ಕ್ರಿಕೆಟ್

ಪಾಕ್ ವಿರುದ್ಧ 23 ರನ್ ಗಳಿಂದ ಗೆದ್ದ ಶ್ರೀಲಂಕಾಗೆ 6ನೇ ಬಾರಿಗೆ ಏಷ್ಯಾ ಕಪ್ ಟಿ-20 ಕಿರೀಟ!

Nagaraja AB

ದುಬೈ: ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2022 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 23 ರನ್ ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದ ಶ್ರೀಲಂಕಾ 6ನೇ ಬಾರಿಗೆ ಏಷ್ಯಾ ಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಆರಂಭಿಕ ಹಂತದಲ್ಲಿ ಕಡಿಮೆ ರನ್ ಗಳಿಗೆ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾ ತಂಡಕ್ಕೆ ರಾಜಪಕ್ಸ 71 ರನ್ ಸಿಡಿಸಿ ಆಸರೆಯಾದರು. ಅವರ ವಿಕೆಟ್ ನಂತರ ಜೊತೆಯಾದ ಹಸರಂಗ ಡಿ ಸಿಲ್ವಾ 21 ಎಸೆತಗಳಲ್ಲಿ 36 ರನ್ , ಚಮಿಕ ಕರುಣರತ್ನೆ 14 ರನ್ ಗಳಿಸಿ ತಂಡ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು.

ಶ್ರೀಲಂಕಾ ತಂಡ ನೀಡಿದ 171 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ್ದ ಪಾಕಿಸ್ತಾನ ತಂಡ 20 ಓವರ್ ಗಳಲ್ಲಿ 147 ರನ್ ಗಳಿಗೆ ತನೆಲ್ಲಾ ವಿಕೆಟ್ ಕಳೆದುಕೊಂಡಿತು. ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಸಾದಬ್ ಖಾನ್ ಹೊರತುಪಡಿಸಿದರೆ ಉಳಿದ ಬೇರೆ ಯಾವ ಆಟಗಾರರು ಒಂದಂಕಿ ದಾಟಲಿಲ್ಲ. ಮೊಹಮ್ಮದ್ ರಿಜ್ವಾನ್ 55, ಇಫ್ತಿಕರ್ ಅಹ್ಮದ್ 32, ಸಾದಬ್ ಖಾನ್ 13 ರನ್ ಗಳಿಸಿದರು. ಇದರಿಂದಾಗಿ 23 ರನ್ ಗಳ ಅಂತರದಿಂದ ಸೋಲಿಗೆ ಶರಣಾಯಿತು.

SCROLL FOR NEXT