ಐರ್ಲೆಂಡ್ ಗೆ ಯಂಗ್ ಇಂಡಿಯಾ 
ಕ್ರಿಕೆಟ್

ದ್ರಾವಿಡ್ ಇಲ್ಲ, ವಿವಿಎಸ್ ಲಕ್ಷಣ್ ಕೂಡ ಇಲ್ಲ.. ಹೊಸ ಕೋಚ್ ನೊಂದಿಗೆ ಐರ್ಲೆಂಡ್ ಗೆ ಟೀಂ ಇಂಡಿಯಾ ಪ್ರಯಾಣ

ಭಾರತ ಕ್ರಿಕೆಟ್ ತಂಡ ಐರ್ಲೆಂಡ್ ಪ್ರವಾಸಕ್ಕೆ ಹೊಸದೊಂದು ಸಾಹಸಕ್ಕೆ ಮುಂದಾಗಿದ್ದು, ಮುಖ್ಯ ಕೋಚ್ ರಾಹುಲ್ ದ್ರಾವಿಡ್‌, ವಿವಿಎಸ್ ಲಕ್ಷಣ್ ರಿಗೆ ವಿಶ್ರಾಂತಿ ನೀಡಿ ಹೊಸ ಕೊಚ್ ನೊಂದಿಗೆ ಐರ್ಲೆಂಡ್ ಗೆ ತೆರಳುತ್ತಿದೆ.

ನವದೆಹಲಿ: ಭಾರತ ಕ್ರಿಕೆಟ್ ತಂಡ ಐರ್ಲೆಂಡ್ ಪ್ರವಾಸಕ್ಕೆ ಹೊಸದೊಂದು ಸಾಹಸಕ್ಕೆ ಮುಂದಾಗಿದ್ದು, ಮುಖ್ಯ ಕೋಚ್ ರಾಹುಲ್ ದ್ರಾವಿಡ್‌, ವಿವಿಎಸ್ ಲಕ್ಷಣ್ ರಿಗೆ ವಿಶ್ರಾಂತಿ ನೀಡಿ ಹೊಸ ಕೊಚ್ ನೊಂದಿಗೆ ಐರ್ಲೆಂಡ್ ಗೆ ತೆರಳುತ್ತಿದೆ.

ಬಹುಮುಖ್ಯ ವಿಚಾರವೆಂದರೆ ಇಷ್ಟು ದಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅನುಪ ಸ್ಥಿತಿಯಲ್ಲಿ ಟೀಂ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ರ ಸಲಹೆ ದೊರೆಯುತ್ತಿತ್ತು. ಆದರೆ ಈ ಬಾರಿ ಲಕ್ಷಣ್ ಕೂಡ ಟೀಂ ಇಂಡಿಯಾ ಹುಡುಗರೊಂದಿಗೆ ವಿಮಾನ ಹತ್ತುತ್ತಿಲ್ಲ. ಹೀಗಾಗಿ ಭಾರತದ ಇಬ್ಬರು ದಿಗ್ಗಜರ ಅನುಪಸ್ಥಿತಿಯಲ್ಲಿ, ಯುವ ಭಾರತ ತಂಡವು ಮಾಜಿ ದೇಶೀಯ ಪ್ರತಿಭೆ ಸಿತಾಂಶು ಕೊಟಕ್ ರ ನೇತೃತ್ವದಲ್ಲಿ ಐರ್ಲೆಂಡ್ ಪ್ರವಾಸ ಮಾಡಲಿದೆ. ಕೋಟಕ್ ಪ್ರಸ್ತುತ NCA ಯಲ್ಲಿ ಭಾರತ A ತಂಡದ ಮುಖ್ಯ ಕೋಚ್ ಆಗಿದ್ದಾರೆ. ಸಿತಾಂಶು ಅವರು ಎರಡು ವರ್ಷಗಳ ಕಾಲ ಇಂಡಿಯಾ ಎ ತಂಡಕ್ಕೆ ತರಬೇತಿ ನೀಡಿದ ಅನುಭವವನ್ನು ಹೊಂದಿದ್ದಾರೆ.

