ಅಮಿತಾಬ್ ಬಚ್ಚನ್ 
ಕ್ರಿಕೆಟ್

ಐಎಸ್ ಪಿಎಲ್ ನ ಮುಂಬೈ ತಂಡದ ಮಾಲೀಕತ್ವ ಪಡೆದ ಬಿಗ್ ಬಿ ಅಮಿತಾಬ್ ಬಚ್ಚನ್

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸೋಮವಾರ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) ನ ಮುಂಬೈ ತಂಡದ ಮಾಲೀಕರಾಗಿ ಘೋಷಿಸಿಕೊಂಡಿದ್ದಾರೆ. 

ಮುಂಬೈ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸೋಮವಾರ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) ನ ಮುಂಬೈ ತಂಡದ ಮಾಲೀಕರಾಗಿ ಘೋಷಿಸಿಕೊಂಡಿದ್ದಾರೆ. 

ISPL ಭಾರತದ ಮೊದಲ ಟೆನಿಸ್ ಬಾಲ್ ಟಿ10 ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಇದನ್ನು ಕ್ರೀಡಾಂಗಣದೊಳಗೆ ಆಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇದರ ಉದ್ಘಾಟನಾ ಆವೃತ್ತಿ ಪಂದ್ಯ ಮಾರ್ಚ್ 2 ರಿಂದ ಮಾರ್ಚ್ 9 ರವರೆಗೆ ಮುಂಬೈನಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ 19 ಪಂದ್ಯಗಳು ನಡೆಯಲಿದ್ದು, ಹೈದರಾಬಾದ್, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮತ್ತು ಶ್ರೀನಗರ ಆರು ತಂಡಗಳ ಶ್ರೇಣಿಯನ್ನು ಹೊಂದಿದೆ. ಲೀಗ್‌ನ ಭಾಗವಾಗಿರುವುದು ನನಗೆ ಹೊಸ ಆರಂಭ ಸೂಚನೆಯಾಗಿದ್ದು ಸಂತಸ ತಂದಿದೆ ಎಂದು ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ. 

ಐಎಸ್‌ಪಿಎಲ್ ಒಂದು ರೋಚಕ ಮತ್ತು ಉದಾತ್ತ ಪರಿಕಲ್ಪನೆ ಎಂದು ಬಣ್ಣಿಸಿದರು. ಬೀದಿಗಳಲ್ಲಿ, ಗಲ್ಲಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ ಮತ್ತು ಕ್ರಿಕೆಟ್ ಆಡಲು ಹೋಮ್ ಮೇಡ್ ಪಿಚ್‌ಗಳನ್ನು ಮಾಡಿದವರಿಗೆ ಈಗ ವೃತ್ತಿಪರವಾಗಿ ತಂಡಕ್ಕೆ ಆಯ್ಕೆಯಾಗಲು ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರ ಮುಂದೆ ಔಪಚಾರಿಕ ಸೆಟಪ್‌ಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಅವಕಾಶ!" ಎಂದು ಅಮಿತಾಬ್ ಬಚ್ಚನ್ ಇಂದು ಟ್ವೀಟ್ ಮಾಡಿದ್ದಾರೆ. 

ಇತ್ತೀಚೆಗೆ ನಟರಾದ ಅಕ್ಷಯ್ ಕುಮಾರ್ ಮತ್ತು ಹೃತಿಕ್ ರೋಷನ್ ಅವರು ಕ್ರಮವಾಗಿ ಶ್ರೀನಗರ ಮತ್ತು ಬೆಂಗಳೂರಿನ ತಂಡದ ಮಾಲೀಕರು ಎಂದು ಘೋಷಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT