ಕ್ರಿಕೆಟ್

ತವರಿಗೆ ಮರಳಿದ ವಿಶ್ವಕಪ್ ವಿಜೇತ ಭಾರತದ ಅಂಡರ್-19 ಮಹಿಳಾ ತಂಡ, ಅದ್ದೂರಿ ಸ್ವಾಗತ

Nagaraja AB

ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಆಗಮಿಸಿದ 2023ರ ಐಸಿಸಿ ಅಂಡರ್ 19 ಮಹಿಳಾ ಟಿ-20 ವಿಶ್ವಕಪ್ ವಿಜೇತ ಭಾರತೀಯ ಆಟಗಾರ್ತಿಯರನ್ನು ಅದ್ದೂರಿ ಸ್ವಾಗತ ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು.

ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಶಫಾಲಿ ವರ್ಮಾ ನೇತೃತ್ವದ ತಂಡವನ್ನು ಬಿಸಿಸಿಐ ಬುಧವಾರ ಸನ್ಮಾನಿಸಿತ್ತು. ಇದಾದ ಒಂದು ದಿನದ ಬಳಿಕ ಇಂದು ತಂಡ ತವರಿಗೆ ಮರಳಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆಟಗಾರ್ತಿ ಪಾರ್ಶವಿ ಚೋಪ್ರಾ, ತುಂಬಾ ಒಳ್ಳೆಯ ಅನುಭವವಾಗಿದೆ. ಭಾರತದ ಮಹಿಳಾ ತಂಡ ಮೊದಲ ಬಾರಿಗೆ U-19 ವಿಶ್ವಕಪ್ ಚಾಂಪಿಯನ್ ಆಗಿದೆ. ಇದು ಅದ್ಭುತವಾಗಿದೆ. ನನಗೆ ಸಿಗುವ ಯಾವುದೇ ಅವಕಾಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಅಲ್ಲದೇ, ತಮ್ಮ ದೇಶದ ಧ್ವಜವನ್ನು ಮೇಲ್ಭಾಗದಲ್ಲಿ ನೋಡುವುದಕ್ಕಿಂತ ದೊಡ್ಡ ಪ್ರೇರಣೆ ಇನ್ನೊಂದಿಲ್ಲ ಎಂದು ಅವರು ತಿಳಿಸಿದರು. 

ಗೆಲುವಿನ ಬಗ್ಗೆ ಮಾತನಾಡಿದ ಅರ್ಚನಾ ದೇವಿ, ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗುವುದು ನನ್ನ ಜೀವನದ ಅತ್ಯಂತ ದೊಡ್ಡ ದಿನವಾಗಿತ್ತು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಅವರ ಕನಸನ್ನು ಬೆನ್ನಟ್ಟಲು ಪ್ರೇರೇಪಿಸಬೇಕು ಎಂದು ತಿಳಿಸಿದರು. 

ಭಾರತ ತಂಡದ ಉಪನಾಯಕಿ ಶ್ವೇತಾ ಶೆರಾವತ್ ಅವರನ್ನು ವಿಮಾನ ನಿಲ್ದಾಣದಿಂದ ದಕ್ಷಿಣ ದೆಹಲಿಯ ತಮ್ಮ ಮನೆಯವರೆಗೂ ರೋಡ್ ಶೋ ನಡೆಸಿದ್ದಾರೆ. ಅವರು 19 ವರ್ಷದೊಳಗಿನವರ ಮಹಿಳಾ ಟಿ-20 ವಿಶ್ವಕಪ್‌ನಲ್ಲಿ ಏಳು ಪಂದ್ಯಗಳಲ್ಲಿ 99.00 ಸರಾಸರಿಯಲ್ಲಿ 297 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. 

SCROLL FOR NEXT