ಶ್ರೀಲಂಕಾ ಗೆ ಜಯ 
ಕ್ರಿಕೆಟ್

ಏಷ್ಯಾಕಪ್ 2022: ರಣರೋಚಕ ಪಂದ್ಯದಲ್ಲಿ ಬಾಂಗ್ಲಾದೇಶ ಮಣಿಸಿದ ಶ್ರೀಲಂಕಾ

ಏಷ್ಯಾಕಪ್ 2022  (Asia Cup 2022) ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಕೇವಲ 2 ವಿಕೆಟ್‌ಗಳಿಂದ ಸೋಲಿಸಿದ ಶ್ರೀಲಂಕಾ ಸೂಪರ್ ಫೋರ್‌ ಹಂತಕ್ಕೆ ಪ್ರವೇಶಿಸಿದೆ. 

ದುಬೈ: ಏಷ್ಯಾಕಪ್ 2022  (Asia Cup 2022) ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಕೇವಲ 2 ವಿಕೆಟ್‌ಗಳಿಂದ ಸೋಲಿಸಿದ ಶ್ರೀಲಂಕಾ ಸೂಪರ್ ಫೋರ್‌ ಹಂತಕ್ಕೆ ಪ್ರವೇಶಿಸಿದೆ. 

ಏಷ್ಯಾಕಪ್ 2022ರಲ್ಲಿ ಅಂತಿಮವಾಗಿ ಶ್ರೀಲಂಕಾ ತಂಡ ಸೂಪರ್-4 ಹಂತಕ್ಕೆ ಪ್ರವೇಶ ಪಡೆದಿದ್ದು, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಕೇವಲ 2 ವಿಕೆಟ್‌ಗಳಿಂದ ಸೋಲಿಸಿದೆ. ಕೊನೆಯ ಓವರ್‌ ವರೆಗೂ ಸಾಗಿದ ಈ ರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡ ವಿರೋಚಿತ ಗೆಲುವು ಸಾಧಿಸಿತು. ಬಾಂಗ್ಲಾದೇಶ ನೀಡಿದ 184ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ 19.2 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 184 ಗಳಿಸಿ 2 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿತು. 

ಟಾಸ್ ಗೆದ್ದ ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಟಾಸ್ ಸೋಲಿನ ಹೊರತಾಗಿಯೂ ಬಾಂಗ್ಲಾದೇಶ ತಂಡ ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನೆರವಿನಿಂದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿತು. ಬಾಂಗ್ಲಾದೇಶ ಮೂರನೇ ಓವರ್‌ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಶಕೀಬ್ ಅಲ್ ಹಸನ್ ಆರಂಭಿಕ ಆಟಗಾರ ಮೆಹದಿ ಹಸನ್ ಮಿರಾಜ್ ಅವರೊಂದಿಗೆ ಮುಂದಿನ 24 ಎಸೆತಗಳಲ್ಲಿ 39 ರನ್ ಸೇರಿಸಿ ವೇಗವನ್ನು ಹೆಚ್ಚಿಸಿದರು. ಆದರೆ, ಮೀರಜ್ ಮತ್ತು ಮುಶ್ಫಿಕರ್ ರಹೀಮ್ ಸತತ ಎರಡು ಓವರ್‌ಗಳಲ್ಲಿ ಔಟಾದರು, ಆದರೆ ಶಕೀಬ್ 11ನೇ ಓವರ್‌ ಆಗುವಷ್ಟರಲ್ಲಿ ತಂಡದ ಮೊತ್ತವನ್ನು 87 ರನ್‌ಗಳತ್ತ ಕೊಂಡೊಯ್ದರು. ಬಳಿಕ ಅಫೀಫ್ ಹೊಸೈನ್, ಮೆಹಮುದುಲ್ಲಾ, ಮೊಸದ್ದಕ್ ಹೊಸೇನ್ ಬಲಿಷ್ಠ ಇನ್ನಿಂಗ್ಸ್ ಕಟ್ಟಿ ತಂಡವನ್ನು 183ರನ್ ಸ್ಕೋರ್​ಗೆ ಕೊಂಡೊಯ್ದರು.

ಇದಕ್ಕುತ್ತರವಾಗಿ ಶ್ರೀಲಂಕಾ ಪರ ಪಾಥುಮ್ ನಿಸಂಕಾ ಮತ್ತು ಕುಸಾಲ್ ಮೆಂಡಿಸ್ ಉತ್ತಮ ಆರಂಭ ನೀಡಿ ಆರನೇ ಓವರ್‌ಗೆ 45 ರನ್ ಸೇರಿಸಿದರು. ಪಂದ್ಯದ ಮೊದಲು, ಶ್ರೀಲಂಕಾದ ನಾಯಕ ದಸುನ್ ಶಾನಕ ಅವರು ಶಕೀಬ್ ಅಲ್ ಹಸನ್ ಮತ್ತು ಮುಸ್ತಫಿಜುರ್ ರೆಹಮಾನ್ ಅವರನ್ನು ಬಾಂಗ್ಲಾ ತಂಡದಲ್ಲಿರುವ ವಿಶ್ವ ದರ್ಜೆಯ ಬೌಲರ್‌ಗಳೆಂದಿದ್ದರು. ಆದರೆ ಮೆಂಡಿಸ್ ಆರಂಭದಲ್ಲಿ ಈ ಇಬ್ಬರ ಓವರ್​ಗಳಲ್ಲಿ ಹೆಚ್ಚು ರನ್ ಗಳಿಸಿದರು. ಕೇವಲ ಶಕೀಬ್ ಅವರ ಓವರ್‌ನಿಂದ 18 ರನ್ ಗಳಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ವೇಗದ ಬೌಲರ್ ಇಬಾದತ್ ಹೊಸೈನ್ ಶ್ರೀಲಂಕಾಕ್ಕೆ ತೊಂದರೆಗಳನ್ನು ನೀಡಿ, ಅದೇ ಓವರ್‌ನಲ್ಲಿ ನಿಸಂಕಾ ಮತ್ತು ಚರಿತ್ ಅಸಲಂಕಾ ಅವರ ವಿಕೆಟ್ ಪಡೆದರು. ಬಳಿಕ ಗುಣತಿಲಕ ಕೂಡ ಅವರಿಗೆ ಬಲಿಪಶು ಆದರು.

ಒಂಬತ್ತನೇ ಓವರ್‌ ಆಗುವಷ್ಟರಲ್ಲಿ ಶ್ರೀಲಂಕಾ 77 ರನ್‌ಗಳಿಗೆ ಭಾನುಕಾ ರಾಜಪಕ್ಸೆ ಸೇರಿದಂತೆ 4 ವಿಕೆಟ್ ಕಳೆದುಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ನಾಯಕ ಶನಕ ಮತ್ತು ಮೆಂಡಿಸ್ ನಡುವೆ ಬಲಿಷ್ಠ ಜೊತೆಯಾಟ ನಡೆಯಿತು. ಈ ಸಂದರ್ಭದಲ್ಲಿ ಮೆಂಡಿಸ್ 4 ಬಾರಿ ಲೈಫ್ ಲೈನ್ ಪಡೆದರು, ಅದರಲ್ಲಿ ಒಮ್ಮೆ ಬಾಂಗ್ಲಾ ಕ್ಯಾಚ್ ಕೈಚೆಲ್ಲಿದರೆ, ಇನ್ನೊಮ್ಮೆ ನೋ ಬಾಲ್​ ಮೂಲಕ ಅವರಿಗೆ ಜೀವದಾನ ಸಿಕ್ಕಿತು, ಒಂದು ಬಾರಿ ಮನವಿ ಮಾಡಲಿಲ್ಲ ಮತ್ತು ನಂತರ ರನ್ ಔಟ್ ಅವಕಾಶವನ್ನು ಕಳೆದುಕೊಂಡರು. ಮೆಂಡಿಸ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು ಮತ್ತು ಶನಕ ಅವರೊಂದಿಗೆ 34 ಎಸೆತಗಳಲ್ಲಿ 45 ರನ್ ಬಾರಿಸಿದರು. ಆದರೆ, ಮುಂದಿನ 20 ಎಸೆತಗಳಲ್ಲಿ ಶ್ರೀಲಂಕಾ ಎರಡೂ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಶ್ರೀಲಂಕಾಗೆ ಕೊನೆಯ 12 ಎಸೆತಗಳಲ್ಲಿ 25 ರನ್ ಅಗತ್ಯವಿತ್ತು. ಅದರೆ ಆ ವೇಳೆಗೆ ಚಮಿಕಾ ಕರುಣರತ್ನೆ ರನೌಟ್ ಆದರು, ಆದರೆ ಅಸಿತಾ ಫೆರ್ನಾಂಡೋ ಎರಡೂ ಓವರ್‌ಗಳಲ್ಲಿ ತಲಾ ಒಂದು ಬೌಂಡರಿ ಗಳಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಶ್ರೀಲಂಕಾ ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಸ್ಕೋರ್ ಅನ್ನು ಸಮಗೊಳಿಸಿತು, ಆದರೆ ಈ ಚೆಂಡು ನೋ ಬಾಲ್ ಆಗಿದ್ದರಿಂದ ಲಂಕಾ ರೋಚಕ ಜಯ ಗಳಿಸಿ ಸೂಪರ್ 4 ಹಂತಕ್ಕೆ ಎಂಟ್ರಿಕೊಟ್ಟಿತು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT