ಕ್ರಿಕೆಟ್

ಒಂದು ವೇಳೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಡ್ರಾದಲ್ಲಿ ಕೊನೆಗೊಂಡರೆ ಏನಾಗುತ್ತದೆ?

Vishwanath S

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದಲ್ಲಿ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣೆಸಾಡುತ್ತಿವೆ. ಲಂಡನ್ ದಿ ಓವಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು ಟಾಸ್ ಸೋತ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದೆ. 

ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 327 ರನ್ ಪೇರಿಸಿ ಆರಂಭಿಕ ಮುನ್ನಡೆ ಸಾಧಿಸಿದೆ. ಈ ಮಧ್ಯೆ ಪಂದ್ಯ ಡ್ರಾ ಆದರೆ ಏನು ಎಂಬ ಪ್ರಶ್ನೆ ಮೂಡಿದೆ. ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಸೀಮಿತವಾಗಿರುವುದು ಒಂದು ಪಂದ್ಯಕ್ಕೆ. ಪಂದ್ಯ ಡ್ರಾ ಆದರೆ ಯಾರನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ಇನ್ನು ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು ಪಂದ್ಯ ಡ್ರಾಗೊಂಡರೆ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದರ್ಥವಲ್ಲ.

ಇನ್ನು ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ. ಪಂದ್ಯ ರದ್ದಾದರೆ ಅದಕ್ಕೆ ಜೂನ್ 23ರಂದು ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಆರಂಭಿಕ ಐದು ದಿನಗಳಲ್ಲಿ ಮಳೆಯಿಂದಾಗಿ ಪಂದ್ಯ ಅರ್ಧಕ್ಕೆ ನಿಂತರೆ, ಅಥವಾ ಗಣನೀಯವಾಗಿ ಓವರ್ ಗಳು ಕಡಿಮೆಯಾದರೆ ಆಗ ಮಾತ್ರ ಮೀಸಲು ದಿನವನ್ನು ಪರಿಗಣಿಸಲಾಗುತ್ತದೆ. ಆದರೆ, ಮೀಸಲು ದಿನದ ನಂತರವೂ ಫಲಿತಾಂಶ ಬಾರದಿದ್ದಲ್ಲಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗುತ್ತದೆ.

ನಿಗದಿತ ಆರು ಗಂಟೆಗಳ ಸಮಯವನ್ನು ಪೂರೈಸದಿದ್ದರೆ ಅಥವಾ ದಿನಕ್ಕೆ 90 ಓವರ್‌ಗಳು ಕೋಟಾವನ್ನು ಪೂರ್ಣಗೊಳಿಸದಿದ್ದರೆ ಮೀಸಲು ದಿನವು ಜಾರಿಗೆ ಬರುತ್ತದೆ. ಸರಳ ಪದಗಳಲ್ಲಿ ವಿವರಿಸಬೇಕೆಂದರೆ, ಮಳೆ ಅಥವಾ ಇನ್ನಾವುದೇ ಕಾರಣದಿಂದ ಟೆಸ್ಟ್‌ನ ಮೊದಲ ದಿನದಂದು ಒಂದು ಗಂಟೆಯ ಆಟವು ಕಳೆದುಹೋಯಿತು ಎಂದು ಭಾವಿಸೋಣ, ನಂತರ ಅದೇ ದಿನದ ಅಂತ್ಯದ ವೇಳೆಗೆ ತಂಡಗಳು ನಷ್ಟವನ್ನು ತುಂಬಬಹುದು. ಆದರೆ ನೀವು ಇಡೀ ದಿನವನ್ನು ಕಳೆದುಕೊಂಡರೆ ನೀವು ನಿವ್ವಳ ಆಟದ ಸಮಯವನ್ನು ಕಳೆದುಕೊಳ್ಳುವುದು ಖಚಿತ. ಈ ಸಂದರ್ಭದಲ್ಲಿ ಮೀಸಲು ದಿನವನ್ನು ಬಳಸಲಾಗುತ್ತದೆ.

ಒಂದು ವೇಳೆ WTC ಫೈನಲ್ ಡ್ರಾದಲ್ಲಿ ಕೊನೆಗೊಂಡರೆ, ಎರಡೂ ತಂಡಗಳನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಯಾವುದೇ ಟೈ-ಬ್ರೇಕರ್ ಅನ್ನು ನಿಗದಿಪಡಿಸಲಾಗಿಲ್ಲ.

ಕಳೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಣಸಿದ್ದು ನ್ಯೂಜಿಲ್ಯಾಂಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

SCROLL FOR NEXT