ಜೇಕಬ್ ಡಫಿ 
ಕ್ರಿಕೆಟ್

3ನೇ ಏಕದಿನ: ಭಾರತ ಭರ್ಜರಿ ಬ್ಯಾಟಿಂಗ್, 3 ವಿಕೆಟ್ ಪಡೆದರೂ 100 ರನ್ ಚಚ್ಚಿಸಿಕೊಂಡ ಕಿವೀಸ್ ಬೌಲರ್!

ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ತೀವ್ರ ದಂಡನೆಗೆ ಒಳಗಾದ ಕಿವೀಸ್ ಬೌಲಕ್ ಜೇಕಬ್ ಡಫಿ ಹೀನಾಯ ದಾಖಲೆಗೆ ಪಾತ್ರರಾಗಿದ್ದಾರೆ.

ಇಂದೋರ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ತೀವ್ರ ದಂಡನೆಗೆ ಒಳಗಾದ ಕಿವೀಸ್ ಬೌಲಕ್ ಜೇಕಬ್ ಡಫಿ ಹೀನಾಯ ದಾಖಲೆಗೆ ಪಾತ್ರರಾಗಿದ್ದಾರೆ.

ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಕಲೆಹಾಕಿತು. 

ಭಾರತ ತಂಡ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 212ರನ್ ಗಳ ಅಮೋಘ ಜೊತೆಯಾಟ ನೀಡಿತು. ಈ ಪೈಕಿ ಇಬ್ಬರೂ ಆರಂಭಿಕರು ಶತಕ ಸಿಡಿಸಿದ್ದು ವಿಶೇಷವಾಗಿತ್ತು. 85 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 9 ಬೌಂಡರಿಗಳ ಸಮೇತ ರೋಹಿತ್ ಶರ್ಮಾ 101ರನ್ ಗಳಿಸಿದರೆ, 78 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ ಗಿಲ್ 112 ರನ್ ಚಚ್ಚಿದರು.

ಇದೇ ಪಂದ್ಯದಲ್ಲಿ ನ್ಯೂಜಿಲೆಂಡ್ ನ ವೇಗಿ ಜೇಕಬ್ ಡಫಿ ಹೀನಾಯ ದಾಖಲೆಗೆ ಪಾತ್ರರಾಗಿದ್ದು, ಡಫಿ ಈ ಪಂದ್ಯದಲ್ಲಿ 10 ಓವರ್ ಎಸೆದು 3 ವಿಕೆಟ್ ಪಡೆದು 10 ರನ್ ಸರಾಸರಿಯಲ್ಲಿ 100 ನೀಡಿದ್ದಾರೆ. ಈ ಪೈಕಿ 1 ವೈಡ್ ಕೂಡ ಸೇರಿದೆ. ಆ ಮೂಲಕ ಡಫಿ ನ್ಯೂಜಿಲೆಂಡ್ ಪರ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ನೀಡಿದ 3ನೇ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮೊದಲು 2009ರಲ್ಲಿ ಕ್ರೈಸ್ಟ್ ಚರ್ಚ್ ನಲ್ಲಿ ಭಾರತದ ವಿರುದ್ಧ ಟಿಮ್ ಸೌಥಿ 105ರನ್ ನೀಡಿದ್ದರು. ಇದಕ್ಕೂ ಮೊದಲು 1983ರಲ್ಲಿ ಇಂಗ್ಲೆಂಡ್ ವಿರುದ್ಧ ದಿ ಓವಲ್ ಕ್ರೀಡಾಂಗಣದಲ್ಲಿ ಮಾರ್ಟಿನ್ ಸ್ನೆಡೆನ್ ಅವರು 12 ಓವರ್ ನಲ್ಲಿ 105 ರನ್ ನೀಡಿದ್ದರು. ಇವರು ಅತೀ ಹೆಚ್ಚು ರನ್ ನೀಡಿದ 2ನೇ ಬೌಲರ್ ಆಗಿದ್ದಾರೆ. ಇದೀಗ ಡಫಿ ಮೂರನೇ 100 ರನ್ ನೀಡುವ ಮೂಲಕ 3ನೇ ಸ್ಥಾನಕ್ಕೇರಿದ್ದಾರೆ.

STAT: Most runs conceded in an ODI by a NZ bowler
105 Tim Southee vs Ind Christchurch 2009
105 Martin Snedden vs Eng The Oval 1983 (12 overs)
100 Jacob Duffy vs Ind Indore 2023

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ: ಬಾಂಗ್ಲಾದೇಶ ರಾಯಭಾರ ಕಚೇರಿ ಎದುರು ಬೃಹತ್ ಪ್ರತಿಭಟನೆ, ಲಾಠಿ ಚಾರ್ಜ್! ವೀಸಾ ಸೇವೆ ಸ್ಥಗಿತ, Video

ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡುವ ಭಾರತ ವಿರೋಧಿ ನಾಯಕ; Rahul Gandhi ನಾಯಕನಲ್ಲ, ಬಾಲಕ: BJP

Video: "ಹೆಣ್ಣುಮಕ್ಕಳ ಸೌಂದರ್ಯ ಸೀರೆಯಲ್ಲಿರುತ್ತದೆ.. ಸಾ** ತೋರಿಸೋದ್ರಲ್ಲಿ ಅಲ್ಲ': ಬಿಗ್​ಬಾಸ್ ಸ್ಪರ್ಧಿಯ ಶಾಕಿಂಗ್ ಹೇಳಿಕೆ

AI Market: ಚೀನಾದಿಂದ ಭಾರತದತ್ತ ಜಗತ್ತಿನ ಗಮನ: BofA ಸರ್ವೆ

ಪ್ರಿಯಾಂಕಾ ಗಾಂಧಿಯನ್ನು 'ಪ್ರಧಾನಿ'ಯಾಗಿ ಮಾಡೇ ಮಾಡ್ತೀವಿ, ನೋಡ್ತಾ ಇರಿ! ಕಾಂಗ್ರೆಸ್ ಸಂಸದ

SCROLL FOR NEXT