ವಿರಾಟ್ ಕೊಹ್ಲಿ 
ಕ್ರಿಕೆಟ್

ವೈಟ್ ಬಾಲ್ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ದೇಶದ 2ನೇ ಆಟಗಾರ ಕೊಹ್ಲಿ!

ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಸೀಮಿತ ಓವರ್ (ವೈಟ್ ಬಾಲ್ ಕ್ರಿಕೆಟ್) ಪಂದ್ಯಗಳಲ್ಲಿ 16, 000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾದರು. ಹೈದರಾಬಾದಿನಲ್ಲಿ ಭಾನುವಾರ ನಡೆದ ಟಿ-20 ಅಂತಿಮ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.

ಹೈದರಾಬಾದ್:  ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಸೀಮಿತ ಓವರ್ (ವೈಟ್ ಬಾಲ್ ಕ್ರಿಕೆಟ್) ಪಂದ್ಯಗಳಲ್ಲಿ 16, 000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾದರು. ಹೈದರಾಬಾದಿನಲ್ಲಿ ಭಾನುವಾರ ನಡೆದ ಟಿ-20 ಅಂತಿಮ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.

ಈ ಪಂದ್ಯದಲ್ಲಿ ಕೊಹ್ಲಿ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿಗಳೊಂದಿಗೆ 48 ಎಸೆತಗಳಲ್ಲಿ 63 ರನ್ ಸಿಡಿಸಿದರು. ಅವರ ಸ್ಟ್ರೈಕ್ ರೇಟ್ ಕೂಟಾ 131.25 ರಲ್ಲಿತ್ತು. ಕೊಹ್ಲಿ ಸೂರ್ಯಕುಮಾರ್ ಯಾದವ್ ಜೊತೆಯಾಟದಲ್ಲಿ 104 ರನ್ ಬಂದಿತು. ಇದೀಗ ಕೊಹ್ಲಿ ಟಿ 20 ಅಂತಾರಾಷ್ಟ್ರೀಯ ಪಂದ್ಯ ಮತ್ತು ಏಕದಿನ ಮಾದರಿ ಪಂದ್ಯಗಳಲ್ಲಿ 16,004 ರನ್ ಗಳಿಸಿದ್ದಾರೆ. ಈ  ರನ್ ಗಳು ವೈಟ್ ಬಾಲ್ ಕ್ರಿಕೆಟ್ ನ 352 ಇನ್ನಿಂಗ್ಸ್ ಗಳಲ್ಲಿ 55.95 ಸರಾಸರಿಯಲ್ಲಿ 369 ಪಂದ್ಯಗಳಿಂದ ಬಂದಿದೆ.

ಏಕದಿನ ಪಂದ್ಯಗಳಲ್ಲಿ ಅವರು 44 ಶತಕ ಹಾಗೂ 97 ಅರ್ಧ ಶತಕಗಳನ್ನು ಗಳಿಸಿದ್ದಾರೆ.  265 ಏಕದಿನ ಪಂದ್ಯ ಆಡಿರುವ ಕೊಹ್ಲಿ, 57.68ರಲ್ಲಿ 12,344 ರನ್ ಗಳಿಸಿದ್ದಾರೆ. ಇದರಲ್ಲಿ 43 ಶತಕ ಮತ್ತು 64 ಅರ್ಧ ಶತಕ ಗಳಿಸಿದ್ದಾರೆ. ವೈಯಕ್ತಿಕವಾಗಿ ಅತಿ ಹೆಚ್ಚು 183 ರನ್ ಬಾರಿಸಿದ್ದಾರೆ.

ಟಿ.20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 107 ಪಂದ್ಯಗಳಲ್ಲಿ 50. 83 ಸರಾಸರಿಯಲ್ಲಿ 3,660 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, 33 ಅರ್ಧ ಶತಕಗಳು ಸೇರಿವೆ. ಟಿ-20ಯಲ್ಲಿ ಅತಿ ಹೆಚ್ಚು ಅಂದರೆ 122 ರನ್ ಗಳಿಸಿದ ಖ್ಯಾತಿಯೂ ಅವರಿಗಿದೆ. ಈ ಸಾಧನೆ ಮಾಡಿರುವ ದೇಶದ ಎರಡನೇ ಆಟಗಾರ ವಿರಾಟ್ ಕೊಹ್ಲಿ ಆಗಿದ್ದರೆ, ವೈಟ್ ಬಾಲ್ ಪಂದ್ಯದಲ್ಲಿ 16,000 ರನ್ ಗಳಿಸಿದ ಮೊದಲ ಆಟಗಾರ ಸಚಿನ್ ತೆಂಡೊಲ್ಕರ್ ಹೆಸರಿನಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT