ಆರ್ ಸಿಬಿ ಆಟಗಾರರು 
ಕ್ರಿಕೆಟ್

ಐಪಿಎಲ್ 2023: ಲಕ್ನೋ ವಿರುದ್ಧ 18 ರನ್ ಗಳಿಂದ ಆರ್ ಸಿಬಿಗೆ ಗೆಲುವು!

ಲಖನೌನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ 2023ರ ಆವೃತ್ತಿಯ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿಬಿ 18 ರನ್ ಗಳಿಂದ ಗೆಲುವು ಸಾಧಿಸಿದೆ.

ಲಖನೌ: ಉತ್ತರ ಪ್ರದೇಶದ ಲಖನೌನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ 2023ರ ಆವೃತ್ತಿಯ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿಬಿ 18 ರನ್ ಗಳಿಂದ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ  ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್  ಕಲೆಹಾಕಿತು. ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ 31 ಫಾಪ್ ಡು ಪ್ಲೆಸಿಸ್  44, ದಿನೇಶ್ ಕಾರ್ತಿಕ್ 16 ರನ್ ಗಳಿಸಿದರು. ಆದರೆ, ಈ ಆಟಗಾರರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಎರಡಂಕಿ ದಾಟಲಿಲ್ಲ. ಇದರಿಂದಾಗಿ ಆರ್ ಸಿಬಿ 126 ರನ್ ಗಳಿಸಲಷ್ಟೇ ಶಕ್ತವಾಯಿತು. 

ಲಕ್ನೋ ಸೂಪರ್ ಜೈಂಟ್ಸ್ ಪರ ನವೀನ್ ಉಲ್ ಹಕ್ 3 ವಿಕೆಟ್ ಪಡೆದರೆ,  ರವಿ ಬಿಷ್ಣೋಯ್ ಹಾಗೂ ಅಮಿತ್ ಮಿಶ್ರಾ ತಲಾ 2, ಕೃಷ್ಣಪ್ಪ ಗೌತಮ್ ಒಂದು ವಿಕೆಟ್ ಪಡೆದರು.

ಆರ್ ಸಿಬಿ ನೀಡಿದ 127 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ 19.5 ಓವರ್ ಗಳಲ್ಲಿ 108 ರನ್ ಮಾತ್ರ ಗಳಿಸಿತು. ಇದರಿಂದಾಗಿ ಆರ್ ಸಿಬಿ 18 ರನ್ ಗಳ ಅಂತರದಿಂದ ಲಕ್ನೋ ತಂಡವನ್ನು ಮಣಿಸಿತು. ಆರ್ ಸಿಬಿ ಪರ ಜೊಸ್ ಹೆಜೆಲ್ ವುಡ್  ಹಾಗೂ ಕರ್ಣ ಶರ್ಮ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಗ್ಲೇನ್ ಮ್ಯಾಕ್ಸ್ ವೆಲ್, ಹರ್ಷಲ್ ಪಟೇಲ್  ತಲಾ 1 ವಿಕೆಟ್ ಪಡೆದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel