ಬಿಸಿಸಿಐ ಸಾಂದರ್ಭಿಕ ಚಿತ್ರ 
ಕ್ರಿಕೆಟ್

2023-24ಕ್ಕೆ ಭಾರತದ ದೇಶೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

2023-24ರ ಭಾರತದ ದೇಶೀಯ ಋತುವಿನ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ಪ್ರಕಟಿಸಿದೆ. ಜೂನ್ 28 ರಂದು ದುಲೀಪ್ ಟ್ರೋಫಿ ಪಂದ್ಯಾವಳಿಯೊಂದಿಗೆ ದೇಶಿಯ ಕ್ರಿಕೆಟ್ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಜನವರಿ 5 ರಿಂದ ಪ್ರಮುಖ ರಣಜಿ ಟ್ರೋಫಿ ಪ್ರಾರಂಭವಾಗಲಿದೆ.

ಮುಂಬೈ: 2023-24ರ ಭಾರತದ ದೇಶೀಯ ಋತುವಿನ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ಪ್ರಕಟಿಸಿದೆ. ಜೂನ್ 28 ರಂದು ದುಲೀಪ್ ಟ್ರೋಫಿ ಪಂದ್ಯಾವಳಿಯೊಂದಿಗೆ ದೇಶಿಯ ಕ್ರಿಕೆಟ್ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಜನವರಿ 5 ರಿಂದ ಪ್ರಮುಖ ರಣಜಿ ಟ್ರೋಫಿ ಪ್ರಾರಂಭವಾಗಲಿದೆ.

ಆರು ವಲಯ ತಂಡಗಳ ನಡುವೆ ಆಡಲಾಗುವ ದುಲೀಪ್ ಟ್ರೋಫಿ ನಂತರ ದೇವಧರ್ ಟ್ರೋಫಿ (ಪಟ್ಟಿ ಎ) (ಜುಲೈ 24 ರಿಂದ ಆಗಸ್ಟ್ 3), ಇರಾನಿ ಕಪ್ (ಅಕ್ಟೋಬರ್ 1-5), ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪುರುಷರ ಟಿ20 ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು (ಅಕ್ಟೋಬರ್ 16-ನವೆಂಬರ್ 6) ಮತ್ತು ವಿಜಯ್ ಹಜಾರೆ ಟ್ರೋಫಿ (ನವೆಂಬರ್ 23-ಡಿಸೆಂಬರ್ 15) ಪಂದ್ಯಾವಳಿ ನಡೆಯಲಿದೆ. 

ರಣಜಿ ಟ್ರೋಫಿ ಹಿರಿಯ ಆಟಗಾರರ ವೇಳಾಪಟ್ಟಿಯ ಕೊನೆಯ ಪಂದ್ಯಾವಳಿಯಾಗಿದ್ದು, ಜನವರಿ 5 ರಿಂದ ಫೆಬ್ರವರಿ 19 ರವರೆಗೆ ಎಲೈಟ್ ಗ್ರೂಪ್ ಲೀಗ್ ಪಂದ್ಯಗಳನ್ನು ಆಡಲಾಗುತ್ತದೆ, ಆದರೆ ನಾಕ್-ಔಟ್ ಸುತ್ತು ಫೆಬ್ರವರಿ 23 ರಿಂದ ಮಾರ್ಚ್ 14 ರವರೆಗೆ ಇರುತ್ತದೆ. ಟೂರ್ನಿಯ ಅವಧಿಯು 70 ದಿನ ಆಗಿದೆ. ಪ್ಲೇಟ್ ಗುಂಪಿನ ಲೀಗ್ ಪಂದ್ಯಗಳು ಜನವರಿ 5 ಮತ್ತು ಫೆಬ್ರವರಿ 5 ರ ನಡುವೆ ನಡೆಯಲಿದ್ದು, ನಾಕ್-ಔಟ್ ಸುತ್ತು ಫೆಬ್ರವರಿ 9-22 ರವರೆಗೆ ನಡೆಯಲಿದೆ.

ಅಕ್ಟೋಬರ್ 19 ರಿಂದ ನವೆಂಬರ್ 9 ರ ನಡುವೆ ರಾಷ್ಟ್ರೀಯ ಟಿ-20  ಚಾಂಪಿಯನ್‌ಶಿಪ್‌ಗಳೊಂದಿಗೆ ಹಿರಿಯ ಮಹಿಳೆಯರ ಸೀಸನ್ ಪ್ರಾರಂಭವಾಗುತ್ತದೆ, ನಂತರ ನವೆಂಬರ್ 24 ರಿಂದ ಡಿಸೆಂಬರ್ 4 ರವರೆಗೆ ಅಂತರ್ ವಲಯ ಮಟ್ಟದ ಟಿ-20 ಟ್ರೋಫಿ ನಡೆಯಲಿದೆ. ನಂತರ ಜನವರಿ 4-26 ರ ನಡುವೆ ಹಿರಿಯ ಮಹಿಳೆಯರ ಒಂದು ದಿನದ ಟ್ರೋಫಿ ನಡೆಯಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT