ಎಂಎಸ್ ಧೋನಿ 
ಕ್ರಿಕೆಟ್

ಮದುವೆಯ ಮಮತೆಯ ಕರೆಯೋಲೆಯಲ್ಲಿ ಕ್ರಿಕೆಟಿಗ ಎಂಎಸ್ ಧೋನಿ ಫೋಟೊ ಹಾಕಿಸಿದ ಕರ್ನಾಟಕದ ಅಭಿಮಾನಿ!

ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಗಳಿಸಿದವರು. ಭಾರತಕ್ಕೆ ಏಕದಿನ ಮತ್ತು ಟಿ20 ವಿಶ್ವಕಪ್ ತಂದುಕೊಟ್ಟ ಈ ಯಶಸ್ವಿ ನಾಯಕನಿಗೆ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನಿಗಳ ಕಾರಣದಿಂದಾಗಿಯೇ ಧೋನಿ ಸುದ್ದಿಯಾಗುತ್ತಿರುತ್ತಾರೆ.

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಗಳಿಸಿದವರು. ಭಾರತಕ್ಕೆ ಏಕದಿನ ಮತ್ತು ಟಿ20 ವಿಶ್ವಕಪ್ ತಂದುಕೊಟ್ಟ ಈ ಯಶಸ್ವಿ ನಾಯಕನಿಗೆ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನಿಗಳ ಕಾರಣದಿಂದಾಗಿಯೇ ಧೋನಿ ಸುದ್ದಿಯಾಗುತ್ತಿರುತ್ತಾರೆ.

ಈಗ ಇಂತದ್ದೇ ಅಭಿಮಾನಿಯೊಬ್ಬರು ತಮ್ಮ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಅಭಿಮಾನಿ ಕರ್ನಾಟಕದವರು ಎನ್ನುವುದು ವಿಶೇಷ. ಹೌದು, ಅಭಿಮಾನಿಯೊಬ್ಬರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಧೋನಿ ಫೋಟೊ ಹಾಕಿಸಿದ್ದು, ಆ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟ್ವಿಟರ್‌ ಬಳಕೆದಾರರೊಬ್ಬರು ಈ ಫೋಟೊವನ್ನು ಹಂಚಿಕೊಂಡಿದ್ದು, ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಅಭಿಮಾನಿಯೊಬ್ಬರು ಎಂಎಸ್ ಧೋನಿ ಅವರ ಫೋಟೊವನ್ನು ಪ್ರಿಂಟ್ ಮಾಡಿಸಿದ್ದಾರೆ ಎಂದಿದ್ದಾರೆ.

ಈ ಫೋಟೊ ಪ್ರಕಾರ, 'ಇದೇ ಮಾರ್ಚ್ 12ರಂದು ಭಾನುವಾರ ವಿವಾಹ ನಡೆಯಲಿದೆ. ಧೋನಿ ಅವರ ಅಭಿಮಾನಿಯ ಹೆಸರು ಶಮಂತ್ ಕುಮಾರ್ ಪಿ.ಜಿ (ಶಮಂತ್) ಎಂದಿದ್ದರೆ, ವಧುವಿನ ಹೆಸರು ಭವ್ಯಶ್ರೀ (ರಮ್ಯ) ಎಂದಿದೆ'. ಇದರ ಹೊರತಾಗಿ ಪತ್ರಿಕೆಯಲ್ಲಿ ಬೇರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

41 ವರ್ಷದ ಧೋನಿ ಸದ್ಯ ತಮ್ಮ ಕೊನೆಯ ಐಪಿಎಲ್ ಆವೃತ್ತಿಯನ್ನು ಆಡಲು ಸಜ್ಜಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಧೋನಿ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಗೌರವ. ತಮಿಳುನಾಡಿನ ಹಲವಾರು ಅಭಿಮಾನಿಗಳು ಈಗಾಗಲೇ ಧೋನಿ ಫೋಟೊವನ್ನು ಮದುವೆ ಪತ್ರಿಕೆಯಲ್ಲಿ ಮುದ್ರಿಸಿ ಅಭಿಮಾನ ಪ್ರದರ್ಶಿಸಿದ್ದಾರೆ.

2020ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯೊಬ್ಬರು ತಮ್ಮ ಮನೆಗೆ ಪೂರ್ತಿ ಅರಿಶಿಣದ ಬಣ್ಣ ಬಳಿದು, 'ಹೋಮ್ ಆಫ್ ಧೋನಿ ಫ್ಯಾನ್' ಎಂದು ಹೆಸರಿಟ್ಟಿದ್ದರು.  ತಮಿಳುನಾಡಿನ ಅರಂಗೂರ್‌ನಲ್ಲಿರುವ ಗೋಪಿ ಕೃಷ್ಣನ್ ಮತ್ತು ಅವರ ಕುಟುಂಬ ಈ ರೀತಿಯ ಅಭಿಮಾನ ತೋರಿಸಿ ಸಾಕಷ್ಟು ಸುದ್ದಿಯಾಗಿದ್ದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026, qualifier 1: ಟಾಸ್ ಗೆದ್ದ GT ಬೌಲಿಂಗ್ ಆಯ್ಕೆ; ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!

ಕರ್ನಾಟಕ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆ; ಜೂನ್ 18 ರಂದು ಮತದಾನ

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು ಮೆಟ್ರೋ ಸಂಚಾರ ವ್ಯತ್ಯಯ!

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ತಿರಸ್ಕಾರ: 'ಸುಪ್ರೀಂ' ತೀರ್ಪು ಸ್ವಾಗತಿಸಿದ ಡಿ.ಕೆ ಶಿವಕುಮಾರ್

SCROLL FOR NEXT