ರಿಷಭ್ ಪಂತ್, ಗಂಗೂಲಿ ಸಾಂದರ್ಭಿಕ ಚಿತ್ರ 
ಕ್ರಿಕೆಟ್

ಐಎಪಿಲ್ 2023: ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ಪಂತ್ ಸ್ಥಾನಕ್ಕೆ ಬದಲಿ ಆಟಗಾರ ಯಾರು?

ಇತ್ತೀಚಿಗೆ ಭಯಾನಕ ಅಪಘಾತದಲ್ಲಿ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ಅಲಭ್ಯತೆಯಿಂದಾಗಿ ಆ ಜಾಗಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬುದು ಡೆಲ್ಲಿ ಕ್ಯಾಪಿಟಲ್ಸ್ ನಿರ್ದೇಶಕ ಸೌರವ್ ಗಂಗೂಲಿ ಅವರಿಗೆ ಭಾರೀ ಸವಾಲು ಆಗಿದೆ. 

ಕೊಲ್ಕತ್ತಾ: ಇತ್ತೀಚಿಗೆ ಭಯಾನಕ ಅಪಘಾತದಲ್ಲಿ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ಅಲಭ್ಯತೆಯಿಂದಾಗಿ ಆ ಜಾಗಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬುದು ಡೆಲ್ಲಿ ಕ್ಯಾಪಿಟಲ್ಸ್ ನಿರ್ದೇಶಕ ಸೌರವ್ ಗಂಗೂಲಿ ಅವರಿಗೆ ಭಾರೀ ಸವಾಲು ಆಗಿದೆ. 

'ರಿಷಭ್ ಪಂತ್ ಜೊತೆಗೆ ಒಂದೆರಡು ಬಾರಿ ಮಾತನಾಡಿದ್ದೇನೆ. ಗಾಯಗಳು ಮತ್ತು ಶಸ್ತ್ರ ಚಿಕಿತ್ಸೆಯಿಂದ ಅವರು ಕಠಿಣ ಅವಧಿಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಒಂದು ವರ್ಷ ಅಥವಾ ಕೆಲವು ವರ್ಷದೊಳಗೆ ಅವರು ಭಾರತ ತಂಡಕ್ಕೆ ಮರಳಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ. ಐಪಿಎಲ್ ಸಮಯದಲ್ಲಿ ಪಂತ್ ತಂಡದೊಂದಿಗೆ ಸ್ವಲ್ಪ ಸಮಯ ಇರುವುದನ್ನು ಇಷ್ಟಪಡಬಹುದು, ಅದು ಅವರ ಚೇತರಿಕೆಗೆ ಸಹಾಯ ಮಾಡುತ್ತದೆ. "ಗೊತ್ತಿಲ್ಲ. ನಾವು ಮುಂದೆ ನೋಡುವುದಾಗಿ  ಗಂಗೂಲಿ ಹೇಳಿದರು.

ಪಂತ್ ಅವರ ಸ್ಥಾನಕ್ಕೆ ಬೇರೊಬ್ಬ ಆಟಗಾರರನ್ನು ದೆಹಲಿ ಕ್ಯಾಪಿಟಲ್ಸ್ ಘೋಷಿಸಿಲ್ಲ.  ಯುವ ಟರ್ಕಿಯ ಅಭಿಷೇಕ್ ಪೊರೆಲ್ ಮತ್ತು ದೇಶೀಯ ಅನುಭವಿ ಶೆಲ್ಡನ್ ಜಾಕ್ಸನ್ ನಡುವೆ ಯಾರು ಉತ್ತಮರು ಎಂಬುದರ ಕುರಿತು ಗಂಗೂಲಿ ಇನ್ನೂ ನಿರ್ಧರಿಸಿಲ್ಲ. ಇದನ್ನು ತೀರ್ಮಾನಿಸಲು ಇನ್ನೂ ಸ್ವಲ್ಪ ಸಮಯಾವಕಾಶ ಬೇಕು, ಐಪಿಎಲ್ ಗಿಂತ ಮುನ್ನ ಅಭ್ಯಾಸಗಳು ಆರಂಭವಾಗಲಿದೆ.  ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದು, ಅಕ್ಸರ್ ಪಟೇಲ್ ಉಪ ನಾಯಕರಾಗಲಿದ್ದಾರೆ. 

ಕೊಲ್ಕತ್ತಾದಲ್ಲಿ  ಪೃಥ್ವಿ ಶಾ, ಇಶಾಂತ್ ಶರ್ಮಾ, ಚೇತನ್ ಸಕರಿಯಾ, ಮನೀಶ್ ಪಾಂಡೆ ಮತ್ತಿತರರು ಇತರ ದೇಶಿಯ ಆಟಗಾರರೊಂದಿಗೆ ಪಾಲ್ಗೊಂಡಿದ್ದ ಮೂರು ದಿನಗಳ ಶಿಬಿರವನ್ನು ಗಂಗೂಲಿ ಮೇಲ್ವಿಚಾರಣೆ ಮಾಡಿದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup, IND vs Pak: ಇಶಾನ್ ಕಿಶಾನ್ ಬ್ಯಾಟಿಂಗ್ ಅಬ್ಬರ; ಸ್ಪಿನ್ ಮೋಡಿಗೆ ಪಾಕ್ ತತ್ತರ, ಭಾರತಕ್ಕೆ 61 ರನ್ ಗೆಲುವು!

T20 World Cup 2026: ಸೂಪರ್ 8 ಹಂತಕ್ಕೆ ಭಾರತ ಲಗ್ಗೆ; ದೇಶಾದ್ಯಂತ ಸಂಭ್ರಮಾಚರಣೆ, ಗಣ್ಯರ ಶುಭಾಶಯ!

ಆಜಾದ್ ನಗರ: ಕಚ್ಚಾ ಬಾಂಬ್ ತಯಾರಿಕೆ ವೇಳೆ ಸ್ಫೋಟ, 4 ಮಂದಿಗೆ ಗಾಯ, ರೌಡಿ ಶೀಟರ್ ಸಾವು.. Video

'2048 ಬಂದ್ರೂ ಡಿಕೆ ಶಿವಕುಮಾರ್ ಸಿಎಂ ಆಗಲ್ಲ: ಏಕಂದ್ರೆ ನಾವು ಬಿಡಲ್ಲ; ಇನ್ನು ಮುಂದೆ ದೇಶವೂ ನಮ್ಮದೇ, ರಾಜ್ಯವೂ ನಮ್ಮದೇ'

'ಈ ಛಲವಾದಿ ನಾರಾಯಣಸ್ವಾಮಿ ನಾಯಿ ಥರ...ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ'

SCROLL FOR NEXT