ಶುಭ್ ಮನ್ ಗಿಲ್ 
ಕ್ರಿಕೆಟ್

ಅತ್ಯಧಿಕ ವೈಯಕ್ತಿಕ ಸ್ಕೋರ್: ಕೊಹ್ಲಿಯ ಮತ್ತೊಂದು ದಾಖಲೆ ಪತನ ಮಾಡಿದ ಶುಭ್ ಮನ್ ಗಿಲ್

ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶತಕಗಳಿಸುವ ಮೂಲಕ ದಾಖಲೆ ಬರೆದಿದ್ದ ಭಾರತದ ಸ್ಫೋಟಕ ಬ್ಯಾಟರ್ ಶುಭ್ ಮನ್ ಗಿಲ್ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಅಹ್ಮದಾಬಾದ್: ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶತಕಗಳಿಸುವ ಮೂಲಕ ದಾಖಲೆ ಬರೆದಿದ್ದ ಭಾರತದ ಸ್ಫೋಟಕ ಬ್ಯಾಟರ್ ಶುಭ್ ಮನ್ ಗಿಲ್ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಕೇವಲ 63 ಎಸೆತಗಳಲ್ಲಿ 126 ರನ್ ಗಳಿಸಿದ ಗಿಲ್ ಈ ಭರ್ಜರಿ ಪ್ರದರ್ಶನದೊಂದಿಗೆ ಭಾರತದ ಪರ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ ಗಳಿಸಿದ ದಾಖಲೆಗೂ ಭಾಜನರಾಗಿದ್ದಾರೆ. 63 ಎಸೆತಗಳನ್ನು ಎದುರಿಸಿದ ಗಿಲ್ 12 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 126 ರನ್ ಗಳಿಸಿ ಆಜೇಯರಾಗಿ ಉಳಿದರು. 

54 ಎಸೆತಗಳಲ್ಲಿ ಶತಕ...
ಶುಭಮನ್ ಗಿಲ್ 54 ಎಸೆತಗಳಲ್ಲಿ ಚೊಚ್ಚಲ ಶತಕದ ಮೈಲಿಗಲ್ಲು ತಲುಪಿದರು. 35 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ್ದ ಗಿಲ್, ಬಳಿಕದ 50 ರನ್‌ಗಾಗಿ ಕೇವಲ 19 ಎಸೆತಗಳನ್ನಷ್ಟೇ ಎದುರಿಸಿದರು. 

2022ರಲ್ಲಿ ದುಬೈನಲ್ಲಿ ಅಫ್ಗಾನಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಅಜೇಯ 122 ರನ್ ಗಳಿಸಿರುವುದು ಈವರೆಗಿನ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. 2017ರಲ್ಲಿ ರೋಹಿತ್ ಶರ್ಮಾ, ಶ್ರೀಲಂಕಾ ವಿರುದ್ಧ ಇಂದೋರ್‌ನಲ್ಲಿ ಗಳಿಸಿದ್ದ 118 ರನ್ ಸಾಧನೆಯನ್ನು ಗಿಲ್ ಹಿಮ್ಮೆಟ್ಟಿಸಿದ್ದಾರೆ. 

ನ್ಯೂಜಿಲೆಂಡ್ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್
ಅಂತೆಯೇ ನ್ಯೂಜಿಲೆಂಡ್ ವಿರುದ್ಧ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ಹಿರಿಮೆಗೂ ಗಿಲ್ ಪಾತ್ರರಾಗಿದ್ದು, ಇತ್ತೀಚೆಗಷ್ಟೇ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಗಿಲ್ ಚೊಚ್ಚಲ ದ್ವಿಶತಕ (208) ಗಳಿಸಿದ್ದರು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ನಿತ್ಯ 4,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ; CM ಡಿಕೆಶಿ ಹೇಳಿದ್ದೇನು?

ಲೇಟ್ ಆದರೂ, ಸರಿಯಾದ ನಿರ್ಧಾರ: ರಾಜ್ಯ BJP ಉಸ್ತುವಾರಿ ರಾಧಾ ಮೋಹನದಾಸ್ ಬದಲಾವಣೆಗೆ 2 ಕಾರಣ ನೀಡಿದ ಯತ್ನಾಳ್

ಸಂಘರ್ಷ ಹಿಂದೂ ಮಹಾಸಾಗರವನ್ನೂ ತಲುಪಬಹುದು: ಮಧ್ಯಪ್ರಾಚ್ಯ ಯುದ್ಧ ವಿಸ್ತರಣೆ ಸುಳಿವು ನೀಡಿದ ಇರಾನ್; ಭಾರತದ ಇಂಧನ-ಸಾಗರ ವ್ಯಾಪಾರಕ್ಕೆ ಹೆಚ್ಚಿದ ಆತಂಕ..!

Yamuna Expressway ದುರಂತ: ನೀವು ಸತ್ತರೂ ಚಿಂತೆಯಿಲ್ಲ, ಬಸ್ ಮಾತ್ರ ನಿಲ್ಲಿಸಲ್ಲ: ಪ್ರಯಾಣಿಕರ ಎಚ್ಚರಿಕೆ ನಿರ್ಲಕ್ಷಿಸಿ 9 ಜನರ ಸಾವಿಗೆ ಕಾರಣವಾದ ಚಾಲಕ..!

ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ಕಾವೇರಿ ಕದನ: 20 TMC ನೀರಿಗೆ ತಮಿಳುನಾಡು ಪಟ್ಟು, ಬರ ಪರಿಸ್ಥಿತಿ ಮುಂದಿಟ್ಟ ಕರ್ನಾಟಕ..!