ಕ್ರಿಕೆಟ್

ಅರ್ಷ್ದೀಪ್ ಸಿಂಗ್ ಬೆಂಬಲಕ್ಕೆ ‘ಕ್ರಿಕೆಟ್ ದೇವರು’; ವೈಯಕ್ತಿಕ ದಾಳಿ ಬೇಡ ಎಂದ ಸಚಿನ್

Lingaraj Badiger

ನವದೆಹಲಿ: ಏಷ್ಯಾಕಪ್ ಸೂಪರ್ 4 ಮುಖಾಮುಖಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ನಂತರ ಯುವ ವೇಗಿ ಅರ್ಷದೀಪ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಪಂದ್ಯದ ನಿರ್ಣಾಯಕ ಹಂತದಲ್ಲಿ ಯುವ ಆಟಗಾರ 18ನೇ ಓವರ್‌ನಲ್ಲಿ ಬ್ಯಾಟರ್ ಆಸಿಫ್ ಅಲಿ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಇದು ಭಾರತದ ಸೋಲಿಗೆ ಕಾರಣವಾಯಿತೆಂದು ಹಲವರು ಅರ್ಷದೀಪ್ ಸಿಂಗ್ ಅವರನ್ನು ದೂಷಿಸಿ ಟ್ರೋಲ್ ಮಾಡ್ತಿದ್ದಾರೆ.

ಈ ಘಟನೆಯ ನಂತರ ಭಾರತದ ಹಲವಾರು ಮಾಜಿ ಕ್ರಿಕೆಟಿಗರು ಅರ್ಷದೀಪ್ ಅವರನ್ನು ಬೆಂಬಲಿಸಿದ್ದಾರೆ ಮತ್ತು ವಿರಾಟ್ ಕೊಹ್ಲಿ ಕೂಡ ಅರ್ಷದೀಪ್ ಅವರನ್ನು ಬೆಂಬಲಿಸಿದ್ದಾರೆ ಮತ್ತು ಯಾರಾದರೂ ಈ ರೀತಿಯ ತಪ್ಪು ಮಾಡಬಹುದು ಎಂದು ಹೇಳಿದ್ದಾರೆ. ಇದೀಗ, ಭಾರತದ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಅರ್ಷದೀಪ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ ಮತ್ತು ವೈಯಕ್ತಿಕ ದಾಳಿಯಲ್ಲಿ ಪಾಲ್ಗೊಳ್ಳದಂತೆ ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.

“ದೇಶವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಅಥ್ಲೀಟ್‌ಗಳು ಯಾವಾಗಲೂ ರಾಷ್ಟ್ರಕ್ಕಾಗಿ ತಮ್ಮ ಅತ್ಯುತ್ತಮ ಆಟಗಳನ್ನು ನೀಡುತ್ತಾರೆ. ಅವರಿಗೆ ನಮ್ಮ ನಿರಂತರ ಬೆಂಬಲ ಬೇಕು ಮತ್ತು ನೆನಪಿಡಿ, ಕ್ರೀಡೆಯಲ್ಲಿ ನೀವು ಕೆಲವನ್ನು ಗೆಲ್ಲುತ್ತೀರಿ ಮತ್ತು ನೀವು ಕೆಲವನ್ನು ಕಳೆದುಕೊಳ್ಳುತ್ತೀರಿ. ಕ್ರಿಕೆಟ್ ಅಥವಾ ಇತರ ಯಾವುದೇ ಕ್ರೀಡೆಯನ್ನು ವೈಯಕ್ತಿಕ ದಾಳಿಯಿಂದ ಮುಕ್ತಗೊಳಿಸೋಣ. ಅರ್ಷದೀಪ್ ಕಷ್ಟಪಟ್ಟು ಕೆಲಸ ಮಾಡುತ್ತಿರಿ” ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

SCROLL FOR NEXT