ಕ್ರಿಕೆಟ್

ವಿಶ್ವಕಪ್ 2023: WTC ಫೈನಲ್‌ ವೇಳೆ ವೇಳಾಪಟ್ಟಿ, ಸ್ಥಳಗಳು ಪ್ರಕಟ- ಜಯ್ ಶಾ

Nagaraja AB

ಅಹಮದಾಬಾದ್:  ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ವೇಳೆಯಲ್ಲಿ ಮುಂಬರುವ 50 ಓವರ್‌ಗಳ ವಿಶ್ವಕಪ್‌ 2023 ರ ವೇಳಾಪಟ್ಟಿ ಮತ್ತು ಸ್ಥಳಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶನಿವಾರ ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆ ನಂತರ ಮಾತನಾಡಿದ ಜಯ್ ಶಾ, ವಿಶ್ವಕಪ್ ಮುಂಚೆಯೇ ಏಷ್ಯಾ ಕಪ್ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ವೇಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಸ್ಥಳಗಳನ್ನು ನಿರ್ಧರಿಸಲಾಗುತ್ತದೆ. ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಸಹ ಬಹಿರಂಗಪಡಿಸಲಾಗುವುದು ಎಂದರು.

ಏಷ್ಯಾ ಕಪ್ ಆಡುವ ರಾಷ್ಟ್ರಗಳು ಮತ್ತು ಅಸೋಸಿಯೇಟ್ ರಾಷ್ಟ್ರಗಳೊಂದಿಗೆ ಸಭೆ ನಡೆಸಿದ ನಂತರ ಏಷ್ಯಾ ಕಪ್ 2023 ರ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ ಎಂದು ಅವರು, ಅಭಿಮಾನಿಗಳಿಗೆ ಮೂಲ ಸೌಕರ್ಯಗಳ ಸುಧಾರಣೆಗಾಗಿ 15 ಕ್ರೀಡಾಂಗಣ ಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ, ಅವುಗಳನ್ನು ಗಮನದಲ್ಲಿಟ್ಟುಕೊಂಡು ನಂತರದ ಹಂತದಲ್ಲಿ ಹೆಚ್ಚಿನ ಕ್ರೀಡಾಂಗಣಗಳನ್ನು ಸೇರಿಸಲಾಗುವುದು  ಎಂದು ಬಿಸಿಸಿಐ ಕಾರ್ಯದರ್ಶಿ ಮಾಹಿತಿ ನೀಡಿದರು.

ವಿಶ್ವಕಪ್ ಮುಂಚಿತವಾಗಿ ಭಾರತ- ಅಪ್ಘಾನಿಸ್ತಾನ ನಡುವೆ ಸಿಮೀತ ಓವರ್ ಗಳ ಸರಣಿಗೆ ಪ್ರಸ್ತಾಪಿಸಲಾಗಿದೆ. ಆದರೆ, ದಿನಾಂಕ ಮತ್ತು ಸ್ಥಳಗಳನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಅವರು ತಿಳಿಸಿದರು. 

SCROLL FOR NEXT