ಕ್ರಿಕೆಟ್

ICC Cricket WorldCup 2023: ಭಾರತ vs ಶ್ರೀಲಂಕಾ, ಟೀಂ ಇಂಡಿಯಾಗೆ ಜಾಗತಿಕ 4ನೇ ದಾಖಲೆಯ ಜಯ

Srinivasamurthy VN

ಮುಂಬೈ: ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣ (Wankhede Stadium)ದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಸಿಕ್ಕ 302 ರನ್ ಗಳ ಜಯ ಜಾಗತಿಕ ಏಕದಿನ ಕ್ರಿಕೆಟ್ ನಲ್ಲಿ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದು, ರನ್ ಗಳ ಲೆಕ್ಕಾಚಾರದಲ್ಲಿ ಇದು 4ನೇ ಅತೀ ದೊಡ್ಡ ಗೆಲುವಾಗಿದೆ.

ಹೌದು.. ಭಾರತ (Team India) ನೀಡಿದ್ದ 358 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಶ್ರೀಲಂಕಾ (SriLanka) ತಂಡ ಕೇವಲ 19.4 ಓವರ್ ನಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತ ವಿರುದ್ಧ 302ರನ್ ಗಳ ಹೀನಾಯ ಸೋಲು ಕಂಡಿತ್ತು. ಈ ದಾಖಲೆಯ ಜಯದ ಮೂಲಕ ಭಾರತ ತಂಡ ಜಾಗತಿಕ ಕ್ರಿಕೆಟ್ ನಲ್ಲಿ ದಾಖಲೆ ನಿರ್ಮಿಸಿದ್ದು, ಇದು ಜಾಗತಿಕ ಕ್ರಿಕೆಟ್ ನಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ 4ನೇ ಅತೀ ದೊಡ್ಡ ಗೆಲುವಾಗಿದೆ.

ಈ ಹಿಂದೆ ಅಂದರೆ ಇದೇ ವರ್ಷ ತಿರುವನಂತಪುರದಲ್ಲಿ ಭಾರತ ತಂಡ ಇದೇ ಶ್ರೀಲಂಕಾ ತಂಡವನ್ನು 317ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದು ಜಾಗತಿಕ ಕ್ರಿಕೆಟ್ ನಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ ದಾಖಲಾದ ಅತೀ ದೊಡ್ಡ ಗೆಲುವಾಗಿದೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡ ಇದ್ದು, ಇದೇ ವಿಶ್ವಕಪ್ ಟೂರ್ನಿ (ICC Cricket WorldCup 2023)ಯಲ್ಲಿ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ 309 ರನ್ ಗಳ ಅಂತರದ ಗೆಲುವು ಸಾಧಿಸಿತ್ತು. ಇದು ಜಾಗತಿಕ ಕ್ರಿಕೆಟ್ ನಲ್ಲಿ ದಾಖಲಾದ 2ನೇ ಅತೀ ದೊಡ್ಡ ಗೆಲುವಾಗಿದೆ.

ನಂತರದ ಸ್ಥಾನದಲ್ಲಿ ಜಿಂಬಾಬ್ವೆ ಇದ್ದು, ಇದೇ ವರ್ಷ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಯುಎಇ ವಿರುದ್ಧ ಜಿಂಬಾಬ್ವೆ 304ರನ್ ಗಳ ಅಂತರದಲ್ಲಿ ಜಯ ಗಳಿಸಿತ್ತು. ಇದು ಜಾಗತಿಕ ಕ್ರಿಕೆಟ್ ನಲ್ಲಿ ದಾಖಲಾದ 3ನೇ ಅತೀ ದೊಡ್ಡ ಗೆಲುವಾಗಿದೆ.

Biggest wins in ODIs (by runs)
317 - IND vs SL, Trivandrum 2023
309 - AUS vs NED, Delhi, 2023 (WC)
304 - ZIM vs UAE, Harare, 2023
302 - IND vs SL, Wankhede, today*
290 - NZ vs IRE, Aberdeen 2008
275 - AUS vs AFG, Perth 2015 (WC)

 

SCROLL FOR NEXT