ಸಂಗ್ರಹ ಚಿತ್ರ 
ಕ್ರಿಕೆಟ್

ಇಸ್ಲಾಂ ಸೇರಲು ಮನಸ್ಸು ಮಾಡಿದ್ದರು ಹರ್ಭಜನ್ ಸಿಂಗ್: ಇಂಜಮಾಮ್ ಹೇಳಿಕೆಗೆ ಭಜ್ಜಿ ತೀವ್ರ ಕಿಡಿ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇಸ್ಲಾಂಗೆ ಮತಾಂತರವಾಗುವ ಹತ್ತಿರವಾಗುತ್ತಿದ್ದರು ಎಂಬ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್‌ ಹೇಳಿಕೆಗೆ ಭಜ್ಜಿ ತೀವ್ರವಾಗಿ ಕಿಡಿಕಾರಿದ್ದಾರೆ.

ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇಸ್ಲಾಂಗೆ ಮತಾಂತರವಾಗುವ ಹತ್ತಿರವಾಗುತ್ತಿದ್ದರು ಎಂಬ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್‌ ಹೇಳಿಕೆಗೆ ಭಜ್ಜಿ ತೀವ್ರವಾಗಿ ಕಿಡಿಕಾರಿದ್ದಾರೆ.
    
ಸಾಮಾಜಿಕ ಜಾಲತಾಣವಾದ ಎಕ್ಸ್‌(ಟ್ವಿಟರ್‌)ನಲ್ಲಿ ಕಟು ಶಬ್ದಗಳಲ್ಲಿ ಪಾಕಿಸ್ತಾನದ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಿಯನ್ನು ಹರ್ಭಜನ್ ಸಿಂಗ್ ಲೇವಡಿ ಮಾಡಿದ್ದಾರೆ.

ಇಂಜಮಾಮ್ ಉಲ್ ಹಕ್ ಅವರು ಮಾತನಾಡಿರುವ ವಿಡಿಯೋಗೆ ಎಕ್ಸ್‌ ಮೂಲಕವೇ ಪ್ರತಿಕ್ರಿಯೆ ನೀಡಿರುವ ಹರ್ಭಜನ್ ಸಿಂಗ್, "ಇವರು ಯಾವ ನಶೆಯಲ್ಲಿ ಮಾತನಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ. ನಾನೊಬ್ಬ ಹೆಮ್ಮೆಯ ಭಾರತೀಯ ಹಾಗೂ ಹೆಮ್ಮೆಯ ಸಿಖ್ ಆಗಿದ್ದೇನೆ. ಈ ಕೆಲಸವಿಲ್ಲದವರು (ಅಸಂಬದ್ಧ ಜನ) ಏನು ಬೇಕಾದರೂ ಮಾತನಾಡುತ್ತಾರೆ" ಎಂದು ಕಿಡಿಕಾರಿದ್ದಾರೆ.

ವಿಡಿಯೋದಲ್ಲಿ ಇಂಜಮಾಮ್ ಉಲ್ ಹಕ್, ಪಾಕಿಸ್ತಾನದ ಪ್ರಖ್ಯಾತ ಇಸ್ಲಾಮಿಕ್ ಮೌಲ್ವಿಯಾದ ಮೌಲಾನ ತಾರಿಖ್ ಜಮೀಲ್ ಅವರ ಬಗ್ಗೆ ಮಾತನಾಡುತ್ತಾ, "ನಾವು ಕ್ರಿಕೆಟ್ ಆಡುವ ಸಂದರ್ಭದಲ್ಲಿ ಮೌಲಾನ ತಾರಿಖ್ ಜಮೀಲ್ ನಮ್ಮ ಜತೆ ಮಾತನಾಡುತ್ತಿದ್ದರು. ಸಂಜೆ ವೇಳೆ ಆಟಗಾರರಿಗೆ ಇಸ್ಲಾಮಿನ ಪ್ರವಚನ ನೀಡುತ್ತಿದ್ದರು. ನಾವು ಆ ಸಂದರ್ಭದಲ್ಲಿ ಇರ್ಫಾನ್ ಪಠಾಣ್, ಮೊಹಮ್ಮದ್ ಕೈಫ್ ಹಾಗೂ ಜಹೀರ್ ಖಾನ್ ಅವರಿಗೆ ನಮ್ಮ ಜೊತೆ ನಮಾಜ್ ಮಾಡಲು ಆಹ್ವಾನಿಸುತ್ತಿದ್ದೆವು. ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಸೇರಿದಂತೆ ಭಾರತದ ಇತರೇ ಆಟಗಾರರು ಬರುತ್ತಿದ್ದರು. ಅವರು ನಮಾಜ್ ಮಾಡುತ್ತಿರಲಿಲ್ಲ, ಆದರೆ, ತಾರಿಖ್ ಜಮೀಲ್ ಅವರ ಪ್ರವಚನಗಳನ್ನು ಕೇಳುತ್ತಿದ್ದರು.

ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ನನ್ನ ಬಳಿ ಬಂದು ನಾನೂ ಕೂಡಾ ಮೌಲಾನ ಅವರ ಮಾತುಗಳ ಕೇಳಬೇಕು ಅನಿಸುತ್ತಿದೆ ಎಂದು ಹೇಳಿದ್ದರು ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದರು.  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!