ಸಚಿನ್ ತೆಂಡೂಲ್ಕರ್ - ಅರ್ಜುನ್‌ 
ಕ್ರಿಕೆಟ್

ಅರ್ಜುನ್‌ ಗೆ ಬಯಸಿದ್ದನ್ನು ಮಾಡುವ ಸ್ವಾತಂತ್ರ್ಯ ಇರಬೇಕು: ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಕೊನೆಗೂ ಎರಡು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಿದ್ದಾರೆ.

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಕೊನೆಗೂ ಎರಡು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದ 23 ವರ್ಷದ ಎಡಗೈ ವೇಗಿ, 2 ಓವರ್‌ಗಳಲ್ಲಿ ಆರು ಡಾಟ್ ಬಾಲ್‌ಗಳೊಂದಿಗೆ 17 ರನ್‌ ನೀಡಿ ಗಮನ ಸೆಳೆದರು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಐದು ವಿಕೆಟ್‌ನಿಂದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಅರ್ಜುನ್‌ ತೆಂಡೂಲ್ಕರ್‌ ಐಪಿಎಲ್ ವೃತ್ತಿ ಜೀವನ ಶುಭಾರಂಭವಾಯಿತು.

"ಇದು ಅತ್ಯುತ್ತಮ ಕ್ಷಣ. 2008 ರಿಂದ ನಾನು ಬೆಂಬಲಿಸಿದ ತಂಡಕ್ಕಾಗಿ ಆಡುವುದು ವಿಶೇಷವಾಗಿದೆ ಮತ್ತು ಮುಂಬೈ ಇಂಡಿಯನ್ಸ್ ಹಾಗೂ ಭಾರತೀಯ ತಂಡದ ನಾಯಕರಿಂದ ಕ್ಯಾಪ್ ಪಡೆದಿರುವುದು ಸಂತೋಷ ತಂದಿದೆ" ಎಂದು ಗೋವಾ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುವ ಅರ್ಜುನ್ IPLT20.com.ಗೆ ತಿಳಿಸಿದ್ದಾರೆ.

ಇನ್ನು ಪಂದ್ಯದ ನಂತರ ಪುತ್ರನ ಆಟದ ಬಗ್ಗೆ ಮಾತನಾಡಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, “ಇದು ನನಗೆ ಹೊಸ ಅನುಭವವಾಗಿದೆ. ಏಕೆಂದರೆ ಇಲ್ಲಿಯವರೆಗೆ ನಾನು ಅವನ ಆಟವನ್ನು ನೇರವಾಗಿ ನೋಡಿಲ್ಲ. ಅವನು ಹೊರಗೆ ಹೋಗಿ ತನ್ನನ್ನು ತಾನು ವ್ಯಕ್ತಪಡಿಸಲು ಮತ್ತು ಅವನು ಬಯಸಿದ್ದನ್ನು ಮಾಡುವ ಸ್ವಾತಂತ್ರ್ಯವನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇಂದು ಕೂಡ ನಾನು ಅವನನ್ನು ನೋಡುತ್ತಿರುವುದು ಅವನಿಗೆ ಗೊತ್ತಾಗಬಾರದಿತ್ತು. ಅವನು ಆಡುವಾಗ ಮೈದಾನದಲ್ಲಿರುವ ದೊಡ್ಡ ಸ್ಕ್ರೀನ್‌ ಮೂಲಕ ನಾನಿರುವುದು ಅವನಿಗೆ ಗೊತ್ತಾಗಬಾರದೆಂದು ನಾನು ಡ್ರೆಸಿಂಗ್‌ ರೂಮ್‌ ಬಳಿ ಕುಳಿತುಕೊಂಡೆ. ಇದು ನನಗೆ ವಿಭಿನ್ನ ಅನುಭವ. 2008ರ ಮೊದಲ ಸೀಸನ್‌ನಲ್ಲಿ ನಾನು ಆಡಿದ್ದೆ. ಅದಾದ 16 ವರ್ಷಗಳ ನಂತರ ಆತ ಇದೇ ತಂಡಕ್ಕಾಗಿ ಆಡುತ್ತಿದ್ದಾನೆ,” ಎಂದು ಸಚಿನ್‌ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್