ಕ್ರಿಕೆಟ್

ಐಪಿಎಲ್ 2023: ಅಪಾಯಕಾರಿ ಗಿಲ್ ಗೆ ಅತಿ ವೇಗದ ಸ್ಟಂಪಿಂಗ್ ಮೂಲಕ ಪೆವಿಲಿಯನ್ ದಾರಿ ತೋರಿದ ಧೋನಿ

Srinivasamurthy VN

ಅಹ್ಮದಾಬಾದ್: ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದ ಗುಜರಾತ್ ತಂಡದ ಸ್ಫೋಟಕ ಬ್ಯಾಟರ್ ಶುಭ್ ಮನ್ ಗಿಲ್ ಗೆ ಚೆನ್ನೈ ತಂಡದ ನಾಯಕ ಧೋನಿ ಅದ್ಭುತ ಸ್ಟಂಪಿಂಗ್ ಮೂಲಕ ಪೆವಿಲಿಯನ್ ದಾರಿ ತೋರಿಸಿದ್ದು, ಈ ಮಿಂಚಿನ ಸ್ಟಂಪಿಂಗ್ ವಿಡಿಯೋ ವ್ಯಾಪಕ ವೈರಲ್ ಅಗುತ್ತಿದೆ.

ಹೌದು.. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಗುಜರಾತ್ ತಂಡದ ಸ್ಫೋಟಕ ಬ್ಯಾಟರ್ ಶುಭ್ ಮನ್ ಗಿಲ್ ರನ್ನು ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಮಿಂಚಿನ ಸ್ಟಂಪಿಂಗ್ ಮೂಲಕ ಔಟ್ ಮಾಡಿದ್ದಾರೆ. 

ಕ್ರೀಸ್ ಗೆ ಬಂದ ಶುಭಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ ಆರಂಭದಿಂದಲೇ ಅಬ್ಬರಿಸಲು ಆರಂಭಿಸಿದರು. ಕೇವಲ 20 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 39 ರನ್ ಗಳಿಸಿ ಗಿಲ್ ಅಪಾಯಕಾರಿಯಾಗಿ ಪರಿಣಮಿಸಿದ್ದರು. ಇನ್ನಿಂಗ್ಸ್ ಆರಂಭದಲ್ಲಿ ಗಿಲ್ ನೀಡಿದ ಕ್ಯಾಚ್‌ನ್ನು ದೀಪಕ್ ಚಹಾರ್ ಡ್ರಾಪ್  ಮಾಡಿದ್ದು ಚೆನ್ನೈ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. 3 ರನ್ ಗಳಿಸಿದ್ದಾಗ ಗಿಲ್ ಕ್ಯಾಚ್ ಅನ್ನು ದೀಪಕ್ ಚಹಾರ್ ಕೈಬಿಟ್ಟಿದ್ದರು. ಬಳಿಕ ಗಿಲ್ ಕೇವಲ 20 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 39 ರನ್ ಗಳಿಸಿದರು.

ಈ ಹಂತದಲ್ಲಿ ಬೌಲಿಂಗ್ ನಲ್ಲಿ ಬದಲಾವಣೆ ತಂದ ಚೆನ್ನೈ ನಾಯಕ ಧೋನಿ ಅದರಲ್ಲಿ ಯಶಸ್ಸು ಕೂಡ ಆದರು. ಇನ್ನೇನು ಶತಕ ಸಿಡಿಸುತ್ತೇನೆ ಎಂಬಂತೆ ಗಿಲ್ ಬ್ಯಾಟಿಂಗ್ ಸಾಗಿತು. ಆದರೆ ಮಹೇಂದ್ರ ಸಿಂಗ್ ಧೋನಿ ಅವರ ಸೂಪರ್ ಕೀಪಿಂಗ್‌ನಿಂದಾಗಿ ಗಿಲ್ ಸ್ಟಂಪ್ ಔಟ್ ಆದರು. ಅವರ ಮಿಂಚಿನ ವೇಗದ ಸ್ಟಂಪಿಂಗ್ ಈ ಋತುವಿನ ಹೈಲೈಟ್ ಆಗಿದೆ. ಜಡೇಜಾ ಎಸೆದ 7ನೇ ಓವರ್‌ನ ಐದನೇ ಎಸೆತವನ್ನು ಫ್ರಂಟ್ ಫೂಟ್‌ನಲ್ಲಿ ಆಡಲು ಪ್ರಯತ್ನಿಸಿದಾಗ ಚೆಂಡು ತಿರುಗುತ್ತಲೇ ಗಿಲ್‌ಗೆ ಬಡಿದು ಕೀಪರ್‌ ಧೋನಿ ಕೈ ಸೇರಿತು. ಅದೇ ವೇಳೆಯಲ್ಲಿ ಕೊಂಚ ಸಮತೋಲನ ಕಳೆದುಕೊಂಡ ಗಿಲ್ ಕ್ರೀಸ್ ನಿಂದ ಹೊರ ಬಂದರು.

ಆದರೆ ಇಲ್ಲಿ ಗಿಲ್ ಗೆ ಯಾವುದೇ ಸಮಯ ನೀಡದ ಧೋನಿ ಕ್ಷಣಮಾತ್ರದಲ್ಲಿ ಬೇಲ್ ಎಗರಿಸಿದ್ದರು. ಧೋನಿ ಅವರು ಗಿಲ್​ ಅವರನ್ನು ಕೇವಲ 0.12 ಸೆಕೆಂಡ್​ನಲ್ಲಿ ಅಂದರೆ 1 ಸೆಕೆಂಡ್ ಗಿಂತ ಕಡಿಮೆ ಸಮಯದಲ್ಲಿ ಔಟ್​ ಮಾಡುವ ಮೂಲಕ ಮತ್ತೊಮ್ಮೆ ಮಿಂಚಿನ ವೇಗದಲ್ಲಿ ಸ್ಟಂಫ್ ​ಔಟ್​ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕ್ಯಾಪ್ಟನ್ ಕೂಲ್ 23ರ ಹರೆಯದ ಯುವಕನನ್ನು ಕಣ್ಣು ಮಿಟುಕಿಸುವುದರೊಳಗೆ ಸ್ಟಂಫ್​ ಔಟ್​ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ಕೀಪಿಂಗ್​ ಬಗ್ಗೆ ಸಾಬೀತುಪಡಿಸಿದರು.

ಇದರೊಂದಿಗೆ ಧೋನಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ಲ್ಯಾಶ್​ ಎಂಬ ಅಡಿಬರಹದೊಂದಿಗೆ ಸಖತ್​ ಟ್ರೆಂಡಿಗ್​​ನಲ್ಲಿದ್ದಾರೆ. ಇದಕ್ಕೂ ಮುನ್ನ ಧೋನಿ ವೃತ್ತಿಜೀವನದಲ್ಲಿ 0.08 ಸೆಕೆಂಡ್​ನಲ್ಲಿ ಸ್ಟಂಫ್​ಔಟ್​ ಮಾಡಿದ್ದು, ಸಾರ್ವಕಾಲಿಕ ದಾಖಲೆ ಆಗಿದೆ. ಎಂಎಸ್ ಧೋನಿ ಟಿ20ಯಲ್ಲಿ ಶುಭಮನ್ ಗಿಲ್ ಅವರನ್ನು 300ನೇ ಸ್ಟಂಫ್​ ಔಟ್​ ಮಾಡುವ ಮೂಲಕ ಹೊಸ ದಾಖಲೆ ಬರೆದರು. ಅಲ್ಲದೇ ಧೋನಿ ಇಂದು ತಮ್ಮ 250ನೇ ಐಪಿಎಲ್ ಮ್ಯಾಚ್​ ಆಡುತ್ತಿದ್ದಾರೆ.

SCROLL FOR NEXT