ಗುಜರಾತ್ ತಂಡದ ವಿರುದ್ಧ ಉತ್ತರ ಪ್ರದೇಶ ತಂಡಕ್ಕೆ ಜಯ 
ಕ್ರಿಕೆಟ್

WPL 2023: ಗುಜರಾತ್ ವಿರುದ್ಧ ಯುಪಿ ವಾರಿಯರ್ಸ್ ಗೆ 3 ವಿಕೆಟ್ ಗಳ ರೋಚಕ ಗೆಲುವು

ನವಿ ಮುಂಬೈ ನ ಡಿವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದ ಡಬ್ಲ್ಯುಪಿಎಲ್ ನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ 3 ವಿಕೆಟ್ ಗಳ ಅಂತರದಿಂದ ಗೆದ್ದಿದೆ.

ಮುಂಬೈ: ನವಿ ಮುಂಬೈ ನ ಡಿವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದ ಡಬ್ಲ್ಯುಪಿಎಲ್ ನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ 3 ವಿಕೆಟ್ ಗಳ ಅಂತರದಿಂದ ಗೆದ್ದಿದೆ.

ಗುಜರಾತ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತ್ತು. ಉತ್ತರ ಪ್ರದೇಶ ತಂಡ 19.5 ಓವರ್ ಗಳಲ್ಲಿ ಜಯ ಗಳಿಸಿತು. ಉತ್ತರ ಪ್ರದೇಶ ತಂಡದ ಪರ ಆಡಿದ ಆಲ್ ರೌಂಡರ್ ಗ್ರೇಸ್ ಹ್ಯಾರಿಸ್  (ಆಸ್ಟ್ರೇಲಿಯಾ ತಂಡ) ಗೆಲುವಿನ ಸಿಕ್ಸರ್ ಬಾರಿಸಿ 59 ರನ್ ಗಳಿಸಿ ಅಜೇಯರಾಗಿ ಉಳಿದರು. 

ಈ ಟಿ20 ಲೀಗ್‌ ನಲ್ಲಿ ಗುಜರಾತ್ ತಂಡದ ಸತತ 2 ನೇ ಸೋಲು ಇದಾಗಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 143 ರನ್‌ಗಳಿಂದ ಸೋಲು ಕಂಡಿತ್ತು. ಗುಜರಾತ್ ಪರ ಆರಂಭಿಕ ಆಟಗಾರ್ತಿ ಎಸ್ ಮೇಘನಾ 24 ರನ್ ಗಳಿಸಿದರೆ, ಹರ್ಲೀನ್ ಡಿಯೋಲ್ 46 ರನ್ ಗಳ ಉತ್ತಮ ಇನ್ನಿಂಗ್ಸ್ ಆಡಿದರು. 

ರೋಚಕ ಪಂದ್ಯದಲ್ಲಿ ಕೊನೆಯ 3 ಓವರ್ ಗಳಲ್ಲಿ ಉತ್ತರ ಪ್ರದೇಶದ ಗೆಲುವಿಗೆ 53 ರನ್ ಗಳ ಅಗತ್ಯವಿತ್ತು. ಕಿಮ್ ಗಾರ್ತ್ ಅವರು ಬೌಲಿಂಗ್ ಮಾಡಿದ 18ನೇ ಓವರ್ ನಲ್ಲಿ ಹ್ಯಾರಿಸ್ ಸತತ 3 ಬೌಂಡರಿಗಳನ್ನು ಬಾರಿಸಿ ಉತ್ತರ ಪ್ರದೇಶ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಕೊನೆಯ ಓವರ್‌ನಲ್ಲಿ ತಂಡಕ್ಕೆ 19 ರನ್‌ಗಳ ಅಗತ್ಯವಿತ್ತು. ಹ್ಯಾರಿಸ್ ಸದರ್ ಲ್ಯಾಂಡ್ ಓವರ್ ನ ಮೊದಲ ಎಸೆತದಲ್ಲಿ ಸಿಕ್ಸರ್ ಭಾರಿಸಿದರು. 5ನೇ ಎಸೆತದಲ್ಲಿ ಹ್ಯಾರಿಸ್ ಮತ್ತೆ ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡ ಗೆಲುವಿನ ಸಂಭ್ರಮಾಚರಣೆ ಮಾಡುವಂತೆ ಮಾಡಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