ಈ ಕುರಿತು ಸಾಕಷ್ಟು ಕ್ರೀಡಾ ಸುದ್ದಿಸಂಸ್ಥೆಗಳು ವರದಿ ಮಾಡಿದ್ದು, ಲಕ್ಷ್ಮಣ್ ಅವರು ಐರ್ಲೆಂಡ್ ಪ್ರವಾಸದಲ್ಲಿ ಭಾರತೀಯ ತಂಡದ ಮುಖ್ಯ ತರಬೇತುದಾರರಾಗಬೇಕಿತ್ತು. ಆದರೆ ಅವರ ಮುಂದಿನ ಕಾರ್ಯವು ಬೆಂಗಳೂರಿನ ಬಳಿ ಉನ್ನತ-ಕಾರ್ಯಕ್ಷಮತೆಯ ತರಬೇತಿ ಶಿಬಿರವನ್ನು ಮೇಲ್ವಿಚಾರಣೆ ಮಾಡುವುದಾಗಿದೆ. ಈ ಶಿಬಿರವು ಮೂರು ವಾರಗಳವರೆಗೆ ಇರಲಿದ್ದು, ಹೀಗಾಗಿ ಆಗಸ್ಟ್ 18 ರಂದು ಪ್ರಾರಂಭವಾಗುವ ಐರ್ಲೆಂಡ್ T20I ಗಳಿಗೆ ಅವರು ಅಲಭ್ಯರಾಗುತ್ತಾರೆ. ಇದೇ ಕಾರಣಕ್ಕೆ ಸಿತಾಂಶು ಕೊಟಕ್ ಅವರು ಟೀಂ ಇಂಡಿಯಾಗೆ ಕೋಚ್ ಆಗಿರಲಿದ್ದಾರೆ. ಕೊಟಕ್ ಜೊತೆಗೆ ಸಾಯಿರಾಜ್ ಬಹುತುಲೆ ಅವರು ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.

"ಕೋಟಕ್ ಮತ್ತು ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ ಮೂರು ಪಂದ್ಯಗಳ T20I ಸರಣಿಗೆ (ಆಗಸ್ಟ್ 18-23 ರಿಂದ) ಜಸ್ಪ್ರೀತ್ ಬುಮ್ರಾ ನೇತೃತ್ವದ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. ಏಕೆಂದರೆ ಲಕ್ಷ್ಮಣ್ ಅವರು ಆಗಸ್ಟ್ 16 ರಿಂದ ಸೆಪ್ಟೆಂಬರ್ 5 ರವರೆಗೆ ಉನ್ನತ-ಕಾರ್ಯಕ್ಷಮತೆಯ ಶಿಬಿರವನ್ನು ನಡೆಸಲಿದ್ದಾರೆ, ಇದಕ್ಕಾಗಿ ಯುವ ತಂಡ ಅಭಿಷೇಕ್ ಶರ್ಮಾ, ಧ್ರುವ್ ಜುರೆಲ್, ರಿಯಾನ್ ಪರಾಗ್, ಪ್ರಭಾಸಿಮ್ರಾನ್ ಸಿಂಗ್, ಸಾಯಿ ಸುದರ್ಶನ್, ಆಕಾಶ್ ಸಿಂಗ್, ರಾಜವರ್ಧನ್ ಹಂಗರ್ಗೇಕರ್ ಮತ್ತು ದಿವ್ಯಾಂಶ್ ಸಕ್ಸೇನಾ ಅವರನ್ನು ಟೀಂ ಇಂಡಿಯಾಗೆ ಬಿಸಿಸಿಐ ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ಐರ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ T20I ಸರಣಿಯನ್ನು ಮಾತ್ರ ಆಡಲಿದೆ. ತಂಡಕ್ಕೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮರಳುವಿಕೆ ಸಮಾಧಾನ ತಂದಿದ್ದು, ಇದು ಭಾರತೀಯ ತಂಡದ ನಿರ್ವಹಣೆಗೆ ಬಹಳ ಮುಖ್ಯವಾಗಿದೆ. ಉಳಿದಂತೆ ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಜಿತೇಶ್ ಶರ್ಮಾ ಮುಂತಾದ ಅತ್ಯಾಕರ್ಷಕ ಯುವ ಆಟಗಾರರು ತಂಡದಲ್ಲಿದ್ದು, ಸರಣಿ ಕುತೂಹಲ ಕೆರಳಿಸಿದೆ. ಐರ್ಲೆಂಡ್ ಅವಕಾಶವು ಮುಂದಿನ ಪೀಳಿಗೆಯ ಕೆಲವು ಭಾರತೀಯ ಆಟಗಾರರೊಂದಿಗೆ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ, ಅವರು ಆಟದ ಭವಿಷ್ಯದ ಶ್ರೇಷ್ಠರಾಗಿ ಮುಂದುವರಿಯಬಹುದು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT