ಆರ್ ಸಿಬಿಗೆ ಜಯ 
ಕ್ರಿಕೆಟ್

WPL: ಸೋಫೀ ಡಿವೈನ್ ಅಮೋಘ ಬ್ಯಾಟಿಂಗ್, ಗುಜರಾತ್ ವಿರುದ್ಧ ಆರ್ ಸಿಬಿ ಮಹಿಳೆಯರಿಗೆ 8 ವಿಕೆಟ್ ಗಳ ಭರ್ಜರಿ ಜಯ

ಮಹಿಳೆಯ ಪ್ರೀಮಿಯರ್ ಲೀಗ್ ನಲ್ಲಿ ಗೆಲುವಿನ ಟ್ರಾಕ್ ಗೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಜಯ ದಾಖಲಿಸಿದ್ದು, ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್ ಭರ್ಜರಿ  ಜಯ ದಾಖಲಿಸಿದೆ.

ಮುಂಬೈ: ಮಹಿಳೆಯ ಪ್ರೀಮಿಯರ್ ಲೀಗ್ ನಲ್ಲಿ ಗೆಲುವಿನ ಟ್ರಾಕ್ ಗೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಜಯ ದಾಖಲಿಸಿದ್ದು, ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್ ಭರ್ಜರಿ  ಜಯ ದಾಖಲಿಸಿದೆ.

ಗುಜರಾತ್ ಜೈಂಟ್ಸ್ ನೀಡಿದ್ದ 189 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಆರ್ ಸಿಬಿ ಮಹಿಳಾ ತಂಡ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ (99ರನ್) ಮತ್ತು ನಾಯಕಿ ಸ್ಮೃತಿ ಮಂದಾನ (37 ರನ್), ಹೀದರ್ ನೈಟ್ (ಅಜೇಯ 22 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇನ್ನೂ 27 ಎಸೆತಗಳು ಬಾಕಿ ಇರುವಂತೆಯೇ ನಿಗಧಿತ ಗುರಿ ತಲುಪಿ ಜಯ ಸಾಧಿಸಿತು.

ಆರ್ ಸಿಬಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಸೋಫಿ ಡಿವೈನ್ ಕೇವಲ 36 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 99ರನ್ ಸಿಡಿಸಿ ಶತಕ ವಂಚಿತರಾದರು. ಅವರು ಇಂದು ಗಳಿಸಿದ 99 ರನ್ ಗಳು ಮಹಿಳಾ ಪ್ರೀಮಿಯರ್ ಲೀಗ್ ಆಟಗಾರ್ತಿಯೊಬ್ಬರ ವೈಯುಕ್ತಿಕ ಗರಿಷ್ಟ ರನ್ ಗಳಿಕೆಯಾಗಿದೆ.

ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡ ನಿಗಧಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು. ಗುಜರಾತ್ ಪರ ವೊಲ್ವಾರ್ಡ್ಟ್ 68 ರನ್ ಸಿಡಿಸಿದರೆ, ಗಾರ್ಡ್ನರ್ 41 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಆದರೂ ಈ ಬೃಹತ್ ಮೊತ್ತದ ಹೊರತಾಗಿಯೂ ಆರ್ ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಟೂರ್ನಿಯಲ್ಲಿ ಆರ್ ಸಿಬಿ 2ನೇ ಗೆಲುವು ದಾಖಲಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT