ಚೆನ್ನೈ ಸೂಪರ್ ಕಿಂಗ್ಸ್ 
ಕ್ರಿಕೆಟ್

IPL 2023: ಚೆನ್ನೈ ಅಬ್ಬರ... ಹೋರಾಡಿ ಸೋತ ಲಖನೌ ಸೂಪರ್‌ ಜೈಂಟ್ಸ್

ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಲಖನೌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ  12 ರನ್‌ಗಳಿಂದ ಜಯಗಳಿಸಿತ್ತು.

ಚೆನ್ನೈ: ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಲಖನೌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ  12 ರನ್‌ಗಳಿಂದ ಜಯಗಳಿಸಿತ್ತು. 

ಮೊದಲು ಬ್ಯಾಟಿಂಗ್ ಮಾಡಿದ್ದು ಸಿಎಸ್ ಕೆ 7 ವಿಕೆಟ್ ನಷ್ಟಕ್ಕೆ 217 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಲಖನೌ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 205 ರನ್ ಗಳಿಗೆ ಅಂತ್ಯವಾಯಿತು. 

ಲಖನೌ ಪರ ಕೈಲ್ ಮೇಯರ್ಸ್ 53 ರನ್ (22 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್) ಮತ್ತು ನಿಕೋಲಸ್ ಪೂರನ್ 32 ರನ್ (18 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್) ಆಕ್ರಮಣಕಾರಿ ಆಟವಾಡಿದರೂ ಉಳಿದ ಬ್ಯಾಟ್ಸ್ ಮನ್ ಗಳಿಂದ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಕೊನೆಯಲ್ಲಿ ಆಯುಷ್ ಬಡೋನಿ 23 ರನ್ ಮತ್ತು ಕೃಷ್ಣಪ್ಪ ಗೌತಮ್ ಅಜೇಯ 17 ರನ್ ಪೇರಿಸಿದರು ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕೆಎಲ್ ರಾಹುಲ್ (20) ಮತ್ತು ಸ್ಟೊಯಿನಿಸ್ (21) ರನ್ ಗಳಿಸಿದರು. ದೀಪಕ್ ಹೂಡಾ 2 ಮತ್ತು ಕೃನಾಲ್ ಪಾಂಡ್ಯ 9 ರನ್ ಪೇರಿಸಿದರು. ಚೆನ್ನೈ ಬೌಲರ್‌ಗಳ ಪೈಕಿ ಮೊಯಿನ್ ಅಲಿ 4 ವಿಕೆಟ್ ಪಡೆದು ಲಖನೌ ಗೆಲುವಿನ ನಿರೀಕ್ಷೆಯನ್ನು ಹುಸಿಗೊಳಿಸಿದರು.

ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 57 ರನ್ (31 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್) ಮತ್ತು ದೇವನ್ ಕಾನ್ವೆ 47 ರನ್ (29 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್) ಮಿಂಚಿದರು. ಶಿವಂ ದುಬೆ 27 ರನ್ ಪೇರಿಸಿದ್ದು ಕ್ರೀಸ್‌ನಲ್ಲಿದ್ದ ಸಮಯದುದ್ದಕ್ಕೂ ಆಕ್ರಮಣಕಾರಿ ಆಟವಾಡಿದರು. ಕೊನೆಯಲ್ಲಿ ಅಂಬಟಿ ರಾಯುಡು 27, ಧೋನಿ 12 ರನ್ ನಿಂದ ಪೇರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಕ್ಟೋಬರ್ ನಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ..!

ಧರ್ಮಸ್ಥಳ ಪ್ರಕರಣ: ತಪ್ಪು ಮಾಡದಿದ್ದರೂ, ನಮ್ಮ ಮೇಲೆ ಯಾಕಿಷ್ಟು ದ್ವೇಷ-ಆರೋಪ; ಡಾ. ವೀರೇಂದ್ರ ಹೆಗ್ಗಡೆ

ನಗರದಲ್ಲಿ 5 ಲಕ್ಷ ಟನ್‌ ಏಕಬಳಕೆ ಪ್ಲಾಸ್ಟಿಕ್‌ ವಶಕ್ಕೆ; 10 ಲಕ್ಷ ರೂ. ದಂಡ ವಸೂಲಿ

Gokarna Cave: ಗುಹೆಯಲ್ಲಿ ವಾಸವಾಗಿದ್ದ ತಾಯಿ-ಮಕ್ಕಳನ್ನು ರಷ್ಯಾಗೆ ಕಳಿಸಿ: ಕೇಂದ್ರಕ್ಕೆ ಹೈಕೋರ್ಟ್

ಇಡೀ ನಾಡನ್ನು ಬೆಳಗಲಿದೆ ಕಾವೇರಿ ಆರತಿ ಜ್ಯೋತಿ: ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಇತಿಹಾಸ ಸೃಷ್ಠಿ; ಡಿಕೆ ಶಿವಕುಮಾರ್

SCROLL FOR NEXT