ಕ್ರಿಕೆಟ್

Womens IPL: ಭಾರಿ ಮೊತ್ತಕ್ಕೆ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕು ತನ್ನದಾಗಿಸಿಕೊಂಡ ವಯಕಾಮ್ 18!

Srinivasamurthy VN

ಮುಂಬೈ: ತೀವ್ರ ಕುತೂಹಲ ಕೆರಳಿಸಿರುವ ಚೊಚ್ಚಲ ಮಹಿಳಾ ಐಪಿಎಲ್ ಟೂರ್ನಿಯ ಮಾಧ್ಯಮ ಹಕ್ಕನ್ನು ವಯಕಾಮ್ 18 ಸಂಸ್ಥೆ ಬೃಹತ್ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ.

ಬಿಸಿಸಿಐ ಮೂಲಗಳ ಪ್ರಕಾರ ಬರೊಬ್ಬರಿ 951 ಕೋಟಿ ರೂಗಳಿಗೆ ವಯಕಾಮ್ 18 ಸಂಸ್ಥೆ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಟ್ವೀಟ್ ಮಾಡಿದ್ದು, ‘ಮುಂದಿನ ಐದು ವರ್ಷಗಳಿಗೆ (2023–27)ಎಂಐಪಿಎಲ್ ಮಾಧ್ಯಮ ಹಕ್ಕಿಗೆ ವಯಕಾಮ್ 18 ಸಂಸ್ಥೆಯು ₹951 ಕೋಟಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರತಿ ಪಂದ್ಯದ ಮೌಲ್ಯ ₹7.09 ಕೋಟಿ ಆಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

 ‘ಮಹಿಳೆಯರ ಐಪಿಎಲ್‌ಗೆ ಮಾಧ್ಯಮ ಹಕ್ಕು ಹರಾಜು ಮತ್ತೊಂದು ಐತಿಹಾಸಿಕ ಸಂಗತಿಯಾಗಿದೆ. ಈ ಸರಣಿಯು ಭಾರತದಲ್ಲಿ ಮಹಿಳೆಯರ ಕ್ರಿಕೆಟ್ ಸಬಲೀಕರಣದ ದೃಷ್ಟಿಯಿಂದ ಅತಿ ದೊಡ್ಡ ಮತ್ತು ನಿರ್ಣಾಯಕ ಹೆಜ್ಜೆ ಯಾಗಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರತೀ ಪಂದ್ಯಕ್ಕೆ 7.09ಕೋಟಿ ರೂ
ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್(ಎಂಐಪಿಎಲ್) ಕ್ರಿಕೆಟ್ ಟೂರ್ನಿಯ ಮೊದಲ 5 ಆವೃತ್ತಿಗಳ ಮಾಧ್ಯಮ ಹಕ್ಕನ್ನು ವಯಕಾಮ್‌ 18 ತನ್ನದಾಗಿಸಿಕೊಂಡಿದ್ದು, ಈ ಹರಾಜು ಪ್ರಕ್ರಿಯೆಯಲ್ಲಿ ಡಿಸ್ನಿ ಸ್ಟಾರ್, ಸೋನಿ ಕಂಪನಿಗಳನ್ನು ಹಿಂದಿಕ್ಕಿ ಹಕ್ಕು ಪಡೆದಿದೆ. ಪ್ರತಿ ಪಂದ್ಯ ಮೌಲ್ಯ 7.09 ಕೋಟಿ ರೂ ನಂತೆ 951 ಕೋಟಿ ರೂಗೆ ವಯಕಾಮ್ 18 ಮಾಧ್ಯಮ ಹಕ್ಕು ಖರೀದಿಸಿದೆ.

ಚೊಚ್ಚಲ ಮಹಿಳೆಯರ ಐಪಿಎಲ್ ಸರಣಿಯು ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ. 5 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಎಲ್ಲ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ.

ಈ ವರ್ಷದ ಆರಂಭದಲ್ಲಿ, Viacom18 ಐಪಿಎಲ್ ಮಾಧ್ಯಮ ಹಕ್ಕು 2023-27 ಗಾಗಿ ಭಾರತೀಯ ಉಪಖಂಡಕ್ಕೆ ಡಿಜಿಟಲ್ ಹಕ್ಕುಗಳನ್ನು (ಪ್ಯಾಕೇಜ್‌ಗಳು B & C) ಪಡೆಯಲು 23,758 ಕೋಟಿ ರೂ. Vicom18 ಅದೇ ಅವಧಿಗೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಕಿಂಗ್‌ಡಮ್ ಹಕ್ಕುಗಳನ್ನು ಗೆದ್ದಿತ್ತು. ಮಾತ್ರವಲ್ಲದೇ ಹಾಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಟಿ20 ಫ್ರಾಂಚೈಸ್ ಲೀಗ್‌ನ ಪ್ರಸಾರ ಹಕ್ಕುಗಳನ್ನು ಮತ್ತು 2024-31 ರವರೆಗಿನ ದಕ್ಷಿಣ ಆಫ್ರಿಕಾದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಭಾರತೀಯ ಪ್ರಸಾರ ಹಕ್ಕುಗಳನ್ನು ಹೊಂದಿದ್ದಾರೆ.
 

SCROLL FOR NEXT