕ್ರಿಕೆಟ್

ಬಿಸಿಸಿಐ ನೂತನ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ಆಯ್ಕೆ ಸಾಧ್ಯತೆ, ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಕೆ

1983ರ ವಿಶ್ವ ಕಪ್ ವಿಜೇತ ಟೀಂ ಇಂಡಿಯಾ ಹೀರೋ, ಬೆಂಗಳೂರಿನ ರೋಜರ್ ಬಿನ್ನಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

ನವದೆಹಲಿ: 1983ರ ವಿಶ್ವ ಕಪ್ ವಿಜೇತ ಟೀಂ ಇಂಡಿಯಾ ಹೀರೋ, ಬೆಂಗಳೂರಿನ ರೋಜರ್ ಬಿನ್ನಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಧಿಕಾರವಧಿ ಅಕ್ಟೋಬರ್ 18 ರಂದು ಅಂತ್ಯಗೊಳ್ಳಲಿದೆ. ಕಳೆದ ಒಂದು ವಾರದಿಂದ ಹಲವು ಸುತ್ತಿನ ಚರ್ಚೆಯ ನಂತರ 67 ವರ್ಷದ ಬೆಂಗಳೂರಿನ ರೋಜರ್ ಬಿನ್ನಿ ಬಿಸಿಸಿಐನ 36ನೇ ಅಧ್ಯಕ್ಷರಾಗಲು ನಿರ್ಧರಿಸಲಾಯಿತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ಮುಂದುವರೆಯಲಿದ್ದಾರೆ. ಐಸಿಸಿ ಮಂಡಳಿಯಲ್ಲಿ ಗಂಗೂಲಿ ಬದಲಿಗೆ ಜಯ್ ಶಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.  ರಾಜೀವ್ ಶುಕ್ಲಾ ಉಪಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಸಿಂದ್ ಧುಮಲ್ ಇದೀಗ ಐಪಿಎಲ್ ಮುಖ್ಯಸ್ಥರಾಗಲಿದ್ದಾರೆ. ಬ್ರಿಜೇಶ್ ಪಾಟೇಲ್ ಜಾಗಕ್ಕೆ ಧುಮಲ್ ಬರಲಿದ್ದಾರೆ. ಮಹಾರಾಷ್ಟ್ರ ಬಿಜೆಪಿ ಮುಖಂಡ ಅಶಿಶ್ ಶೆಲರ್ ನೂತನ ಖಜಾಂಚಿಯಾಗಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಆಪ್ತ ದೇವಜಿತ್ ಸೈಕಿಯಾ ನೂತನ ಜಂಟಿ ಕಾರ್ಯದರ್ಶಿಯಾಗಿದ್ದಾರೆ. 

ರೋಜರ್ ಬಿನ್ನಿ ಅಕ್ಟೋಬರ್ 18 ರಂದು ಮುಂಬೈನ ಎಜಿಎಂನಲ್ಲಿ ಅಧಿಕಾರ ವಹಿಸಿಕೊಳ್ಳುವರು. ಎಲ್ಲಾ ಅಭ್ಯರ್ಥಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದರಿಂದ ಯಾವುದೇ ಚುನಾವಣೆ ನಡೆಸುತ್ತಿಲ್ಲ. ಭಾರತ ತಂಡ 1983ರ ವಿಶ್ವಕಪ್ ಗೆಲ್ಲುವಲ್ಲಿ ರೋಜರ್ ಬಿನ್ನಿ ಪ್ರಮುಖ ಪಾತ್ರ ನಿರ್ವಹಿಸಿದರು. ಪ್ರತಿಷ್ಟಿತ ಟೂರ್ನಿಯಲ್ಲಿ ಮಧ್ಯಮ ವೇಗಿ ರೋಜರ್ ಬಿನ್ನಿ 8 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದರು. 

ಐಪಿಎಲ್ ಮುಖ್ಯಸ್ಥ ಸ್ಥಾನ ತಿರಸ್ಕರಿಸಿದ ಗಂಗೂಲಿ: ಬಿಸಿಸಿಐ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮುಂದುವರೆಯಲು ಗಂಗೂಲಿ ಬಯಸಿದ್ದರು. ಆದರೆ, ಅಂತಹ ಅವಕಾಶ ಇಲ್ಲ ಎಂಬುದನ್ನು ಅವರಿಗೆ ಹೇಳಲಾಯಿತು. ಐಪಿಎಲ್ ಮುಖ್ಯಸ್ಥ ಸ್ಥಾನದ ಅವಕಾಶವನ್ನು ಅವರು ನಿರಾಕರಿಸಿದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT